ಕ್ಯಾಶ್‌ಲೆಸ್ ವ್ಯವಹಾರ ತಂದಿಟ್ಟ ಫಜೀತಿ
Team Udayavani, Feb 7, 2018, 12:01 PM IST
ಕಲಬುರಗಿ: ಕೇಂದ್ರ ಸರಕಾರ ಪೆಟ್ರೋಲ್ ಸೇರಿದಂತೆ ಇತರೆ ಬೆಲೆ ಏರಿಕೆ ಮಾಡಿ ಜನರ ನಿದ್ದೆಗೆಡಿಸಿಲ್ಲ.. ಬದಲಿಗೆ ಕ್ಯಾಸ್‌ಲೆಸ್ ವ್ಯವಹಾರಕ್ಕೆ ಮುಂದಾಗುವಂತೆ ಬ್ಯಾಂಕ್ ಗಳ ಮೇಲೆ ಒತ್ತಡ ಹೇರುವ ಮೂಲಕ ಜನರಿಗೆ ಎಟಿಎಂಗಳಲ್ಲಿ ಹಣ ಸಿಗದಂತೆ ಮಾಡಿದೆ. ಇದರ ಪರಿಣಾಮ ಜನರು ಕಳೆದ 15 ದಿನಗಳಿಂದ ಎಟಿಎಂಗಳಿಂದ ಎಟಿಎಂಗಳಿಗೆ ಪರದಾಡುತ್ತಿದ್ದಾರೆ.
ದೇಶದಲ್ಲಿ ನೋಟು ಅಮಾನ್ಯಿಕರಣಗೊಂಡು ವರ್ಷ ಕಳೆದ ಮೇಲೂ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ ಎನ್ನುವುದಕ್ಕೆ ನಗರದಲ್ಲಿರುವ ಎಟಿಎಂಗಳು ಖಾಲಿ-ಖಾಲಿಯಾಗಿರುವುದು ತಾಜಾ ಉದಾಹರಣೆ. ಬ್ಯಾಂಕ್‌ಗಳ ಬಳಕೆ ಶುಲ್ಕದ ಕಿರಿಕಿರಿ, ವ್ಯವಹಾರದಲ್ಲಿ ಕಾರ್ಡ್ ಬಳಕೆಯ ತಂತ್ರಜ್ಞಾನದ ಕಿರಿಕಿರಿಯಿಂದಾಗಿ ಶೇ.60 ಜನರು ಬ್ಯಾಂಕ್‌ಗಳಲ್ಲಿ ಹಣವನ್ನು ಇಡುತ್ತಿಲ್ಲ. ಇದರಿಂದಾಗಿ ನೋಟುಗಳ ಕೊರತೆ ಕಂಡು ಬಂದಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಕ್ಯಾಸ್‌ಲೆಸ್ ವ್ಯವಾಹಾರಕ್ಕೆ ಹೆಚ್ಚು ಮುಂದಾಗುವಂತೆ ಎಲ್ಲ ಬ್ಯಾಂಕುಗಳ ಮೇಲೆ ಕೇಂದ್ರ ಸರಕಾರದ ಒತ್ತಡವಿದೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ನೋಟುಗಳನ್ನು ಸಮಪರ್ಕ ಸರಬುರಾಜು ಮಾಡಲಾಗುತ್ತಿಲ್ಲ. ಇದರಿಂದಾಗಿ ಕಳೆದ 15 ದಿನಗಳಿಂದ ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಬಹುತೇಕ ಎಟಿಎಂಗಳಲ್ಲಿ ಹಣವಿಲ್ಲ. ಅದೂ ಅಲ್ಲದೆ, ಆರ್‌ಬಿಐ ಬೆಂಗಳೂರು ಮತ್ತು ಮೈಸೂರಿನಿಂದ ನೋಟುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಇದರಿಂದಾಗಿ ಕಳೆದ 15 ದಿನಗಳಿಂದ ಒಂದೆರಡು ಬ್ಯಾಂಕ್‌ಗಳನ್ನು ಹೊರತು ಪಡಿಸಿ ಉಳಿದೆಲ್ಲ ಬ್ಯಾಂಕ್‌ಗಳ ಎಟಿಎಂಗಳು ಖಾಲಿಯಾಗಿದ್ದವು. ಇನ್ನೊಂದೆಡೆ ಕೆಲವು ಬ್ಯಾಂಕುಗಳು ಜನರಿಗೆ ಆಗುತ್ತಿರುವ ತೊಂದರೆಯಿಂದ ಮುಕ್ತ ಮಾಡಲು ಬ್ಯಾಂಕ್ ವ್ಯವಹಾರದಲ್ಲಿ ನೋಟುಗಳ ಬಳಕೆಯ ಬದಲು ಎಟಿಎಂಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿವೆ. ಇದೇ ವೇಳೆ ಹಳ್ಳಿಗಳಿಂದ ಜನರು ಪಟ್ಟಣ ಪ್ರದೇಶಗಳಗಿಗೆ ನೋಟಿಗಾಗಿ ಬರುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಗ್ರಾಮೀಣ ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸಾಕಾಗುತ್ತಿಲ್ಲ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಬ್ಯಾಂಕ್‌ಗಳಲ್ಲಿರುವ ಉಳಿತಾಯ ಖಾತೆ, ಸಂಬಳದ ಖಾತೆಯ ಗ್ರಾಹಕರು, ತಿಂಗಳಿಗೊಮ್ಮೆ ಒಂದೇ ಕಾಲಕ್ಕೆ ಹೆಚ್ಚು ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿದ್ದಾರೆ. ಪುನಃ ಆ ಹಣ ಬಳಕೆ ಬರುವುದು ತಡವಾಗುತ್ತಿದೆ. ಇದರಿಂದಾಗಿ ದೈನಂದಿನ ವ್ಯವಹಾರಕ್ಕೆ ನೋಟುಗಳ ಕೊರತೆ ಉಂಟಾಗಿದೆ. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆರ್‌ಬಿಐಗೆ ಪತ್ರ ಬರೆಯಲಾಗಿದೆ ಎಂದು ಬ್ಯಾಂಕಿನ ಅಧಿಕಾರಿ ವಿವರಿಸಿದರು.
