ಸವಾಲೊಡ್ಡಿದ ದರೋಡೆ-ಕೊಲೆ ಪ್ರಕರಣ
Team Udayavani, May 15, 2017, 3:57 PM IST
ಆಳಂದ: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಅಗಲಿದ ಕಹಿ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರ ಸ್ವಗ್ರಾಮ ಖಜೂರಿಯ ಸೋದರ ಬಂಧುಗಳ ಕುಟುಂಬದ ಮೇಲೆ ನಡೆದ ಮತ್ತೂಂದು ಕೊಲೆ, ದರೋಡೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಖಜೂರಿಯಲ್ಲಿ ಏ. 28ರಂದು ಸಂಭವಿಸಿರುವ ಬಂಡೆ ಮನೆ ದರೋಡೆ ಹಾಗೂ ದರೋಡೆಕೋರರ ಏಟಿಗೆ ಸಾವನ್ನಪ್ಪಿರುವ ಸೋನುಬಾಯಿ ಪ್ರಕರಣದಲ್ಲಿ ದರೋಡೆಕೋರರು ಹಾಗೂ ಹಂತಕರ ಜಾತಕ ಜಾಲಾಡಲು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದರೂ ಇನ್ನೂ ಸುಳಿವು ದೊರೆತಿಲ್ಲ.
ಮೃತ ಸೋನುಬಾಯಿ ಅಳಿಯ ಮಹಾಂತೇಶ ಪೊಲೀಸ್ ಇಲಾಖೆಯಲ್ಲೇ ಪೇದೆಯಾಗಿ ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದು ಪೇದೆಯ ಪತ್ನಿ ಶ್ರೀದೇವಿ ಜಾತ್ರೆಗೆಂದು ಊರಿಗೆ ಬಂದು ಮನೆಯಲ್ಲಿ ತಂಗಿದ್ದರು. ಶ್ರೀದೇವಿಯ ಮೇಲೂ ದರೋಡೆಕೋರರು ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಸಣ್ಣ ಮಕ್ಕಳ ಮುಖದ ಮೇಲೂ ಮುಷ್ಠಿಯಿಂದ ಗುದ್ದಿಗಾಯಗೊಳಿಸಿದ್ದಾರೆ. ಪೊಲೀಸ್‌ರ ಕುಟುಂಬದ ಮೇಲೂ ನಡೆದ ಹಲ್ಲೆಗಳ ತನಿಖೆಗೂ ವಿಳಂಬವಾಗುತ್ತಿರುವುದು ಅಸಮಾಧಾನ ಮೂಡಿಸಿದೆ. ಆರೋಪಿಗಳ ಮಟ್ಟಹಾಕಲೇ ಬೇಕು ಎಂದು ಸಂಕಲ್ಪಿಸಿರುವ ಆಳಂದ ಪೊಲೀಸರು ನಾಜೂಕಿನಿಂದ ಹೆಜ್ಜೆ ಹಾಕಿ ಜಾಲಬಿಸತೊಡಗಿದ್ದಾರೆ ಎನ್ನಲಾಗಿದೆ.
ಖಜೂರಿ ಕಂಡ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನೇ ಗಮನ ಸೆಳೆದಿದೆ. ಕೊಲೆಮಾಡಿ ದರೋಡೆ ಮಾಡಿದ ವಾರದಲ್ಲೇ ಅದೆ ಮನೆಗೆ ಮತ್ತೂಮ್ಮೆ ದರೋಡೆ ಮಾಡಿ ಚಿನ್ನಾಭರಣ ಲೂಟಿ ಮಾಡಿದ ಖದೀಮರು ಎಷ್ಟೊಂದು ಪ್ರಭಾವಿ ಶಾಲಿಗಳೆಂಬುದು ಮೇಲ್ನೋಟಕ್ಕೆ ಸಾಬೀತು ಪಡಿಸತೊಡಗಿದೆ.
3 ಲಕ್ಷ ಮೊಬೈಲ್ ಕರೆ ಪರಿಶೀಲನೆ: ಖಜೂರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಏ.28ರಿಂದ ಆಚೀಚೆ ಮೂರ್‍ನಾಲ್ಕು ದಿನಗಳಲ್ಲಿ ನಡೆದಂತ ಮೊಬೈಲ್ ಹಾಗೂ ಟೆಲೆಪೋನ್ ಸಂಭಾಷಣೆಗಳ ವಿವರಣೆಗಳನ್ನೆಲ್ಲ ಆಳಂದ ಪೊಲೀಸರು ಪಡೆದುಕೊಂಡಿದ್ದಾರೆ.
