17ರಂದು ಶರಣಬಸವೇಶ್ವರ ರಥೋತ್ಸವ
Team Udayavani, Mar 14, 2017, 3:52 PM IST
ಕಲಬುರಗಿ: ಕಲ್ಯಾಣ ನಾಡಿನ ಆರಾಧ್ಯ ದೈವ, ಮಹಾದಾಸೋಹಿ, ಐತಿಹಾಸಿಕ ಶರಣಬಸವೇಶ್ವರ 195ನೇ ಯಾತ್ರಾ ಮಹೋತ್ಸವಕ್ಕೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರ ನೇತೃತ್ವ ಹಾಗೂ ಸನ್ನಿಧಾನದಲ್ಲಿ ಸಿದ್ಧತೆಗಳು ನಡೆದಿದ್ದು, ಮಾ. 16ರಂದು ಸಂಜೆ 6:00ಕ್ಕೆ ಉಚ್ಚಾಯಿ ಹಾಗೂ 17ರಂದು ಸಂಜೆ 6:00ಕ್ಕೆ ಮಹಾರಥೋತ್ಸವ ನಡೆಯಲಿದೆ.
ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಾಡಿನ ಜನರಲ್ಲದೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದು, ಜಾತ್ರಾ ಮಹೋತ್ಸವ ಯುಗಾದಿ ಹಬ್ಬದ ದಿನದವರೆಗೂ ನಡೆಯುತ್ತದೆ. ಯಾತ್ರಾ ಮಹೋತ್ಸವ ಅಂಗವಾಗಿ ಮಾ. 13ರಿಂದ 18ರ ವರೆಗೆ ಶಿವಾನುಭವ ವಿಶೇಷ ಉಪನ್ಯಾಸ ಮಾಲಿಕೆ ನಡೆಯಲಿದೆ.
ಮಾ. 14ರಂದು ಸಂಜೆ 6:00ಕ್ಕೆ ಶರಣಬಸವೇಶ್ವರ ಲೀಲಾವಿಲಾಸ ಪುರಾಣವನ್ನು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಧಿಪತಿಗಳಾದ ಪರಮಪೂಜ್ಯ ಡಾ| ಶರಣಬಸವಪ್ಪ ಅಪ್ಪ ಬಿಡುಗಡೆ ಮಾಡುವರು. ಹಿಂದಿ ಭಾಷೆಯಲ್ಲಿ ಈ ಪುರಾಣವನ್ನು ಹಾವಗಿಸ್ವಾಮಿ ಶಾಸ್ತ್ರೀಯವರು ಭಾವಾನುವಾದ ಮಾಡಿದ್ದಾರೆ ಮತ್ತು ಮರಾಠಿ ಭಾಷೆಯಲ್ಲಿ ಸಂತಕವಿ ಸದ್ಗುರು ಬಸವಲಿಂಗ ಶಾಸ್ತ್ರೀ ಮಹಾರಾಜ ಹಣೆಗಾಂವ ರಚಿಸಿದ್ದಾರೆ.
ಅಲ್ಲದೆ ಶರಣಬಸವೇಶ್ವರರ ಪುರಾಣವು ಸಂಸ್ಕೃತ, ತೆಲುಗುಭಾಷೆಯಲ್ಲಿ ಸಹ ರಚನೆಯಾಗಿರುವುದು ಮತ್ತೂಂದು ವಿಶೇಷವಾಗಿದೆ.ಮಾ. 14ರಂದು ಶರಣಬಸವರ ಕಾಯಕ ದಾದೋಹ ಕುರಿತಾಗಿ ಪ್ರೊ| ಕ್ಷೇಮಲಿಂಗ ಬಿರಾದಾರ ಉಪನ್ಯಾಸ ನೀಡುವರು. 15ರಂದು ಶರಣಬಸವೇಶ್ವರ ಮಹಾದಾಸೋಹ ಯಾತ್ರೆ ಕುರಿತು ಡಾ| ನೀಲಾಂಬಿಕಾ ಪೊಲೀಸ್ ಪಾಟೀಲ ಉಪನ್ಯಾಸ ನೀಡುವರು.
ಅದೇ ರೀತಿ 16ರಂದು ಸಂಜೆ 6:00ಕ್ಕೆ ಕಲಬುರಗಿಯಲ್ಲಿ ಶರಣಬಸವರು ಕುರಿತು ಪ್ರೊ| ವೆಂಕಣ್ಣ ದೊನೆಗೌಡರು, 17ರಂದು ಶರಣಬಸವರ ಲಿಂಗೈಕ್ಯ ಲೀಲೆ ಕುರಿತು ಪ್ರೊ| ಆನಂದ ಸಿದ್ಧಾಮಣಿ, 18ರಂದು ಶರಣಬಸವರು ಮತ್ತು ಪ್ರಸ್ತುತ ಸಮಾಜ ಕುರಿತು ಡಾ| ಸೋಮಶಂಕರಯ್ಯ ವಿಶ್ವನಾಥಮಠ ಉಪನ್ಯಾಸ ನೀಡುವರು.
ಡಾ| ಕಲಾವತಿ ದೊರೆ, ಪ್ರೊ| ಶ್ರೀಶೈಲ ಹಿರೇಮಠ, ಚನ್ನಮ್ಮ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಪ್ರೊ| ಎಂ.ಎಸ್. ಪಾಟೀಲ ಹಾಗೂ ವೀರಭದ್ರಯ್ಯ ಸ್ಥಾವರಮಠ ಅವರು ತಬಲಾಸಾಥ್ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.