ಚಳಿಯಿಂದ ತತ್ತರಿಸಿದ ಚಿತ್ತಾಪುರ
Team Udayavani, Dec 20, 2018, 11:10 AM IST
ಚಿತ್ತಾಪುರ: ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನದಿಂದ ಮೋಡ ಕವಿದ ವಾತಾವರಣ ಹಾಗೂ ಶೀತ ಗಾಳಿ, ಮಂಜಿನ ಮುಸುಕಿನಿಂದ ಜನತೆ ನಡುಗುತ್ತಿದ್ದಾರೆ.
ಮುಂಜಾನೆ ನಸುಕಿನ ಜಾವದಲ್ಲಿ ಸೂರ್ಯ ಬರಲು ತಡವಾಗುತ್ತಿದ್ದು, ಬಿಸಿಲನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಒಂದೆಡೆಯಾದರೆ, ಮಂಜು ಕವಿದ ವಾತಾವರಣದಿಂದ ವಾಹನ ಸವಾರರು ಬೆಳಕಾದರೂ ದೀಪ ಹಾಕಿಕೊಂಡು ಹೋಗುವ ಸಾಮಾನ್ಯ ದೃಶ್ಯಗಳು ಕಂಡು ಬರುತ್ತಿವೆ.
ಮುಂಜಾನೆ ವಾಯು ವಿಹಾರಕ್ಕೆ ಹೋಗುವವರಂತೂ ಮೈ ಕೊರೆಯುವ ಚಳಿಯಿಂದ ಮನೆ ಬಿಟ್ಟು ಹೊರಗೆ ಹೋಗುತ್ತಿಲ್ಲ. ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸ್ವೆಟರ್, ಟೋಪಿ, ಜಾಕೀಟ್‌ಗಳಿಲ್ಲದೇ ಬರುತ್ತಿಲ್ಲ. ಶಾಲೆಯ ಕೋಣೆಯಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಬೇಕಾದ ವಿದ್ಯಾರ್ಥಿಗಳು ಶಿಕ್ಷಕರ ಜೊತೆ ವಾದ ಮಾಡಿ ಬಿಸಿಲಿನಲ್ಲಿಯೇ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ.
ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಚಳಿ ಎಲ್ಲಿಂದ ಬರುತ್ತದೆ ಎಂದು ತಿಳಿದ್ದವರೀಗ ಹೊರಗೆ ಬರುತ್ತಿಲ್ಲ. ಒಂದು ವೃಳೆ ಹೊರಗೆ ಬಂದರೂ ಮಧ್ಯಾಹ್ನ 12 ಗಂಟೆ ಮೇಲೆ. ಅದೂ ಮುಖಕ್ಕೆ ಮಫ್ಲರ್, ಟವಲ್, ದಸ್ತಿ, ಟೋಪಿ ಹಾಗೂ ಕಾಲಿಗೆ ಶೂ ಹಾಕಿಕೊಂಡು ಬರುತ್ತಿದ್ದಾರೆ. ಸಂಜೆ 5 ಗಂಟೆಯಾಗುತ್ತಿದ್ದಂತೆ ಮತ್ತೇ ಮನೆ ಕಡೆ ಮುಖ ಮಾಡಿ ಮನೆಯಲ್ಲಿನ ಕಿಟಕಿ, ಬಾಗಿಲು ಮುಚ್ಚಿಕೊಂಡು ಬೆಚ್ಚಗೆ ಕುಳಿತುಕೊಳ್ಳುತ್ತಿದ್ದಾರೆ.
ಪಟ್ಟಣಕ್ಕೆ ಸರ್ಕಾರಿ ಕೆಲಸಕ್ಕೆ ಅಥವಾ ವ್ಯಾಪಾರಕ್ಕೆ ತಮ್ಮ ದಿನನಿತ್ಯದ ಕೆಲಸಕ್ಕೆಂದು ಸುತ್ತಮುತ್ತಲಿನ ಅಳ್ಳೊಳ್ಳಿ,
ಸಾತನೂರ, ಹೊಸ್ಸುರ್, ದಿಗ್ಗಾಂವ, ಮುಡಬೂಳ, ದಂಡೋತಿ, ರಾವೂರ, ಯರಗಲ್, ದಂಡಗುಂಡ, ಸಂಕನೂರ, ಡೋಣಗಾಂವ, ಭೀಮನಳ್ಳಿ ಸೇರಿದಂತೆ ಇತರೆ ಗ್ರಾಮ ಗಳಿಂದ ಬರುವ ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಹುಲ್ಲು, ಕಟ್ಟಿಗೆ, ಪೇಪರ್‌ಗಳನ್ನು ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.