ಸೊನ್ನಲಿಗೆ ಆಧ್ಯಾತ್ಮ ಕೇಂದ್ರ: ಪಾಲಾಮೂರ
Team Udayavani, Jan 16, 2018, 10:41 AM IST
ಚಿಂಚೋಳಿ: ಮಹಾರಾಷ್ಟ್ರದ ಸೊಲ್ಲಾಪುರ (ಸೊನ್ನಲಿಗೆ) ಗ್ರಾಮ ಭಕ್ತಿ ಮತ್ತು ಆಧ್ಯಾತ್ಮ ಕೇಂದ್ರವಾಗಿತ್ತು. ಶಿವಯೋಗಿ
ಸಿದ್ದರಾಮೇಶ್ವರರ ಜೀವನ ಚರಿತ್ರೆ ಮತ್ತು ವಚನಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಸರಕಾರಿ ಸರಕಾರಿ ಪದವಿ
ಪೂರ್ವ ಮಹಾವಿದ್ಯಾಲಯ ಉಪನ್ಯಾಸಕ ಪ್ರೊ| ಮಲ್ಲಿಕಾರ್ಜುನ ಪಾಲಾಮೂರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸಿದ್ದರಾಮೇಶ್ವರ ಹದಿಮೈದು ನೂರು ವಚನ ಬರೆದಿದ್ದಾರೆ. ಅವರು ವನಚ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ತಾಲೂಕ ಭೋವಿ ಸಮಾಜದ ಅಧ್ಯಕ್ಷ ವೀರಣ್ಣ ಭೋವಿ ಮಾತನಾಡಿ, ನಮ್ಮ ಸಮಾಜ ದಿನವಿಡೀ ಕೆಲಸ ಮಾಡಿ ಉಪಜೀವನ ಸಾಗಿಸುತ್ತದೆ. ಮಿರಿಯಾಣ, ಕಲ್ಲೂರ, ಕಿಷ್ಟಾಪುರ, ಭೈರಂಪಳ್ಳಿ ಗ್ರಾಮಗಳಲ್ಲಿ ಇರುವ ಸರಕಾರಿ ಜಮೀನುಗಳಲ್ಲಿ ಗಣಿ ಕೆಲಸ ಮಾಡಿಕೊಳ್ಳಲು ಸರಕಾರ ನಮಗೆ ಲೀಜ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕ ಭೋವಿ ಸಮಾಜ ಉಪಾಧ್ಯಕ್ಷ ಮಲ್ಲಯ್ಯ ವಾಡಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ
ಇಂದುಮತಿ ದೇಗಲಮಡಿ, ಎಇಇ ಅಶೋಕ ತಳವಾಡೆ, ತೋಟಗಾರಿಕೆ ಅಧಿಕಾರಿ ಸುರೇಂದ್ರಕುಮಾರ, ಸಮಾಜ
ಕಲ್ಯಾಣ ಅಧಿಕಾರಿ ಪ್ರಭುಲಿಂಗ ಚಿಂತಕುಂಟಿ, ಬಸವರಾಜ ವಾಡಿ, ವಿಠ್ಠಲ ಕುಸಾಳೆ, ಹಣಮಂತ ಕೋಡ್ಲಿ ಭಾಗವಹಿಸಿದ್ದರು.
ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಸ್ವಾಗತಿಸಿದರು. ಬಿಸಿಯೂಟ ಸಹಾಯಕ ನಿರ್ದೇಶಕ ಜಯಪ್ಪ ಚಾಪೆಲ್
ನಿರೂಪಿಸಿದರು. ಸಿಆರ್‌ಸಿ ವೀರಣ್ಣ ಸುಗಂ ವಂದಿಸಿದರು. ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ ಚೌಕನಿಂದ ಚಂದಾಪುರ ಮಿನಿ ವಿಧಾನಸೌಧ ವರೆಗೆ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.