ಅಗತ್ಯ ವಸ್ತುಗಳಿಗಿಲ್ಲ ಶುಲ್ಕ ಜನರು ಅನಗತ್ಯ ಭಯ ಪಡುತ್ತಿದ್ದಾರೆ. ಸರಕಾರ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಒತ್ತಾಯಿಸುವುದು ಸರಿಯಷ್ಟೇ. ಆದರೆ, ಅಗತ್ಯ ಪೂರಕ ಕ್ರಮ ಕೈಗೊಳ್ಳಬೇಕು. ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡುವ ಐಶಾರಾಮಿ ವಸ್ತುಗಳಿಗೆ ಶೇ. 1ರಿಂದ ಹಿಡಿದು 2ರಷ್ಟು ಸೇವಾ ಶುಲ್ಕ ಹೇರಲಾಗುತ್ತಿದೆ. ಆದರೆ, ಜೀವನಾವಶ್ಯಕ ವಸ್ತುಗಳ ಮೇಲೆ ಇಲ್ಲ. ಜನರಿಗೆ ತಪ್ಪು ಕಲ್ಪನೆ ಇದೆ. ನಮ್ಮ ಬಿಗ್ ಬಜಾರ್‌ನಲ್ಲಿ ನಾವು ಯಾವುದೇ ಸೇವಾ ಶುಲ್ಕ ಹಾಕುತ್ತಿಲ್ಲ. ದಿನಸಿ, ಔಷಧ, ಗೃಹ ಬಳಕೆ ಮತ್ತು ದೈನಂದಿನ ಬಳಕೆ ವಸ್ತುಗಳಿಗೆ ಶುಲ್ಕವಿಲ್ಲ. ಜನರು ಹೆಚ್ಚು ಹೆಚ್ಚು ಕಾರ್ಡುಗಳನ್ನು ಬಳಕೆ ಮಾಡುವುದು ಒಳಿತು.
ಚೆನ್ನಪ್ಪ, ವ್ಯವಸ್ಥಾಪಕರು ಬಿಗ್‌ಬಜಾರ್
ಶೇ.60 ಜನರಿಗೆ ಗೊತ್ತೇ ಇಲ್ಲ ಕ್ಯಾಸ್‌ಲೆಸ್ ವ್ಯವಹಾರಕ್ಕೆ ಒತ್ತು ನೀಡುತ್ತಿರುವುದು ಗೊಂದಲಕಾರಿಯಾಗಿದೆ. ಈ ಕುರಿತು ಜನರಿಗೆ ತಿಳಿವಳಿಕೆ ಇಲ್ಲ. ಕಾರು, ಬೈಕು, ಟಿವಿ, ಸೋಫಾ ಖರೀದಿಗೆ ಶೇ. 1ರಷ್ಟು ಸೇವಾ ಶುಲ್ಕವನ್ನು ಹೇರಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿರುವ ನೋಟುಗಳನ್ನು ಏಕ ಕಾಲಕ್ಕೆ ಡ್ರಾ ಮಾಡಿಕೊಂಡು ಮನೆಯಲ್ಲಿಟ್ಟುಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಇನ್ನೂ ಕಳೆದ 15 ದಿಗನಳಿಂದ ಎಟಿಎಂಗಳಲ್ಲಿ ಹಣವಿಲ್ಲ. ಜನರಿಗೆ ತೊಂದರೆಯಾಗುತ್ತಿದೆ. ಮೋದಿ ಅವರ ಅಚ್ಛೆ ದಿನ್ ಒಂದು ವರ್ಷದ ಬಳಿಕವೂ ಕಾಡುತ್ತಿರುವುದು ವಿಪರ್ಯಾಸದ ಸಂಗತಿ.
ಅಲಿಸಾಬ್, ಸಿಪಿಐ ಪಕ್ಷದ ಸದಸ್ಯರು.
ಸೂರ್ಯಕಾಂತ ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.