ಕೇಂದ್ರೀಯ ವಿವಿ ಕುಲಪತಿ ಹುದ್ದೆ 10 ತಿಂಗಳಿಂದ ಖಾಲಿ
ಅನುಷ್ಠಾನಗೊಳಿಸುವಲ್ಲಿ ಕೇಂದ್ರೀಯ ವಿವಿಯೇ ಪ್ರಮುಖ ಪಾತ್ರ ವಹಿಸಬೇಕಿದೆ.
Team Udayavani, Mar 2, 2021, 6:03 PM IST
ಕಲಬುರಗಿ: ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಹುದ್ದೆ ಕಳೆದ ಹತ್ತು ತಿಂಗಳಿನಿಂದ ಖಾಲಿ ಬಿದ್ದಿದೆ. ಪ್ರೊ|ಎಚ್. ಎಂ. ಮಹೇಶ್ವರಯ್ಯ ಕುಲಪತಿ ಹುದ್ದೆಯಿಂದ ಕಳೆದ ಏಪ್ರಿಲ್ ತಿಂಗಳಲ್ಲಿ ನಿವೃತ್ತಿಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮೂರು ತಿಂಗಳು ಸೇವೆ ವಿಸ್ತರಿಸಲಾಗಿತ್ತು. ನಂತರ ಪ್ರೊ|ಅಳಗವಾಡಿ ಪ್ರಭಾರಿ ಕುಲಪತಿಗಳಾಗಿದ್ದಾರೆ. ಕಾಯಂ ಕುಲಪತಿ ಇರದಿದ್ದಕ್ಕೆ ಶೈಕ್ಷಣಿಕವಾಗಿ ಹಿನ್ನಡೆಯಾಗಿದೆ.
ಹೊಸ ಕೋರ್ಸ್ ಪ್ರಾರಂಭದ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಬೇಕಿದೆ. ಮುಂದಿನ 2021-22 ಶೈಕ್ಷಣಿಕ ವರ್ಷದ ಅಕಾಡೆಮಿಕ್ ಚಟುವಟಿಕೆಗಳಿಗೆ ಸಂಬಂಧಿ ಸಿದಂತೆ ಅಧಿ ಸೂಚನೆ ಹೊರಡಿಸಬೇಕಿದೆ. ಕಾಯಂ ಕುಲಪತಿ ಇಕ್ಕದ್ದಕ್ಕೆ ಯಾವುದೇ ಕಾರ್ಯಗಳಾಗುತ್ತಿಲ್ಲ. ಹೊಸ ಶಿಕ್ಷಣ ನೀತಿ ನೇಮಕಾತಿ-2020 ಅನುಷ್ಠಾನಗೊಳಿಸುವಲ್ಲಿ ಕೇಂದ್ರೀಯ ವಿವಿಯೇ ಪ್ರಮುಖ ಪಾತ್ರ ವಹಿಸಬೇಕಿದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ, ಸಭೆಗಳಾಗಬೇಕಿದೆ. ನೇಮಕಾತಿ ನಡೆಯಬೇಕಿದೆ. ಕಾಯಂ ಕುಲಪತಿ ಇದ್ದರೆ ಮಾತ್ರ ನಿರ್ಧಾರ ಕೈಗೊಳ್ಳಬಹುದಾಗಿದೆ.
ಒಂದು ದಿನದ ವಿಸಿ: ಪ್ರೊ| ಎಚ್.ಎಂ. ಮಹೇಶ್ವರಯ್ಯ ಕುಲಪತಿ ಹುದ್ದೆಯಿಂದ ಬಿಡುಗಡೆ ಹೊಂದಿದ ನಂತರ ಪ್ರೊ|ಎನ್. ನಾಗರಾಜು 13 ದಿನಗಳ ಕಾಲ ಪ್ರಭಾರಿ ವಿಸಿಯಾಗಿ ಕಾರ್ಯನಿರ್ವಹಿಸಿದರೆ ರೊಮ್ಯಾಟ್ ಜಾನ್ ಎನ್ನುವರು ಒಂದು ದಿನ ವಿಸಿಯಾಗಿ ಕಾರ್ಯನಿರ್ವಹಿಸಿದರು. ನಂತರ ಪ್ರೊ| ಎಂ.ವಿ. ಅಳಗವಾಡಿ ಪ್ರಭಾರಿ ವಿಸಿಯಾಗಿ ಕಾರ್ಯಭಾರ ವಹಿಸಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಿವಿ ವಾರ್ಷಿಕ ಘಟಿಕೋತ್ಸವ ಸಹ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಸಬೇಕು. ಆದರೆ ಕಾಯಂ ಕುಲಪತಿಗಳಿಲ್ಲದಿದ್ದಕ್ಕೆ ನಿರ್ಧಾರ ತೆಗೆದುಕೊಳ್ಳಲಿಕ್ಕಾಗುತ್ತಿಲ್ಲ.
ಕುಲಸಚಿವ ಸ್ಥಾನಕ್ಕೆ ನಡೆದಿತ್ತು ಕಿತ್ತಾಟ
ವಿವಿಗೆ ಕಾಯಂ ಕುಲಪತಿ ಇರದೇ ಪ್ರಭಾರಿ ವಿಸಿ ಇರುವ ಕಾರಣದಿಂದಲೇ ಪ್ರಭಾರಿ ಕುಲಪತಿ ಹಾಗೂ ಕುಲಸಚಿವರ ನಡುವೆ ಕಿತ್ತಾಟ ಕೂಡ ನಡೆದಿತ್ತು. ಪ್ರಭಾರಿ ಕುಲಪತಿಗಳು ಮುಷ್ತಾಕ್ ಅಹ್ಮದ ಐ ಪಟೇಲ್ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿ ಬಸವರಾಜ ಡೋಣೂರ ಅವರನ್ನು ಕುಲಸಚಿವರನ್ನಾಗಿ ನೇಮಿಸಿದ್ದರು. ಡೋಣೂರ ಅವರಿಗೆ ಅಧಿಕಾರ ಹಸ್ತಾಂತರಕ್ಕೆ ಪಟೇಲ್ ನಿರಾಕರಿಸಿದ್ದರು. ಐದು ವರ್ಷದ ಅವಧಿ ಇದ್ದರೂ ಕಾನೂನು ಬಾಹಿರವಾಗಿ ಎರಡು ವರ್ಷಕ್ಕೆ ಅಧಿಕಾರ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಬಲವಾಗಿ ಆಕ್ಷೇಪಿಸಿದ್ದರು. ಕುರ್ಚಿಗಾಗಿ ಇಬ್ಬರ ನಡುವೆ ಕಿತ್ತಾಟ ನಡೆದಿತ್ತು. ಕಾಯಂ ಕುಲಪತಿಗಳಿದ್ದರೆ ಇದ್ಯಾವುದಕ್ಕೂ ಆಸ್ಪದವಿರುತ್ತಿರಲಿಲ್ಲ.
*ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.