Chittapur: ಅಣ್ಣನನ್ನೇ ಹತ್ಯೆಗೈದ ತಮ್ಮ, ತಿಂಗಳ ಹಿಂದೆ ನಡೆದ ಘಟನೆ ಪೊಲೀಸರ ತನಿಖೆಯಿಂದ ಬಯಲು
Team Udayavani, Aug 26, 2024, 10:41 AM IST
ಚಿತ್ತಾಪುರ: ತನ್ನ ಹೆಂಡತಿಯೊಡನೆ ಸಲುಗೆಯಿಂದ ಇದ್ದ ತಮ್ಮನನ್ನು ಬೈದಿದ್ದಕ್ಕೆ ಸಿಟ್ಟಿಗೆದ್ದ ತಮ್ಮ ಅಣ್ಣನನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಇಟಗಾ ಗ್ರಾಮದಲ್ಲಿ ನಡೆದಿದೆ.
ಕಾಮಣ್ಣ ದೊಡ್ಡ ಹಣಮಂತ (35) ಮೃತ ದುರ್ದೈವಿಯಾಗಿದ್ದು ತಮ್ಮ ಸುರೇಶ ದೊಡ್ಡ ಹಣಮಂತ ಆರೋಪಿಯಾಗಿದ್ದಾನೆ.
ಕಾಮಣ್ಣನ ಅನುಮಾನಾಸ್ಪದ ಸಾವಿನ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ತಮ್ಮನ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಆರೋಪಿ ಸುರೇಶ ದೊಡ್ಡ ಹಣಮಂತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಪ್ರಕರಣ:
ಜು.5ರಂದು ಇಟಗಾ ಗ್ರಾಮದಲ್ಲಿ ಕಾಮಣ್ಣ ದೊಡ್ಡ ಹಣಮಂತ ಅವರ ಮೃತದೇಹ ಅವರ ಮನೆಯ ಪಕ್ಕದಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ಮನೆಮಂದಿ ಮನೆಯ ಛತ್ತಿನ ಮೇಲಿನಿಂದ ಬಿದ್ದು ಮೃತಪಟ್ಟಿರಬೇಕು ಎಂದು ಭಾವಿಸಿ ಅಂತ್ಯಕ್ರಿಯೆ ಮಾಡಲಾಗಿತ್ತು.
ಆದರೆ ಮಗನ ಸಾವಿನ ಕುರಿತು ಸಂಶಯವಿದೆ ಎಂದು ಮೃತ ಕಾಮಣ್ಣನ ತಾಯಿ ಪಾರ್ವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹೂತಿದ್ದ ಕಾಮಣ್ಣನ ಶವವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಹೊರಗೆ ತೆಗೆಸಿ ಮರಣೋತ್ತರ ಶವಪರೀಕ್ಷೆ ಮಾಡಿಸಿದ್ದರು.
ಶವ ಪರೀಕ್ಷೆ ವರದಿಯಲ್ಲಿ ಕೊಲೆ ಆಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು, ಇದಕ್ಕೆ ಸಂಬಂಧಿಸಿ ಆ.23ರಂದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಸೇಡಂ ತಾಲೂಕಿನ ತೊಲಮಾಮಡಿ ಗ್ರಾಮದಲ್ಲಿ ಹೊಲ ಖರೀದಿ ಮಾಡಿದ್ದ ಕಾಮಣ್ಣ ದೊಡ್ಡ ಹಣಮಂತ ಮಾರಾಟ ಮಾಡುವುದು ಬೇಡ ಎಂದರೂ ಕೇಳದೆ ಎರಡು ತಿಂಗಳ ಹಿಂದೆ 56 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಅಲ್ಲದೆ ಹೊಲ ಮಾರಿದ ಸ್ವಲ್ಪ ಹಣವನ್ನು ಕಾಮಣ್ಣ ತಂದೆ-ತಾಯಿ ಹೆಸರಿನಲ್ಲಿ, ಇನ್ನೂ ಸ್ವಲ್ಪ ಹಣವನ್ನು ತನ್ನ ಹೆಸರಿನಲ್ಲಿ ಇಟ್ಟಿದ್ದ. ಆದರೆ ತಮ್ಮ ಸುರೇಶನ ಹೆಸರಿನಲ್ಲಿ ಹಣ ಇಟ್ಟಿರಲಿಲ್ಲ. ಕೇಳಿದರೂ ಕೊಟ್ಟಿರಲಿಲ್ಲ ಎಂದು ತಿಳಿದು ಬಂದಿದೆ. ಈ ವಿಚಾರದಲ್ಲೂ ಅಣ್ಣನ ಮೇಲೆ ಸಿಟ್ಟು ಮಾಡಿಕೊಂಡಿದ್ದ ತಮ್ಮ ಜೊತೆಗೆ ಅತ್ತಿಗೆಯ ಜೊತೆ ಸುರೇಶ ಸಲುಗೆಯಿಂದ ಇದ್ದ ಎನ್ನಲಾಗಿದೆ ಈ ವಿಚಾರಕ್ಕೆ ಅಣ್ಣ ಸುರೇಶನಿಗೆ ಬೈದಿದ್ದ ಎನ್ನಲಾಗಿದೆ ಇದರಿಂದ ಸಿಟ್ಟಿಗೆದ್ದ ಸುರೇಶ ಅಣ್ಣನನ್ನು ಹತ್ಯೆಗೈದು ಮನೆಯ ಬದಿ ಎಸೆದಿದ್ದ ಎಂದು ತನಿಖೆ ವೇಳೆ ಹೇಳಿಕೊಂಡಿದ್ದಾನೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ತನಿಖಾ ತಂಡದ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮ (ತನಿಖೆ), ಎಎಸ್ಐ ಲಾಲಾಹ್ಮದ್, ಸಿಬ್ಬಂದಿ ನಾಗೇಂದ್ರ, ಬಸವರಾಜ, ಚಂದ್ರಶೇಖರ, ಸವಿಕುಮಾರ, ಅಯ್ಯಣ್ಣ, ಸಿದ್ದರಾಮೇಶ, ಈರೇಶ, ವೀರಭದ್ರ ಇದ್ದರು.
ಇದನ್ನೂ ಓದಿ: IMD Alerts: ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯದಲ್ಲಿ ಭಾರಿ ಮಳೆಯ ಎಚ್ಚರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.