ಚಿತ್ತಾಪುರ ಬಂದ್‌ ಯಶಸಿ


Team Udayavani, Oct 10, 2017, 9:47 AM IST

gul-1.jpg

ಚಿತ್ತಾಪುರ: ರಾಜ್ಯದಲ್ಲಿ ಅತ್ಯಂತ ದೊಡ್ಡ ಎರಡನೇ ತಾಲೂಕು ಎನ್ನುವ ಹೆಗ್ಗಳಿಕೆ ಪಡೆದಿದ್ದ ಚಿತ್ತಾಪುರ ತಾಲೂಕನ್ನು ವಿಭಜಿಸಿ ಶಹಾಬಾದ ಮತ್ತು ಕಾಳಗಿ ತಾಲೂಕನ್ನಾಗಿ ರಚನೆ ಮಾಡಿದ್ದು ಜನಪರ ಆಡಳಿತಕ್ಕೆ ನಿದರ್ಶನ. ಅದೇ ರೀತಿ ಮೂರು ತಾಲೂಕುಗಳನ್ನು ಒಳಗೊಂಡ ಕಂದಾಯ ಉಪ ವಿಭಾಗ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಚಿತ್ತಾಪುರದಲ್ಲೆ ಸ್ಥಾಪಿಸಬೇಕು ಎಂದು ಚಿತ್ತಾಪುರ ನಾಗರಿಕ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಒತ್ತಾಯಿಸಿದರು.

ತಾಲೂಕಿನಲ್ಲಿ ಎರಡು ಪುರಸಭೆಗಳಿವೆ. ಶಹಾಬಾದನಲ್ಲಿ ನಗರಸಭೆಯಿದೆ. ನಾಲ್ಕು ಬೃಹತ್‌ ಕೈಗಾರಿಗೆ ಘಟಕಗಳನ್ನು ಒಳಗೊಂಡಿದ್ದು, ಅತಿ ಹೆಚ್ಚಿನ ಆದಾಯ ಬರುವ ಕೇಂದ್ರ ಸ್ಥಾನವಾಗಿದೆ. ಭೌಗೋಳಿಕವಾಗಿ ಮೂರು ತಾಲೂಕುಗಳನ್ನು ಒಂದುಗೂಡಿಸಿ ಕಂದಾಯ ಉಪ ವಿಭಾಗ ಮಾಡುವುದರಿಂದ ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಎಲ್ಲ ಇಲಾಖೆಗಳ ಕಟ್ಟಡಗಳ ಸೌಲಭ್ಯಗಳು ಚಿತ್ತಾಪುರದಲ್ಲಿವೆ. ಇದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕೆಂದು ಆಗ್ರಹಿಸಿದರು.

ಕಕ್ಷಿದಾರರು ಜಿಲ್ಲಾ ನ್ಯಾಯಾಲಯಕ್ಕೆ 80 ಕಿಮೀ ದೂರದವರೆಗೆ ಅಲೆದಾಡುವುದನ್ನು ತಪ್ಪಿಸಲು ಚಿತ್ತಾಪುರ, ಶಹಾಬಾದ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು, ಈ ಎರಡು ನ್ಯಾಯಾಲಯಗಳನ್ನು ಒಳಗೊಂಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಬೇಕು. ಶೇ.80 ರಷ್ಟು ಗ್ರಾಮಗಳ ಜನತೆಗೆ ಚಿತ್ತಾಪುರ ಸಮೀಪವಾಗುತ್ತದೆ. ಚಿತ್ತಾಪುರ, ಶಹಾಬಾದ, ಕಾಳಗಿಯಲ್ಲಿ ಜೆಸ್ಕಾಂ ಉಪ ವಿಭಾಗ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. 