ಕಿಣ್ಣಿಸುಲ್ತಾನ ಗ್ರಾಮದಲ್ಲಿರುವ ಮೊಬೈಲ್ ಗೋಪುರದಿಂದ ಸಿಡಿಆರ್ ಮಾಹಿತಿ ಪಡೆಯಲಾಗಿದ್ದು, 3 ಲಕ್ಷದಷ್ಟು ಮೊಬೈಲ್, ದೂರವಾಣಿ ಕರೆಗಳು ಮೂರು ದಿನಗಳಲ್ಲಿ ಸ್ವೀಕರಿಸಲ್ಪಟಿವೆ. ಈ ಕರೆಗಳನ್ನೆಲ್ಲ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಬಂಡೆ ಕುಟುಂಬ ವಾಸವಿದ್ದ ಮನೆ ಖಜೂರಿ ಹೋರಿನಿಂದ ಹೆದ್ದಾರಿಗೆ ಬರುವ ಮಾರ್ಗದಲ್ಲಿದೆ. ಅಕ್ಕ, ಪಕ್ಕದ ಕೂಗಳತೆಯಲ್ಲಿ ಇತರರ ಮನೆಗಳಿವೆ. ಇವರು ತಾವಾಯ್ತು ತಮ್ಮ ಸಂಸಾರವಾಯ್ತು ಎಂದು ಇದ್ದವರು. ಇಂತವರ ಮನೆಗೆ ಸ್ಥಳೀಯರ್ಯಾಕೆ ನುಗ್ಗಿ ದಾಳಿ ಮಾಡುತ್ತಾರೆ? ಆಸ್ತಿಪಾಸ್ತಿ ಜಗಳವೂ ಇರಲಿಲ್ಲ. ಹಾಗೆಂದ ಮೇಲೆ ಇದು ವೃತ್ತಿಪರ ದರೋಡೆ ಗ್ಯಾಂಗ್ ಕೆಲಸವೇ ? ಎಂದು ಪೊಲೀಸರು ಪ್ರಕರಣದ ಎಲ್ಲ ಮಗ್ಗುಲಗಳನ್ನು ಪರಿಶೀಲಿಸುತ್ತಿದ್ದಾರೆ.
ಸವಾಲಾದ ಪ್ರಕರಣ: ಪ್ರಕರಣ ಸಂಭವಿಸಿ 17 ದಿನ ಗತಿಸಿದರೂ ಹಂತಕರ ಸುಳಿವು ದೊರಕಿಲ್ಲ. ಪ್ರತಿಯೊಂದು ಅಪರಾಧದ ಹಿಂದೆ ಕಾರಣವಿರುತ್ತದೆ. ಆದರಿಲ್ಲಿ ಕಾರಣವೇ ಸ್ಪಷ್ಟ. ದರೋಡೆಕರರು ಸೋನುಬಾಯಿಯನ್ನೇ ಗುರಿಮಾಡಿಕೊಂಡಿದ್ದು, ಯಾಕೆ? ಮನೆಯಲ್ಲಿರುವ ಇತರರಿಗೆ ಒಂದೇ ರೀತಿಯಲ್ಲಿ ಥಳಿಸಿದ್ದಾರೆ.
ಎಲ್ಲರಿಗೂ ಮುಖದ ಮೇಲೆಯೇ ಥಳಿಸಿ ಗಾಯಗೊಳಿಸಿದ್ದಾರೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದ ಹಿಂದಿರುವವರು ಸ್ಥಳೀಯರೆ? ಅಥವಾ ವೃತ್ತಿಪರ ದರೋಡೆಕೋರರೆ ಎನ್ನುವ ಶಂಕೆ ಪೊಲೀಸರಿಗೆ ಕಾಡತೊಡಗಿದೆ.
ಸೋನಾ ಆಯಿಯನ್ನೇ ಯಾಕೆ ಖದೀಮರು ಗುರಿಮಾಡಿಕೊಂಡರು? ಆಯಿ ದರೋಡೆಗೆ ಬಂದವರಲ್ಲಿ ಯಾರಾನ್ನಾದರೂ ಗುರುತಿಸಿದ್ದರೆ? ಅದೇ ಭಯ ಆಯಿಯ ಬಲಿಪಡೆಯಿತೆ? ಇವೆಲ್ಲ ಪ್ರಶ್ನೆಗೆ ಪೊಲೀಸ್ ತನಿಖೆಯೇ ಉತ್ತರ ನೀಡಬೇಕು.
* ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.