ನಿರ್ವಹಣೆಯಿಲ್ಲದೇ ಸೊರಗಿದ ಚಂದ್ರಂಪಳ್ಳಿ ಜಲಾಶಯ
Team Udayavani, Jul 25, 2022, 10:36 AM IST
ಚಿಂಚೋಳಿ: ತಾಲೂಕಿನ ರೈತರ ಜೀವನಾಡಿಯಾ ಗಿರುವ ಚಂದ್ರಂಪಳ್ಳಿ ಜಲಾಶಯಕ್ಕೆ ಸೂಕ್ತ ನಿರ್ವಹಣೆ ಇಲ್ಲದೇ ಇರುವುದರಿಂದ ಮಣ್ಣಿನ ಒಡ್ಡಿನ ಮೇಲೆ ಸಣ್ಣಪುಟ್ಟ ಗಿಡಗಳು ಬೆಳೆದಿವೆ.
ತಾಲೂಕಿನ ವನ್ಯಜೀವಿಧಾಮ ಅರಣ್ಯಪ್ರದೇಶ ಗಳಿಂದ ಹರಿಯುವ ಸರನಾಲೆಗೆ ಚಂದ್ರಂಪಳ್ಳಿ ಗ್ರಾಮದ ಬಳಿ ಇರುವ ಗುಡ್ಡಗಾಡು ಪ್ರದೇಶದಲ್ಲಿ 1966ರಲ್ಲಿ ಅಣೆಕಟ್ಟು ಪ್ರಾರಂಭಿಸಿ, 1975ರಲ್ಲಿ ಪೂರ್ಣಗೊಳಿಸಲಾಗಿತ್ತು. ರೈತರಿಗೆ ನೀರಾವರಿ ಪ್ರಯೋಜನ ನೀಡುತ್ತಿರುವ ಈ ಜಲಾಶಯ ಇದೀಗ ಸೂಕ್ತ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.
ಚಂದ್ರಂಪಳ್ಳಿ ಜಲಾಶಯ 926.54 ಮೀಟರ್ ಉದ್ದ, 28.65 ಮೀಟರ್ ಎತ್ತರ, 496 ಗರಿಷ್ಠ ನೀರಿನ ಮಟ್ಟ ಹೊಂದಿದೆ. 356.38 ಮೀಟರ್ ನೀರು ನಿಲ್ಲುವ ಗರಿಷ್ಠ ಎತ್ತರವಿದೆ. 17.6 ಕಿ.ಮೀ ನೀರು ನಿಲ್ಲುವ, 440 ಮೀಟರ್ ಜಲಾನಯನ ಅಚುrಕಟ್ಟು ಪ್ರದೇಶವಿದೆ. 5160 ಹೆಕ್ಟೇರ್ ನೀರಾವರಿ ಕ್ಷೇತ್ರ, ಆರು ಗೇಟುಗಳನ್ನು ಹೊಂದಿದೆ. ಚಂದ್ರಂಪಳ್ಳಿ ಮಣ್ಣಿನ ಒಡ್ಡಿನ ಮೇಲೆ ಬೇವಿನ ಗಿಡಗಳು, ಜಾಲಿ, ಕಕ್ಕಿಗಿಡ, ಮುತ್ತುಲ ಗಿಡಗಳು, ಎಕ್ಕೆ ಗಿಡಗಳು, ಅವರೆ ಗಿಡಗಳು, ಮುಳ್ಳಿನ ಕಂಟಿಗಳು ಬೆಳೆದಿವೆ. ಆದರೆ ಯೋಜನೆ ಅಧಿಕಾರಿಗಳು ಅವುಗಳನ್ನು ಕಡಿದು ಹಾಕಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ಜೂನ್-ಜುಲೈ ತಿಂಗಳಲ್ಲಿ ಮಳೆ ಆಗುತ್ತಿರುವು ದರಿಂದ ಜಲಾಶಯಕ್ಕೆ ನೀರು ದಿನೇ ದಿನೇ ಹರಿದು ಬರುತ್ತಿದೆ. ಗೇಟಿನ ಬಳಿ ವಿದ್ಯುತ್ ದೀಪಗಳಿಲ್ಲ, ಕಬ್ಬಿಣ ಸಲಾಕೆಗಳು ಮುರಿದು ಹೋಗಿವೆ. ರಸ್ತೆ ಸರಿಯಾಗಿಲ್ಲ, ಬೇರೆ ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅಪಾಯಗಳಿದ್ದರೂ ಕಾವಲುಗಾರರನ್ನು ನೇಮಿಸಿಲ್ಲ.
