ಚಿಂಚೋಳಿ: 99,767 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿ ಬಿತ್ತನೆ
Team Udayavani, May 22, 2020, 3:47 PM IST
ಸಾಂದರ್ಭಿಕ ಚಿತ್ರ
ಚಿಂಚೋಳಿ: 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 99,767 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೊಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ಮುಂಗಾರು ಮಳೆಗಳು ಉತ್ತಮವಾಗಿವೆ ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಬೇಗನೆ ಬಿತ್ತನೆ ಕಾರ್ಯ ಪ್ರಾರಂಭ ಆಗುವ ಸಾಧ್ಯತೆ ಇದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟ ನಾಶಕಗಳನ್ನು ಸಂಗ್ರಣೆ ಮಾಡಿಕೊಳ್ಳಲಾಗಿದೆ. ಬಿತ್ತನೆ ಬೀಜಗಳ ಮತ್ತು ರಸಗೊಬ್ಬರ ಕೊರತೆ ಇಲ್ಲ ಎಂದರು.
ಬಿತ್ತನೆ ಕ್ಷೇತ್ರದ ವಿವರ: ಹೆಸರು 12,000 ಹೇಕ್ಟರ್, ಉದ್ದು 7,000 ಹೆಕ್ಟೇರ್, ತೊಗರಿ 69,500 ಹೇಕ್ಟರ್, ಅವರೆ 25 ಹೆಕ್ಟೇರ್, ಸೋಯಾಬಿನ 700 ಹೆಕ್ಟೇರ್, ಹೈಬ್ರಿಡ್ ಜೋಳ 310 ಹೆಕ್ಟೇರ್, ಸಜ್ಜೆ 1,000 ಹೆಕ್ಟೇರ್, ಮೆಕ್ಕೆಜೋಳ 200 ಹೆಕ್ಟೇರ್, ಎಳ್ಳು 650 ಹೆಕ್ಟೇರ್, ಹೈಬ್ರಿಡ್ ಹತ್ತಿ 150 ಹೆಕ್ಟೇರ್, ಕಬ್ಬು 1,487 ಹೆಕ್ಟೇರ್ ಹಾಗೂ ಇತರೆ 15 ಹೆಕ್ಟೇರ್ ಬಿತ್ತನೆ ಗುರಿ ಇದೆ. ದ್ವಿದಳ ಧಾನ್ಯ 22,222 ಹೆಕ್ಟೇರ್, ಎಣ್ಣಿಕಾಳು ಬೆಳೆ 1926.25 ಹೆಕ್ಟೇರ್ ಏಕದಳ ಧಾನ್ಯ 383.75 ಹೆಕ್ಟೇರ್, ವಾಣಿಜ್ಯ ಬೆಳೆ 409.28 ಹೆಕ್ಟೇರ್ ಬಿತ್ತನೆ ಆಗಲಿದೆ. ತೊಗರಿ 155 ಕ್ವಿಂಟಲ್, ಸೋಯಾಬಿನ್ 99.60 ಕ್ವಿಂಟಲ್ ಬೀಜ ಪೂರೈಕೆ ಆಗಿದೆ. ರಸಗೊಬ್ಬರ: ಯೂರಿಯಾ 10 ಟನ್, ಡಿಎಪಿ 2220 ಟನ್, ಎಂಒಪಿ 30 ಟನ್, ಕಾಂಪೋಸ್ಟ್ 50 ಟನ್ ಸೇರಿದಂತೆ 2,315 ಮೆಟ್ರಿಕ್ ಟನ್ ಸಂಗ್ರಹವಿದೆಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.