ಈ ಮೂರು ಉಪ ವಿಭಾಗಗಳನ್ನು ಸೇರಿಸಿ ಜೆಸ್ಕಾಂ ವಿಭಾಗ ಸ್ಥಾಪಿಸಬೇಕು. ಪ್ರಸ್ತುತ ಅಖಂಡ (ಚಿತ್ತಾಪುರ, ಶಹಾಬಾದ, ಕಾಳಗಿ ಒಳಗೊಂಡು) ತಾಲೂಕಿನಿಂದ ಜಿಲ್ಲೆಗೆ ಹೆಚ್ಚಿನ ಅಬಕಾರಿ ಆದಾಯ ಸಂದಾಯವಾಗುತ್ತದೆ. ಅಬಕಾರಿ ವಿಭಾಗ ಕಚೇರಿ ಸ್ಥಾಪಿಸಬೇಕು. ಜಿಲ್ಲಾ ಭೂ ಸೇನಾ ನಿಗಮದಲ್ಲಿ ಹೆಚ್ಚಿನ ಕಾಮಗಾರಿಗಳು ಚಿತ್ತಾಪುರಕ್ಕೆ ಸಂಬಂಧಿಸಿದ ಕಾಮಗಾರಿಗಳಾಗಿವೆ. ಇದರಿಂದಾಗಿ ಭೂ ಸೇನಾ ನಿಗಮದ ವಿಭಾಗ ಕಚೇರಿಯನ್ನು ಇಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಬೃಹತ್‌ ಕೈಗಾರಿಕೆ ಹಾಗೂ ನೂರಾರು ಮಧ್ಯಮ ಕೈಗಾರಿಕೆ, ವಾಣಿಜ್ಯೋದ್ಯಮ ಹೊಂದಿದ್ದು, ತಾಲೂಕಿನಿಂದ ಅತಿ ಹೆಚ್ಚಿನ ವಾಣಿಜ್ಯ ತೆರಿಗೆ ಜಿಲ್ಲೆಗೆ ಸಂದಾಯವಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ವಾಣಿಜ್ಯ ಉಪ ವಿಭಾಗ ಕಚೇರಿ ಸ್ಥಾಪಿಸಬೇಕು. ಚಿತ್ತಾಪುರ, ಕಾಳಗಿಯಲ್ಲಿ ಪಂಚಾಯತ್‌ ರಾಜ್‌ ಉಪ ವಿಭಾಗ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಪಂಚಾಯತ್‌ ರಾಜ್‌ ವಿಭಾಗ ಕಚೇರಿ ಸ್ಥಾಪಿಸಬೇಕು. ರಾಜ್ಯ ಮತ್ತು ಹೊರ ರಾಜ್ಯದಿಂದ ಸಾರಿಗೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಬೃಹತ್‌ ಸಿಮೆಂಟ್‌ ಕಾರ್ಖಾನೆಗಳಿಗೆ ಬಂದು ಹೋಗುತ್ತಿವೆ. ಹೀಗಾಗಿ ಸಹಾಯಕ ರಸ್ತೆ ಸಾರಿಗೆ ಸಂಚಾರ (ಎ.ಆರ್‌.ಟಿ.ಒ) ಕಚೇರಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಚಿತ್ತಾಪುರದ ಶಾಸಕರು ಸಚಿವರಾಗಿದ್ದಾರೆ. ಅವರ ತಂದೆ ಸಂಸದರಾಗಿದ್ದಾರೆ. ಅವರು ಪ್ರಭಾವ ಬೀರಿ ಕಂದಾಯ ಉಪವಿಭಾಗ, ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಮಾಡಬೇಕು ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಅವಂಟಿ, ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಗೀರಿ, ಜೆಸ್ಕಾಂ ನಿರ್ದೇಶಕ ಮುಕ್ತಾರ ಪಟೇಲ್‌, ಮರೇಪ್ಪ ಹಳ್ಳಿ, ಬಸವರಾಜ ಬೆಣ್ಣೂರಕರ್‌, ಬಸವರಾಜ ಚಿಮ್ಮನಳ್ಳಿ ಮಾತನಾಡಿದರು.

