ಶರಣಬಸವೇಶ್ವರ ಅದ್ಧೂರಿ ರಥೋತ್ಸವ
Team Udayavani, Mar 18, 2017, 3:27 PM IST
ಜೇವರ್ಗಿ: ಮಹಾದಾಸೋಹಿ ಶರಣಬಸವೇಶ್ವರರ ಜನ್ಮಸ್ಥಳ ತಾಲೂಕಿನ ಸುಕ್ಷೇತ್ರ ಅರಳಗುಂಡಗಿಯಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ಧೂರಿ ರಥೋತ್ಸವ ಜರುಗಿತು. ಶರಣಬಸವೇಶ್ವರ ಸಂಸ್ಥಾನದ ಬಲವಂತ ಶರಣರ ಸಾನಿದ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗ್ಗೆ ಶರಣನ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಗ್ರಾಮದ ಸದ್ಭಕ್ತರಿಂದ ದೀಡ್ ನಮಸ್ಕಾರ ಹಾಗೂ ನೈವೇದ್ಯ ಅರ್ಪಿಸಲಾಯಿತು. ಸಂಜೆ ಮಾಲಿಗೌಡರ ಮನೆಯಿಂದ ಕಳಸ ಬಂದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಪಲ್ಲಕ್ಕಿ ಉತ್ಸವ ಜರುಗಿತು.
ಸಂಜೆ 6:00 ಗಂಟೆಗೆ ಜರುಗಿದ ರಥೋತ್ಸವಕ್ಕೆ ಬಲವಂತ ಶರಣರು ಚಾಲನೆ ನೀಡಿದರು. ರಥೋತ್ಸವ ಸಂದರ್ಭದಲ್ಲಿ ಭಕ್ತಾಧಿದಿಗಳು ಉತ್ತತ್ತಿ, ಬದಾಮಿ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ನಂತರ ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ನಾಟಕ ಪ್ರದರ್ಶನ, ಭಜನೆ, ಗೀಗೀ ಪದ, ಲಾವಣಿ ಪದ, ಸಂಗೀತ ಕಾರ್ಯಕ್ರಮಗಳು ಜರುಗಿದವು.
ರಥೋತ್ಸವದ ಸಂದರ್ಭದಲ್ಲಿ ಪ್ರಮುಖರಾದ ಭೀಮರಾಯಗೌಡ ಹಿರೇಗೌಡರ, ಹುಲಕಂಟರಾಯಗೌಡ ಮುದಬಸಪ್ಪಗೋಳ, ಬಸವರಾಜ ಮಾಲಿಪಾಟೀಲ, ರೇವಣಸಿದ್ಧಪ್ಪಗೌಡ ಕಮಾಮನಮನಿ, ಬಸವಂತ್ರಾಯ ಜೋತೆಪ್ಪಗೋಳ, ಶಿವಶರಣಪ್ಪ ಗತ್ತರಗಿ, ಗುರುಸಿದ್ದಪ್ಪ ದಾದಾಗೋಳ, ಗುರುಲಿಂಗಯ್ಯ ಸ್ಥಾವರಮಠ, ಮಹಾಂತಪ್ಪ ಸಾಹು ಶ್ರೀಗಿರಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.