ಚಂದ್ರಂಪಳ್ಳಿ ಜಲಾಶಯ ಮೇಲ್ಭಾಗದಲ್ಲಿ ಸಾಕಷ್ಟು ಗಿಡಗಂಟಿ ಕಡಿದು ಹಾಕಲು ಸರ್ಕಾರದಿಂದ ಅನುದಾನ ಬಂದಿಲ್ಲ. ಅನುದಾನ ಮಂಜೂರಿಗೆ ಮೇಲಾ ಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. –ಚೇತನ ಕಳಸ್ಕರ, ಎಇಇ
ಚಂದ್ರಂಪಳ್ಳಿ ಜಲಾಶಯ ಸರಕಾರದ ನಿರ್ಲಕ್ಷತನಕ್ಕೆ ಒಳಗಾಗಿದೆ ಯಾವುದೇ ಮೂಲಸೌಕರ್ಯಗಳು ಇಲ್ಲ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ಇನ್ನಿತರ ಸೌಲಭ್ಯ ಸರಕಾರ ಒದಗಿಸಬೇಕು. –ಲಕ್ಮಿಕಾಂತ ಮೊಗಡಂಪಳ್ಳಿ,ಗ್ರಾಮಸ್ಥರು
ಚಂದ್ರಂಪಳ್ಳಿ ಜಲಾಶಯ ಜಿಲ್ಲೆಯಲ್ಲಿಯೇ ಐತಿಹಾಸಿಕ ಪ್ರವಾಸಿ ತಾಣ ಆಗಿದೆ. ಆದರೆ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಂಟಿಗಳು ಹುಲುಸಾಗಿ ಬೆಳೆದಿವೆ. ಇದರಿಂದಾಗಿ ಹುಳ ಹುಪ್ಪಡಿಗಳು ಭಯ ಕಾಡುತ್ತಿದೆ. ಕೂಡಲೇ ಗಿಡಗಂಟಿಗಳು ಶುಚಿಗೊಳಿಸಬೇಕಾಗಿದೆ. –ಅಶೋಕ ಭಜಂತ್ರಿ, ಗ್ರಾಪಂ ಅಧ್ಯಕ್ಷರು ಐನೋಳಿ.
ಚಂದ್ರಂಪಳ್ಳಿ ಜಲಾಶಯ ಸೂಕ್ತ ನಿರ್ವಹಣೆಯಿಲ್ಲದೇ ಮಣ್ಣಿನ ಒಡ್ಡಿನ ಮೇಲೆ ಗಿಡಗಂಟಿಗಳು ಬೆಳೆಯುತ್ತಿವೆ. ಅಲ್ಲದೇ ಪ್ರವಾಸಿ ತಾಣ ಆಗಿರುವುದರಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಗಿಡಮರಗಳಿಂದ ಜಲಾಶಯಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಗಿಡಗಂಟಿ ಕಡಿದು, ಸೂಕ್ತ ಗಮನಹರಿಸಬೇಕು. ಅಲ್ಲದೇ ವಿದ್ಯುತ್ ದೀಪಗಳನ್ನು ಅಳವಡಿಸಿದರೆ ಅನುಕೂಲವಾಗುತ್ತದೆ. –ರವಿಶಂಕರ ರೆಡ್ಡಿ ಮುತ್ತಂಗಿ, ತಾಲೂಕು ಜೆಡಿಎಸ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.