ಚಿಂಚನಸೂರ-ಸಂಗೋಳಗಿ ರಸ್ತೆ ಕಳಪೆ: ಆರೋಪ
Team Udayavani, Jul 26, 2022, 2:57 PM IST
ಆಳಂದ: ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ತಾಲೂಕಿನ ಚಿಂಚನಸೂರನಿಂದ ಸಂಗೋಳಗಿ ಗ್ರಾಮದ ಪ್ರೌಢಶಾಲೆ ವರೆಗಿನ 4ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 2ಕಿ.ಮೀ ರಸ್ತೆ ಕಾಮಗಾರಿ ಕ್ರಿಯಾ ಯೋಜನೆಯಂತೆ ಆಗದೇ ಕಳಪೆಯಾಗುತ್ತಿದೆ ಎಂದು ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಸಂಚಾಲಕ ಸುಧಾಮ ಧನ್ನಿ, ಸಹ ಸಂಚಾಲಕ ಪಾಂಡು ರಂಗ ಮಾವೀನಕರ್ ದೂರಿದ್ದಾರೆ.
ಈ ರಸ್ತೆ ಚಿಂಚನಸೂರನಿಂದ ನರೋಣಾ ಮಾರ್ಗದ ಐದು ಕಿ.ಮೀ ರಸ್ತೆಯಾಗಿದೆ. ಸದ್ಯ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಡಿ ಚಿಂಚನಸೂರನಿಂದ ಸಂಗೋಳಗಿ ವರೆಗಿನ 2ಕಿ.ಮೀ ರಸ್ತೆ ಕಾಮಗಾರಿಗೆ 4ಕೋಟಿ ರೂ. ಅನುದಾನವಿದೆ. ಕೈಗೆತ್ತಿಕೊಂಡ ಈ ಕಾಮಗಾರಿ ಕ್ರಿಯಾ ಯೋಜನೆಯಂತೆ ನಡೆಯುತ್ತಿಲ್ಲ. ಮುರುಮ, ಕಂಕರ ಬಳಸದೇ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಮುರುಮ ಬದಲು ಸತ್ವ ಕಳೆದುಕೊಂಡ ಮಣ್ಣು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಮಗಾರಿಯ ಕ್ರಿಯಾ ಯೋಜನೆಯಂತೆ ಒಂದುವರೆ ಮೀಟರ್ ಆಳವಾಗಿ ತಗ್ಗು ತೆಗೆದು ಮುರುಮ ಸೋಲಿಂಗ್, ಬಿಳಿ ಸಿಮೆಂಟ್ ಹಾಕಿ ತಳಪಾಯ ಮಾಡುವ ನಿಯಮವನ್ನು ಗಾಳಿಗೆ ತೂರಿದ್ದಾರೆ. ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುವ ಷಡ್ಯಂತ್ರ ನಡೆಸಿದ್ದಾರೆ. ಈ ಕುರಿತು ರಾಜ್ಯದ ಮುಖ್ಯ ಇಂಜಿನಿಯರ್ ಗೆ ದೂರು ನೀಡಲಾಗುವುದು. ಕೂಡಲೇ ಕಾಮಗಾರಿ ತಡೆಹಿಡಿದು ಸಂಬಂ ಧಿತ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.