Chincholi ; ಮೂರು ದಿನಗಳಿಂದ ಸುರಿಯುತ್ತಿರುವ ಮಳೆ: ರಸ್ತೆಗಳು ಜಲಾವೃತ
Team Udayavani, Sep 4, 2023, 6:27 PM IST
ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದೋಟಿಕೊಳ ಮತ್ತು ಹೂಡದಳ್ಳಿ ಹಾಗೂ ಧರ್ಮಾಸಾಗರ, ಅಂತಾವರಂ,ಲಿಂಗಾನಗರ,ಹಸರಗುಂಡಗಿ,ಐನಾಪೂರ, ತುಮಕುಂಟಾ, ಕೊಳ್ಳುರ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.
ತಾಲೂಕಿನಲ್ಲಿ ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕನಕಪುರ,ತಾಜಲಾಪುರ ರಸ್ತೆ ಮಾರ್ಗದಲ್ಲಿ ಇರುವ ಸೇತುವೆ ಮೇಲಿಂದ ಭಾರಿ ಪ್ರಮಾಣದಲ್ಲಿ ನೀರು ರಭಸದಿಂದ ಹರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ತಾಲೂಕಿನ ಚಿಂತಪಳ್ಳಿ.ಭೂತಪುರ ರಸ್ತೆ, ಮರಪಳ್ಳಿ,ಶಿವರೆಡ್ದಿ,ಪೋಚಾವರಂ,ಸಂಗಾಪೂರ, ಪರದಾರ ಮೋತಕಪಳ್ಳಿ,,ಮಿರಿಯಾಣ, ಶಾದಿಪುರ,ಲಚಮಾಸಾಗರ, ಬೊನಸಪುರ,ಕಲ್ಲೂರ,ಸಾಲೇಬೀರನಳ್ಳಿ, ಸಲಗರ ಕಾಲೋನಿ,ಗಡಿಕೇಶ್ವರ, ಬಂಟನಳ್ಳಿ,ಕೊರಡಂಪಳ್ಳಿ, ಗಣಾಪುರ,ಬುರಗಪಳ್ಳಿ ಗ್ರಾಮಗಳ ಹತ್ತಿರದ ನಾಲಾ ತುಂಬಿ ಹರಿಯುತ್ತಿವೆ .ಇದರಿಂದಾಗಿ ಜನರು ಹೊರಗಡೆ ಹೋಗಲು ಮತ್ತು ಊರೊಳಗೆ ಬರುವುದಕ್ಕೆ ತೊಂದರೆ ಪಡಬೇಕಾಗಿದೆ.
ಚಿಂಚೋಳಿ ತಾಲೂಕಿನಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ.ದನಕರುಗಳು ಮನೆಯಲ್ಲಿಯೇ ಕಟ್ಟಿ ಹಾಕಿರುವುದರಿಂದ ಮೇವಿನ ಸಮಸ್ಯೆ ಉಂಟಾಗಿದೆ. ತಾಲೂಕಿನಲ್ಲಿ ಹಳ್ಳಕೊಳ್ಳಗಳು ಭರ್ತಿಯಾಗಿ ತುಂಬಿ ತುಳುಕುತ್ತಿವೆ. ಜನರ ಸಂಚಾರ ವಾಹನಗಳ ಓಡಾಟ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಶ್ರಾವಣ ಮಾಸ ನಡುವಿನ ಸೋಮವಾರ ಆಗಿರುವುದರಿಂದ ವಿವಿಧ ದೇವಾಲಯಗಳಿಗೆ ಹೋಗುವ ಭಕ್ತರಿಗೆ ಮಳೆ ಅಡ್ಡಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.