![City](https://www.udayavani.com/wp-content/uploads/2025/02/City-1-415x249.jpg)
![City](https://www.udayavani.com/wp-content/uploads/2025/02/City-1-415x249.jpg)
Team Udayavani, Aug 20, 2019, 11:11 AM IST
ಕಲಬುರಗಿ: ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಸಾಧಕ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.
ಕಲಬುರಗಿ: ಬದಲಾದ ಪರಿಸ್ಥಿತಿಯಲ್ಲಿ ಪೋಟೋಗ್ರಾಫಿ ಹೆಚ್ಚಿನ ಬಂಡವಾಳ ಹೂಡಿಕೆ ಉದ್ಯೋಗವಾಗಿ ಪರಿಣಮಿಸಿದೆ. ಹೀಗಾಗಿ ಕ್ಯಾಮೆರಾ ಇನ್ನಿತರ ಉನ್ನತ ತಂತ್ರಜ್ಞಾನದ ಸಲಕರಣೆಗಳ ಮೇಲೆ ಹೂಡಿಕೆ ಮಾಡುವ ಜತೆಗೆ ಛಾಯಾಗ್ರಹಣ ಕೌಶಲಗಳನ್ನು ಹೆಚ್ಚಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಛಾಯಾಗ್ರಾಹಕರ ತರಬೇತುದಾರ ಹೊಸಪೇಟೆಯ ಖಾಜಾಪೀರ್ ಹೇಳಿದರು.
ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜಿಲ್ಲಾ ಛಾಯಾಗ್ರಾಹಕರ ಸಂಘ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಾಗೂ ಫೋಟೋ ಗ್ರಾಫಿಯಲ್ಲಿ ಆವಿಷ್ಕಾರಗೊಂಡ ಹೊಸ ತಂತ್ರಜ್ಞಾನ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನ ಯುಗದಲ್ಲಿ ಅಪ್‌ಡೇಟ್ ಆಗಿ ತಂತ್ರಜ್ಞಾನಗಳ ಲಾಭ ಪಡೆದುಕೊಳ್ಳಬೇಕು. ಕಡಿಮೆ ಬೆಲೆ ಕ್ಯಾಮೆರಾಗಳಲ್ಲೂ ಅತ್ಯುತ್ತಮ ಚಿತ್ರ ತೆಗೆಯಬಹುದು. ಚಿತ್ರ ಸೆರೆ ಹಿಡಿದ ನಂತರ ತಂತ್ರಜ್ಞಾನದ ಸ್ಪರ್ಶ ನೀಡಿದರೇ ಮಾದರಿ ಚಿತ್ರಗಳನ್ನು ಪಡೆಯಬಹುದು. ಅದಕ್ಕಾಗಿ ಆಸಕ್ತಿ ಬೆಳೆಸಿಕೊಂಡು ಕಲೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಹ್ಯಾಕರ್ಗಳು ಬಿಡುವ ವೈರಸ್‌ಗಳಿಂದಾಗಿ ಬೆಲೆ ಬಾಳುವ ಫೋಟೋಗಳು ಹಾಳಾಗಿ ಹೋಗುತ್ತಿವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. 200 ದೇಶಗಳಲ್ಲಿ ಫೋಟೋಗ್ರಾಫರ್‌ಗಳು ರ್ಯಾನ್‌ಸಮ್‌ವೇರ್ ಎಂಬ ವೈರಸ್ ಕಾಟದಿಂದ ತತ್ತರಿಸಿ ಹೋಗಿದ್ದಾರೆ. ಇದೊಂದು ಸೈಬರ್ ಕ್ರೈಂ ಆಗಿದ್ದು, ಹೀಗಾಗಿ ಜಾಗೃತಿ ಮೂಡಿಸಲು ಶ್ರಮಿಸಲಾಗುತ್ತಿದೆ. ಸೈಬರ್ ಕ್ರೈಂ ಜಾಗೃತಿ ಸಮಿತಿ ಸಹ ರಚಿಸಲಾಗುತ್ತಿದೆ ಎಂದು ಹೇಳಿದರು.ಪತ್ರಕರ್ತ ಬಾಬುರಾವ ಯಡ್ರಾಮಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಕಾರ್ಯದರ್ಶಿ ಗುಂಡೇರಾವ ಭೂಸನೂರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಅಯಾಜುದ್ದೀನ್ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮತ್ತು ನಂದಕುಮಾರ ನಿರೂಪಿಸಿದರು.
ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಖಾಜಾಪೀರ್ ವಿಶೇಷ ಉಪನ್ಯಾಸ ನೀಡಿದರು. ಬಾಬುರಾವ ಸ್ವಾಮಿ, ಸಂಜಯ ಸೇರಿದಂತೆ ನಗರ ಮತ್ತು ಜಿಲ್ಲೆಯ ಛಾಯಾಗ್ರಾಹಕರು ಪಾಲ್ಗೊಂಡಿದ್ದರು.
ಫೋಟೋಗ್ರಾಫಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಛಾಯಾಚಿತ್ರಗಾರರಾದ ಮಹ್ಮದಅಲಿ ಮಹ್ಮದ್ ಇಸ್ಮಾಯಿಲ್ ಫೂಲ್ವಾಲೆ (ಸೂಪರ್ ಸ್ಟುಡಿಯೊ), ರುದ್ರಪ್ಪ ಎಸ್.ಪಾಟೀಲ್ (ಶಿವರಾಜ ಸ್ಟುಡಿಯೊ), ಫೋಟೋ ಕಲಾವಿದ ಜಗನ್ನಾಥ ವಿ.ಡಿಗ್ಗಿ, ಶ್ರೀಮಂತ ಶೀಲವಂತ (ತುಳಸಿ ಸ್ಟುಡಿಯೊ), ವಿಜಯಕುಮರ ಎಸ್. ಪುರಾಣಿಕಮಠ (ಸೂರಜ್ ಫೋಟೋ ಪ್ಲಾಷ್ ಕಲರ್ ಲ್ಯಾಬ್) ಹಾಗೂ ಚಂದನ ಕಲರ್ ಲ್ಯಾಬ್‌ನ ಎಂ.ಎನ್.ಎಸ್.ಶಾಸ್ತ್ರೀ ಮತ್ತು ರತ್ನಾಕರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಜೇಶ ಮಹಿಂದ್ರಕರ್, ಖಜಾಂಚಿ ನಂದಕುಮರ ಜಾಕ್ನಳ್ಳಿ,ಅಡಳಿತ ಮಂಡಳಿ ಸದಸ್ಯರಾದ ರಾಜೇಂದ್ರಸ್ವಾಮಿ ಬಾಬುರಾವ ಅಂತೂರಮಠ, ನರೇಶ ಮಹಿಂದ್ರಕರ್, ರಾಜಶೇಖರ ಹತ್ತೂರೆ, ಚಂದ್ರಶೇಖರ ಮಡಿವಾಳ,ಮಲ್ಲಿಕಾರ್ಜುನ ಲಿಗಾಡೆ, ಅನಿಲ್ ಮಹಿಂದ್ರಕರ್, ಲಾರಾ ದೇಸಾಯಿ ಪಾಲ್ಗೊಂಡಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
You seem to have an Ad Blocker on.
To continue reading, please turn it off or whitelist Udayavani.