ಚಿತ್ತಾಪುರ ಬಂದ್‌ ಕರೆಗೆ ವಿವಿಧ ಸಂಘಟನೆ, ತಾಲೂಕಿನ ಸಾರ್ವಜನಿಕರು, ರೈತರು, ಕಾಲೇಜು ವಿದ್ಯಾರ್ಥಿಗಳು, ಚುನಾಯಿತ ಪ್ರತಿನಿ ಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚಿತ್ತಾಪುರ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಕರೆ ಕೊಟ್ಟಿದ್ದರಿಂದ ಪಟ್ಟಣದ ಅಂಗಡಿ ಮುಂಗಟ್ಟು, ತರಕಾರಿ, ಪೇಟ್ರೋಲ್‌ ಬಂಕ್‌ ಗಳು ಬಂದ್‌ ಆಗಿದ್ದರಿಂದ ಬಿಕೋ ಎನ್ನುತ್ತಿದ್ದವು. 

ಪಟ್ಟಣದ ಲಾಡಿಜಿಗ್‌ ಕ್ರಾಸ್‌ಯಿಂದ ಪ್ರಾರಂಭವಾದ ಮೆರವಣಿಗೆಯು ಬಸವೇಶ್ವರ ಚೌಕ್‌, ಅಂಬೇಡ್ಕರ್‌ ವೃತ್ತ, ಭುವನೇಶ್ವರಿ ಚೌಕ್‌, ನಾಗಾವಿ ಚೌಕ್‌ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ತಹಶೀಲ್‌ ಕಚೇರಿಗೆ ತಲುಪಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಮಲ್ಲೇಶಾ ತಂಗಾ ಅವರಿಗೆ ಸಲ್ಲಿಸಿದರು.

ವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಮೂದ್‌ ಸಾಹೇಬ್‌, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್‌, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಅಶೋಕ ಸಗರ್‌, ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಸೂಲ್‌ ಮುಸ್ತಫಾ, ಮುಖಂಡರಾದ ಲಿಂಗರೆಡ್ಡಿಗೌಡ ಭಾಸರೆಡ್ಡಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್‌, ವೀರಣ್ಣಗೌಡ ಪರಸರೆಡ್ಡಿ, ಚಂದ್ರಶೇಖರ ಕಾಶಿ, ನಾಗರಾಜ ಭಂಕಲಗಿ, ಶೀಲಾ ಕಾಶಿ, ವಿನೋದ್‌ ಗುತ್ತೇದಾರ, ಇಸ್ಮಾಯಿಲ್‌ ಪಟೇಲ್‌ ಕಮರವಾಡಿ, ರವಿಂದ್ರ ಸಜ್ಜನಶೆಟ್ಟಿ, ಶಂಕರ್‌ ಚವ್ಹಾಣ, ಗೋಪಾಲ ರಾಠೊಡ, ಮಹೇಶ ಕಾಶಿ, ನರಹರಿ ಕುಲಕರ್ಣಿ, ಪ್ರಕಾಶ ಕಮಕನೂರ್‌, ದೇವಿಂದ್ರ ಅಣಕಲ್‌, ಇಬ್ರಾಹಿಂ ಪಟೇಲ್‌, ಶೇಖ ಬಬ್ಲು ಶಿವಾಜಿ ಕಾಶಿ, ಅಣ್ಣರಾವ ಮೂಡಬೂಳ, ಅಶ್ವಥ ರಾಠೊಡ, ಶಾಂತಪ್ಪ ಚಾಳಿಕಾರ್‌, ದೇವಿಂದ್ರಪ್ಪ ಕರದಾಳ, ಮಲ್ಲಿಕಾರ್ಜು ಕಾಳಗಿ, ದೀಲಿಪ ಕಾಶಿ ಇದ್ದರು.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.