ತಾಪಂ ಸಭೆಯಲ್ಲಿ ಸಿಡಿಪಿಒ ವಿರುದ್ಧ ಆರೋಪ
Team Udayavani, May 20, 2017, 4:40 PM IST
ಸೇಡಂ: ಅಂಗನವಾಡಿಗಳಲ್ಲಿ ಮಕ್ಕಳ ಅನುಪಸ್ಥಿತಿ ಮತ್ತು ಕೆಲ ಲೋಪದೋಷಗಳ ವಿರುದ್ಧ ತಾಪಂ ಸಭಾಂಗಣದಲ್ಲಿ ಸಭಾ ಅಧ್ಯಕ್ಷರೇ ಹೌಹಾರಿದ ಪ್ರಸಂಗ ನಡೆಯಿತು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಖುದ್ದು ತಾಪಂ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ ಅಸಮಾಧಾನ ವ್ಯಕ್ತಪಡಿಸಿದರು.
ಅನೇಕ ಅಂಗನವಾಡಿಗಳಲ್ಲಿ ಮಕ್ಕಳೇ ಇರೋದಿಲ್ಲ. ಆದರೆ ಖರ್ಚು ವೆಚ್ಚ ಮಾತ್ರ ದಾಖಲೆಗಳಲ್ಲಿ ತೋರಿಸ್ತೀರಿ. ಆಹಾರ ಧಾನ್ಯಗಳು ಕಾಳಸಂತೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು. ಆಗ ಕಕ್ಕಾಬಿಕ್ಕಿಯಾದ ಅಧಿಕಾರಿ ಅಶೋಕ ರಾಜನ್, ಕೆಲ ಕೇಂದ್ರಗಳಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಉತ್ತರಿಸಿದರು.
ಈ ಕುರಿತು ವರದಿ ಮಾಡಿ, ಕ್ರಮಕ್ಕೆ ಸೂಚಿಸಿದಲ್ಲಿ ಕೆಲ ರಾಜಕಾರಣಿಗಳೇ ಅಂಗನವಾಡಿ ಕಾರ್ಯಕರ್ತೆಯರ ಪರ ನಿಲ್ಲುತ್ತಾರೆ ಎಂದು ಆರೋಪಿಸಿದರು. ಈ ವೇಳೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಕರ್ತವ್ಯ ದ್ರೋಹ ಎಸಗುವ ಅಂಗನವಾಡಿ ಕಾರ್ಯಕರ್ತೆಯರನ್ನು ಮುಲಾಜಿಲ್ಲದೆ ತೆಗೆದು ಹಾಕುವಂತೆ ಒತ್ತಾಯಿಸಿದರು.
ಸುಮಾರು ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಮೇಲ್ವಿಚಾರಕಿಯರನ್ನು ಬೇರೆಡೆ ವರ್ಗಾಯಿಸಲು ಶಿಪಾರಸ್ಸು ಮಾಡುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ತಾಪಂ ಯೋಜನಾಧಿಕಾರಿ ಹಣಮಂತ ಮಾತನಾಡಿ ಪ್ರಸ್ತಕ ವರ್ಷಕ್ಕೆ ಸರ್ಕಾರದಿಂದ 21 ಕೋಟಿ ಅನುದಾನ ಬಂದಿದೆ.
ಮುಂದಿನ ದಿನಗಳಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಯಾವ ಯಾವ ಕೆಲಸ ಕೈಗೊಳ್ಳಬೇಕು ಎನ್ನುಉದರ ಬಗ್ಗೆ ಸದಸ್ಯರು ತಿಳಿಸಬೇಕು ಎಂದು ಹೇಳಿದರು. ತಾಲೂಕಿನ ಕೊತ್ತಾಪಲ್ಲಿ, ಕಾನಗಡ್ಡಾ, ಇಟಕಾಲ, ದುಗನೂರ, ಬಿಲಾಕಲ್, ಹಣಮನಹಳ್ಳಿ ಗ್ರಾಮಗಳನ್ನು 2017-18ನೇ ಸಾಲಿನ ಗೊಂಚಲು ಗ್ರಾಮಗಳನ್ನಾಗಿ ಆಯ್ಕೆಗೊಳಿಸಲಾಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಎ. ವೈ. ಹಂಪಣ್ಣ ಮಾತನಾಡಿ, ಮುಂಗಾರು ಬೆಳೆಗೆ ವಾಡಿಕೆಯಷ್ಟು ಮಳೆಯಾಗುತ್ತದೆ ಎನ್ನುವುದು ಹವಾಮಾನ ಇಲಾಖೆ ನಿರೀಕ್ಷೆಯಾಗಿದೆ. ಅದರಂತೆ ಈಗಾಗಲೇ ಬಿತ್ತನೆಗೆ ಬೇಕಾಗುವ ಬೀಜಗಳನ್ನು ಶೇಖರಿಸಲಾಗಿದೆ. ಯಾವುದೆ ರೀತಿಯಿಂದ ಬೀಜಗಳ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ ಶೆಟಗಾರ, ಸದಸ್ಯರಾದ ವೆಂಕಟರಾಮರೆಡ್ಡಿ ಕಡತಾಲ, ಚನ್ನಬಸಪ್ಪ ಹಾಗರಗಿ(ಜಗ್ಗು), ನಾಗರೆಡ್ಡಿ ದೇಶಮುಖ, ಸತ್ಯನಾರಾಯಣರೆಡ್ಡಿ ದೇಶಮುಖ, ಅನವೇಶರೆಡ್ಡಿ ಹೂವಿನಭಾವಿ, ಡಾ| ವೆಂಕಟರಾವ ಮಿಸ್ಕಿನ್, ಪ್ರೀತಿ ಸಾಯಿಬಣ್ಣ, ಸಿದ್ದಮ್ಮ ಶಾಮಪ್ಪ,
ರಾಮುನಾಯಕ, ಸುನೀತಾ ಪರಶುರಾಮರೆಡ್ಡಿ, ಇಂದ್ರಾದೇವಿ ಬಸವರಾಜಪ್ಪಗೌಡ, ಪದ್ಮಮ್ಮ ರವೀಂದ್ರ, ಮಲ್ಲಿಕಾರ್ಜುನರೆಡ್ಡಿ ಕೋಲಕುಂದಾ, ದೇವಮ್ಮ ರಾಮಲಿಂಗಪ್ಪ, ಅಧಿಕಾರಿಗಳಾದ ಸಂತೋಷ ಶೇಷಲು, ಮಾರುತಿ ನಾಯಕ, ಗುರುರಾಜ ಜೋಶಿ, ಶಶಿಕಾಂತ ನಂದೂರ, ಎಸ್.ಎಮ್. ನಾರಾಯಣಕರ್,
ಮುಕುಂದರೆಡ್ಡಿ ಪಾಟೀಲ, ಸಂತೋಷಕುಮಾರ, ತಿಮ್ಮಾರೆಡ್ಡಿ, ಶಿವಶಂಕರ ಟಿ.ಡಿ, ಅಶೋಕ ಪಾಟೀಲ, ಭೀಮಾಶಂಕರ ಕಟ್ಟಿಮನಿ, ರಾಜು ಕುಲಕರ್ಣಿ, ಶಿವಪುತ್ರಪ್ಪ ಮಮ್ಮಶೆಟ್ಟಿ, ಮಂಜುನಾಥ ಭೂಶೆಟ್ಟಿ, ಎಸ್.ಎನ್. ರವೀಂದ್ರ, ಬಸವರಾಜ ಅವಂಟಿ ಇದ್ದರು. ರವಿ ಕುದುರೆನ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.