ಬಸ್ ಟೈರ್ ಸ್ಫೋಟ: 20 ಜನರ ಸ್ಥಿತಿ ಗಂಭೀರ
Team Udayavani, Feb 11, 2019, 6:51 AM IST
ಸೇಡಂ: ಈಶಾನ್ಯ ಕರ್ನಾಟಕ ಸಾರಿಗೆ ಬಸ್ ಚಕ್ರ ನ್ಪೋಟಗೊಂಡ ಪರಿಣಾಮ 20ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಪಟ್ಟಣದ ಶೆಟ್ಟಿ ಹೂಡಾ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
20 ಜನರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ. ಕಲಬುರಗಿಯಿಂದ ಸೇಡಂ ಕಡೆಗೆ ಹೊರಟಿದ್ದ ಸುಮಾರು 65ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದ ಬಸ್‌ನ ಟೈರ್ ಶೆಟ್ಟಿ ಹೂಡಾ ಗೇಟ್ ದಾಟಿದ ಬಳಿಕ ಸ್ಫೋಟಗೊಂಡಿದೆ. ಎದುರಿಗೆ ಬರುತ್ತಿದ್ದ ಸಿಮೆಂಟ್ ಹೊತ್ತ ಲಾರಿಗೆ ಡಿಕ್ಕಿ ಹೊಡೆದು ನಂತರ ಕೆಲ ದೂರ ಹೋಗಿ ನಿಂತಿತ್ತು.
ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿ ಹೊರಬಂದಿದ್ದು, ಕೆಲ ಸ್ಥಳೀಯರು ಗಾಯಾಳುಗಳನ್ನು ಹೊರತೆಗೆದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗಂಭೀರ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅರ್ಚನಾ ವೆಂಕಟೇಶ ಕುಲಕರ್ಣಿ, ವೆಂಕಟೇಶ ಮಲ್ಲರಾವ್, ಗೋವಿಂದ ಶಂಕರ ರಾಠೊಡ, ಮಲ್ಲಯ್ಯ ಭೀಮಯ್ಯ ಗುತ್ತೇದಾರ, ಗೌತಮ ಗುರುಶಾಂತ ಕೊಟ್ಟರಗಿ, ಸುಮಿತ್ರಾ ಸಾಯಪ್ಪ ದಂಗೆನೋರ್, ಬಸವರಾಜ ಶಿವಶಂಕರ, ಖಾಸಿಂ ಪಟೇಲ ಇಮಾಮಸಾಬ, ಪರವೀನ ಮುಸ್ತಫಾ ಪಟೇಲ, ಜಾವೀದ ಹಸನ ಪಟೇಲ, ರವಿಕುಮಾರ ಶಂಕರ ಮುನ್ನೂರ, ಶಿವಕುಮಾರ ಮಲ್ಲಿಕಾರ್ಜುನ ತೊಟ್ನಳ್ಳಿ, ಮಸ್ತಾನ ಇಮಾಮಸಾಬ ಮುಲ್ಲಾ, ಮಲ್ಲಿಕಾರ್ಜುನ ಬಸವರಾಜ ಮೈದಾ, ನಾಗರಾಜ ಮುರಗಣ್ಣಾ ಭಯ್ನಾರ ತೀವ್ರ ಗಾಯಗೊಂಡಿದ್ದಾರೆ. ಸೌರಭ ಶ್ರೀನಿವಾಸ ಕುಲಕರ್ಣಿ ಎನ್ನುವನ ತಲೆಗೆ ಗಂಭೀರ ಪೆಟ್ಟಾಗಿದೆ. ಸ್ಥಳಕ್ಕೆ ಸಿಪಿಐ ಶಂಕರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.