ಕೈಮಗ್ಗ ಉತ್ಪನ್ನ ಉಳಿವಿಗೆ ಸಹಕರಿಸಿ
Team Udayavani, Aug 8, 2017, 3:35 PM IST
ಕಲಬುರಗಿ: ದೇಶದ ಸಂಪ್ರದಾಯಕ್ಕೆ ಪ್ರತೀಕವಾಗಿರುವ ಕೈಮಗ್ಗ ಹಾಗೂ ಖಾದಿ ಉತ್ಪನ್ನಗಳನ್ನು ಯುವಕರು ಬಳಸುವ ಮೂಲಕ ಅವಸಾನದ ಅಂಚಿನಲ್ಲಿರುವ ಕೈಮಗ್ಗ ಉತ್ಪನ್ನದ ಉದ್ದಿಮೆಯ ಪುನರ್ ಚೇತನಕ್ಕೆ ಸಹಕರಿಸಬೇಕೆಂದು ಕರ್ನಾಟಕ್ಕೆ ಕೇಂದ್ರಿಯ ವಿಶ್ವವಿದ್ಯಾಲಯ ಉಪಕುಲಾಧಿಪತಿ ಪ್ರೊ| ಎಚ್. ಎಂ.ಮಹೇಶ್ವರಯ್ಯ ತಿಳಿಸಿದರು.
ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಕಲಬುರಗಿ ಹಾಗೂ ಬಳ್ಳಾರಿ, ಕರ್ನಾಟಕ ಕೇಂದ್ರಿಯ ವಿವಿ ಕಡಗಂಚಿ, ಕೈಮಗ್ಗ ಮತ್ತು ಜವಳಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೈಮಗ್ಗ ಉದ್ದಿಮೆ ಅಳಿವಿನ ಅಂಚಿನಲ್ಲಿದೆ. ಈ ಉದ್ದಿಮಗೆ ಪ್ರೋತ್ಸಾಹದಾಯಕವಾದ ಮಾರುಕಟ್ಟೆ, ಯಂತ್ರೋಪಕರಣ
ನಿರ್ವಹಣೆ, ಮಾನವ ಶಕ್ತಿಯ ಕೊರತೆ ಎದುರಿಸುತ್ತಿದ್ದು ಇದನ್ನು ಪುನರ್ ಚೇತನಗೊಳಿಸಲು ಯುವಜನಾಂಗ ನವೀನತೆ ತಂದು ಬಳಕೆ ಮಾಡುವುದರ ಜೊತೆಗೆ ಅಳಿವಿನ ಅಂಚಿನಲ್ಲಿರುವ ಉದ್ದಿಮದ ಉಳಿವಿಗೆ ಮುಂದಾಗಬೇಕು ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ| ಜಿ.ಆರ್. ನಾಯಕ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಖಾದಿ ಹಾಗೂ ಕೈಮಗ್ಗ ಹೋರಾಟದ ಅಸ್ತ್ರವಾಗಿ ಬಳಕೆಯಾಗಿತ್ತು. ಭಾರತದ ಜನರನ್ನು ಒಂದುಗೂಡಿಸುವಲ್ಲಿ ಸಹಕಾರಿಯಾಗಿತ್ತು. ಈಗ ಈ ಉದ್ದಿಮೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಧರ್ಮವೀರ ಮಾಣಿಕರಾವ್ ಗಂಪಾ ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟಗಾರ ಶಾಮರಾವ್ ಕುಲಕರ್ಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇಬ್ಬರು ಸ್ವಾತಂತ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ| ರಮೇಶ ಮಾಳಾ, ಕೈಮಗ್ಗ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಚಾರಖಾನಿ ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ರಸ ಪ್ರಶ್ನೆ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಬಳ್ಳಾರಿಯ ಉಪನಿರ್ದೇಶಕರಾದ ಡಾ| ಜಿ.ಡಿ ಹಳ್ಳಿಕೇರಿ ಪ್ರಾಸ್ತಾವಿಕವಾಗಿ
ಮಾತನಾಡಿದರು. ಡಾ| ಗುರುಮೂರ್ತಿ ನಿರೂಪಿಸಿದರು. ಬಳ್ಳಾರಿ ಕ್ಷೇತ್ರದ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ವಂದಿಸಿದರು.
ಕೃಷಿ ಬಿಟ್ಟರೆ ಎರಡನೇ ದೊಡ್ಡ ಉದ್ಯಮ ಗ್ರಾಮೀಣ ಪ್ರದೇಶದ ಬಡವರ ಕೈಕಸುಬಾದ ಕೈಮಗ್ಗ ಅನೇಕ ಬಡವರಿಗೆ ಉದ್ಯೋಗ ನೀಡುತ್ತಿದೆ. ಕೃಷಿಯನ್ನು ಬಿಟ್ಟರೆ ಎರಡನೇಯ ಬಹು ದೊಡ್ಡ ಉದ್ದಿಮೆಯಾದ ಕೈಮಗ್ಗ ದೇಶದ ಆರ್ಥಿಕತೆಗೆ ಮಹತ್ವದ ಸ್ಥಾನ ನೀಡುತ್ತಿದೆ. ಇದಕ್ಕೆ ಹೊಸ ವಿನ್ಯಾಸ, ತಂತ್ರಗಾರಿಕೆ, ಆಧುನಿಕರಣ ಅಳವಡಿಸಿ ಮತ್ತೆ ಮುಂಚೂಣಿಗೆ ತರಲು ಕೇಂದ್ರ ಸರಕಾರ ಹಲವಾರು ನವನವೀನ ಕಾರ್ಯಕ್ರಮ ರೂಪಿಸುತ್ತಿದೆ. ನೇಕಾರರು ಯೋಜನೆಗಳ ಪ್ರಯೋಜನ ಪಡೆಯಬೇಕು.
ಡಾ| ಚನ್ನವೀರ ಆರ್.ಎಂ., ಸಮಾಜದ ಕಾರ್ಯ ವಿಭಾಗದ ಪ್ರಾಧ್ಯಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.