Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Team Udayavani, Oct 29, 2024, 1:37 PM IST
ಕಲಬುರಗಿ: ಮಸೀದಿಗಳು ಕರ್ನಾಟಕ ರಾಜ್ಯ ಸರ್ಕಾರವನ್ನು ಆಳುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಬಲವಾಗಿ ಟೀಕಿಸಿದರು.
ಜಿಲ್ಲೆಯ ಬೆಳೆ ಹಾನಿ ವೀಕ್ಷಿಸಲು ಆಗಮಿಸಿದ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯದೆಲ್ಲೆಡೆ ರೈತರ ಜಮೀನು ವಕ್ಫ್ ಆಸ್ತಿ ಎಂದು ಬದಲಾಯಿಸಲಾಗುತ್ತಿರುವುದು, ಮಠಗಳು ವಕ್ಫ್ ಗೆ ಸೇರಿಸಿ ಎಂದು ಪತ್ರ ಬರೆಯಲಾಗುತ್ತಿರುವುದನ್ನು ಹಾಗೂ ಸರ್ಕಾರಿ ಜಾಗವನ್ನು ಸಹ ವಕ್ಫ್ ಗೆ ಪಡೆಯುತ್ತಿರುವುದನ್ನು ನೋಡಿದರೆ ಸರ್ಕಾರವನ್ನು ಮಸೀದಿಗಳೇ ನಿರ್ವಹಿಸುತ್ತಿವೆ ಎಂಬುದು ಸ್ಪಷ್ಟಪಡಿಸುತ್ತದೆ. ಪ್ರಮುಖವಾಗಿ ಸರ್ಕಾರದ ಮನೆ ಬಾಗಿಲಿಗೆ ಬಂದಿದ್ದು, ಮುಂದಿನ ದಿನ ಅಡುಗೆ ಕೋಣೆಯವರೆಗೂ ಬರುವುದು ದೂರ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದೆಲ್ಲೆಡೆ ಸರ್ಕಾರಿ ಹಾಗೂ ಮಠ ಮಂದಿರಗಳ ಜಾಗ ತನಗೆ ಸೇರಿದ್ದು ಎನ್ನುವ ವಕ್ಫ್ ಮಂಡಳಿ ಮುಂದಿನ ದಿನಗಳಲ್ಲಿ ವಿಧಾನಸೌಧ ತನ್ನದು ಎಂದರೂ ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ವಕ್ಫ್ ಮಂಡಳಿ ರದ್ದಾಗಲಿ: ಯಾವುದಾದರೂ ಜಮೀನು ವಕ್ಫ್ ಮಂಡಳಿ ಪಡದರೆ ಅದರ ವಿರುದ್ದ ಕೋರ್ಟ್‌ಗೂ ಹೋಗುವಂತಿಲ್ಲ. ಸುಪ್ರಿಂಕೋಟ್೯ಗೆ ಹೋದರೆ ಅಲ್ಲೇ ವಕ್ಫ್ ಗೆ ಹೋಗಿ ಎನ್ನಲಾಗುತ್ತಿದೆ. ವಕ್ಫ್ ಅನ್ಯಾಯದ ವಿರುದ್ದ ವಕ್ಫ ನ್ಯಾಯ ಮಂಡಳಿ ಎದುರು ಹೋಗಿ ಹೇಗೆ? ನ್ಯಾಯ ಪಡೆಯಲು ಸಾಧ್ಯ. ಆದ್ದರಿಂದ ಈ ಕೂಡಲೇ ವಕ್ಫ ಮಂಡಳಿ ರದ್ದುಪಡಿಸಬೇಕೆಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ವಕ್ಫ್ ಮಂಡಳಿ ರದ್ದಾಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಏನಿಸುತ್ತಿದೆ. ಹೀಗಾಗಿ ದೊಡ್ಡ ಗಂಡಾಂತರ ತಪ್ಪುಸಬೇಕಿದೆ. ಆದ್ದರಿಂದಲೇ ಬಿಜೆಪಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂಬುದಾಗಿ ಸೇರಿದ್ದಕ್ಕೆ ಸಚಿವರೊಬ್ಬರು ಉಡಾಫೆಯ ರೀತಿಯಲ್ಲಿ ಉತ್ತರ ನೀಡುತ್ತಾರೆ. ಆದರೆ ಆಗಿರುವ ಅವಾಂತರ ವಿರುದ್ದ ಒಬ್ಬ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಲಾಗಿದೆಯೇ? ಇದನ್ನೇಲ್ಲ ನೋಡಿದರೆ ಮಸೀದಿಗಳೇ ಸರ್ಕಾರ ನಿರ್ವಹಿಸುತ್ತವೆ ಎಂಬುದನ್ನು ಸಾಬೀತುಪಿಸುತ್ತದೆ ಎಂದು ಪುನರುಚ್ಚರಿಸಿದರು.
KKRDB ಹಗರಣ ಸಿಬಿಗೆ ವಹಿಸಲಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಎಸ್ಸಿಪಿ- ಟಿಎಸ್ಪಿ ಅನುದಾನ ಉರ್ದು ಶಾಲೆಗಳ ಅಭಿವೃದ್ಧಿಗೆ ನೀಡಲಾಗಿದೆ. ಅದಲ್ಲದೇ ಕಾಮಗಾರಿಗಳನ್ನು ಟೆಂಡರ್ ಕರೆಯದೇ ಕೆ ಆರ್ ಡಿ ಎಲ್ ನೀಡಲಾಗಿ ಭೃಷಾಷಾರ ಎಸಗಲಾಗಿದೆ. ಹೀಗಾಗಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ನಾರಾಯಣ ಸ್ವಾಮಿ ಒತ್ತಾಯಿಸಿದರು.
ಕೆಕೆಆರ್ ಡಿಬಿ ನಡೆದಿರುವ ಹಗರಣದ ದಾಖಲೆಗಳು ದೊರೆಯುತ್ತಲಿದ್ದು, 8.10 ದಿನದೊಳಗೆ ಎಲ್ಲ ದಾಖಲೆಗಳನ್ನು ಬಿಡುಗಡೆಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಒಳಮೀಸಲಾತಿ ಜಾರಿಗೆ ಕಾಲಹರಣ: ಒಳಮೀಸಲಾತಿ ಜಾರಿಗೆ ಸರ್ಕಾರಕ್ಕೆ ಅದರಲ್ಲೂ ಸಿಎಂ ಸಿದ್ಧರಾಮಯ್ಯ ಅವರಿಗೆ ಮನಸ್ಸಿಲ್ಲ. ಕಾಲ ಹರಣ ಮಾಡಲು ಆಯೋಗ ರಚಿಸಿದೆ.ಸುಪ್ರೀಂಕೋಟ್ ೯ ಆದೇಶ ಬಂದು ಮೂರು ತಿಂಗಳಾಗಿದ್ದರೂ ಮೀನಾ ಮೇಷ ಯಾಕೆ? ಉಒ ಚುನಾವಣೆ ಹಿನ್ನೆಲೆಯಲ್ಲಿ ಮತ ಸೆಳೆಯಲು ನಾಟಕವಾಡುತ್ತಿದೆ ಎಂದು ವಿಪಕ್ಷ ನಾಯಕರು ಟೀಕಿಸಿದರು. ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್, ಬಿ.ಜಿ.ಪಾಟೀಲ್, ಬಿ.ಜಿ.ಪಾಟೀಲ್, ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ಅಮರನಾಥ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.
ಇದನ್ನೂ ಓದಿ: Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.