ಲಂಬಾಣಿಗರ ಸಮಗ್ರ ಅಭಿವೃದ್ಧಿ ಅಗತ್ಯ: ಜಾಧವ್‌


Team Udayavani, Aug 27, 2017, 10:58 AM IST

gul 4.jpg

ಕಲಬುರಗಿ: ಬಂಜಾರಾ ಭಾಷೆ, ಸಂಸ್ಕೃತಿ ಉಳಿಸುವ ಕಾರ್ಯ ಮಾಡಬೇಕಿದ್ದು, ಲಂಬಾಣಿಗರ ಸಮಗ್ರ ಅಭಿವೃದ್ಧಿಕಾರ್ಯ ನಡೆಯಬೇಕಿದೆ ಎಂದು ಚಿಂಚೋಳಿ ಕ್ಷೇತ್ರದ ಶಾಸಕ ಡಾ| ಉಮೇಶ ಜಾಧವ್‌ ಹೇಳಿದರು. ಗುಲಬುರ್ಗಾ ವಿಶ್ವವಿದ್ಯಾಲಯದ ಸಂತ ಶ್ರೀ ಸೇವಾಲಾಲ್‌ ಅಧ್ಯಯನ ಪೀಠ, ಪರ್ಯಾಯ ಸಮಾಜಕಾರ್ಯ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಹಮ್‌ ಗೋರ್‌ ಕಟಮಾಳ್ಳೋ
ಕರ್ನಾಟಕ ಸಂಘಟನೆಯ ಶನಿವಾರ ಆಯೋಜಿಸಿದ ರಾಜ್ಯಮಟ್ಟದ ಬಂಜಾರಾ ಯುವ ಚಿಂತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ತಾಂಡಾಗಳಲ್ಲಿ ಈಗಲೂ ಬಡತನ, ಅನರಕ್ಷತೆ ತಾಂಡವವಾಡುತ್ತಿದೆ. ಬಂಜಾರರ ಮೂಲ ಬೇರು ಮರೆಯಬಾರದು. ಇಂಥ ಚಿಂತನ ಶಿಬಿರಗಳು ನಡೆಯಬೇಕು. ಶಿಬಿರದ ಚಿಂತನಗಳನ್ನು ಸರಕಾರದ ಗಮನಕ್ಕೂ ತರಲಾಗುವುದು ಎಂದರು. ವಿಶ್ವವಿದ್ಯಾಲಯ ಕುಲಸಚಿವ ಡಾ| ಸಿ.ಎಸ್‌. ಪಾಟೀಲ ಮಾತನಾಡಿ, ಬಂಜಾರ ಸಮಾಜದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಎಲ್ಲರೂ ವಿದ್ಯಾವಂತರಾಗಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಹೊಸದಿಲ್ಲಿಯ ರಾಷ್ಟ್ರೀಯ ಬುಡಕಟ್ಟು ಆಯೋಗದ ಮಾಜಿ ಅಧ್ಯಕ್ಷ ಬಾಲಕೃಷ್ಣ ರೇಣುಕೆ ಮಾತನಾಡಿ, ಸಂತ ಶ್ರೀಸೇವಾಲಾಲ್‌ ಮಹಾರಾಜರ ವಿಚಾರಧಾರೆ ಇಡೀ ದೇಶದ ಬಂಜಾರರು ಅನುಸರಿಸುತ್ತಾರೆ. ಅವರರೊಬ್ಬ ಮಹಾನ್‌ ತತ್ವಜ್ಞಾನಿಯಾಗಿದ್ದರು. ಮೌಡ್ಯದ
ವಿರೋಧಿ ಯಾಗಿದ್ದರು. ಬಂಜಾರರನ್ನು ಗೋರ್‌, ಗೋರ್‌ ಮಾಟಿ, ಬಂಜಾರ ಎಂದು 15ರಿಂದ 20 ಉಪ ಪಂಗಡಗಳಿಂದ ಕರೆಯಲಾಗುತ್ತದೆ. ಬ್ರಿಟಿಷರು ಈ ಬಂಜಾರರನ್ನು ಕ್ತಿಮಿನಲ್‌
ಸಮುದಾಯ ಎಂದು ಘೋಷಿಸಿತ್ತು. 1952ರಲ್ಲಿ ಭಾರತ ಸರಕಾರ ಬ್ರಿಟಿಷರ ಕಾಯ್ದೆ ರದ್ದುಪಡಿಸಿತು. ಹೀಗಾಗಿ ಈ ಸಮುದಾಯಕ್ಕೆ ಅನುಕೂಲವಾಗಿದೆ ಎಂದರು. ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ, ಅಧ್ಯಯನ ಪೀಠದ ನಿರ್ದೇಶಕ ಡಾ| ದಶರಥ ನಾಯಕ, ಪರ್ಯಾಯ ಸಮಾಜ ಕಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ| ಮಹೇಶ ರಾಠೊಡ, ರಾಷ್ಟ್ರೀಯ ಕಾನೂನು ಶಾಲೆ ಅಧ್ಯಾಪಕ ಡಾ| ಪ್ರದೀಪ ರಾಮಾವತ್‌, ಹೈಕೋರ್ಟ್‌ ನ್ಯಾಯವಾದಿ ಅನಂತ ನಾಯ್ಕ, ಅಧ್ಯಾಪಕ ಡಾ| ಆನಂದ ನಾಯ್ಕ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಸತೀಶ ಚವ್ಹಾಣ, ಮುಖಂಡರಾದ ವಿಜಯಲಕ್ಷ್ಮೀ, ಡಾ| ಶಾರದಾದೇವಿ ಜಾಧವ್‌, ಸಂತೋಷ ರಾಠೊಡ, ಸಂತೋಷ ನಾಯ್ಕ ಹಾಜರಿದ್ದರು. ಹಮ್‌ಗೋರ್‌ನ ವಿಜಯಜಾಧವ್‌ ನಿರ್ವಹಿಸಿದರು. ಜೈಸಿಂಗ್‌ ಜಾಧವ್‌ ಪ್ರಾರ್ಥನಾ ಗೀತೆ ಹಾಡಿದರು. 

ಟಾಪ್ ನ್ಯೂಸ್

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

4

Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.