28ರೊಳಗೆ ಶೌಚಾಲಯ ಗುಂಡಿ ತೋಡುವ ಕೆಲಸ ಪೂರ್ಣಗೊಳಿಸಿ
Team Udayavani, Aug 21, 2018, 12:39 PM IST
ಕಲಬುರಗಿ: ಜಿಲ್ಲೆಯಲ್ಲಿ ನಿರ್ಮಿಸಲು ಬಾಕಿಯಿರುವ ಒಟ್ಟು 37,281 ಶೌಚಾಲಯಗಳನ್ನು ಸೆ. 15ರೊಳಗಾಗಿ ಪೂರ್ಣಗೊಳಿಸುವ ಗುರಿಯೊಂದಿಗೆ ಎಲ್ಲ ಶೌಚಾಲಯಗಳ ಗುಂಡಿ ತೋಡುವ ಕಾರ್ಯ ಆ. 28ರೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಪಂ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ವೈದ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನೊಳಗೊಂಡು ಎಲ್ಲರೂ ಶೌಚಾಲಯ ನಿರ್ಮಿಸುವ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಆಳಂದ ಮತ್ತು ಜೇವರ್ಗಿ ತಾಲೂಕುಗಳಲ್ಲಿ ಶೌಚಾಲಯ ನಿರ್ಮಾಣದ ಪ್ರಗತಿ ಆಮೆ ಗತಿಯಲ್ಲಿ ಸಾಗುತ್ತಿದೆ. ಜೇವರ್ಗಿ
ತಾಲೂಕಿನಲ್ಲಿ ಒಟ್ಟು 35055 ಶೌಚಾಲಯಗಳ ಪೈಕಿ 27323 ಶೌಚಾಲಯ ನಿರ್ಮಿಸಲಾಗಿದ್ದು, ಇನ್ನು 7732 ಶೌಚಾಲಯ
ನಿರ್ಮಿಸಬೇಕಾಗಿದೆ. ಆಳಂದದಲ್ಲಿ 41009 ಶೌಚಾಲಯಗಳ ಪೈಕಿ 28883 ಶೌಚಾಲಯ ನಿರ್ಮಿಸಲಾಗಿದ್ದು, ಇನ್ನು 12126
ಶೌಚಾಲಯಗಳು ನಿರ್ಮಿಸಬೇಕಾಗಿದೆ. ಜಿಲ್ಲೆಯಲ್ಲಿ ನಿರ್ಮಿಸಲು ಬಾಕಿಯಿರುವ ಶೌಚಾಲಯಗಳ ಪೈಕಿ ಸುಮಾರು ಅರ್ಧದಷ್ಟು ಆಳಂದ ಮತ್ತು ಜೇವರ್ಗಿ ತಾಲೂಕಿನಲ್ಲಿವೆ. ಆಳಂದ ಮತ್ತು ಜೇವರ್ಗಿ ತಾಲೂಕಿನ ಎಲ್ಲ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿಯೇ ವಾಸ್ತವ್ಯವಿದ್ದು, ಶೌಚಾಲಯ ನಿರ್ಮಾಣ ಕಾಮಗಾರಿಗೆ ತೀವ್ರ ಗತಿ ನೀಡಬೇಕು ಎಂದು ಸೂಚಿಸಿದರು. ಕೆಂದರು.
ಆಳಂದ ತಾಲೂಕಿನಲ್ಲಿ ಒಟ್ಟು 47 ಗ್ರಾಪಂಗಳಿವೆ. ನರೋಣಾ, ಸುಂಟನೂರ, ಗೋಳಾ (ಬಿ), ತಡಕಲ, ಕಡಗಂಚಿ ಹಾಗೂ
ಅಳಂಗಾ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. 200ಕ್ಕಿಂತ ಕಡಿಮೆ ಶೌಚಾಲಯ ನಿರ್ಮಿಸಬೇಕಾಗಿರುವ 11 ಗ್ರಾಪಂಗಳು, 200-300 ಶೌಚಾಲಯ ನಿರ್ಮಿಸಬೇಕಾಗಿರುವ 11 ಗ್ರಾಪಂಗಳು, 300-400 ಶೌಚಾಲಯ ನಿರ್ಮಿಸಬೇಕಾಗಿರುವ 15 ಗ್ರಾಪಂಗಳಿವೆ. ಈ ಎಲ್ಲ ಗ್ರಾಮ ಪಂಚಾಯಿತಿಗಳು ಸೆ. 15ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತವಾಗಬೇಕು ಎಂದು ಸೂಚಿಸಿದರು.
ಕೆರೆ ಅಂಬಲಗಾ, ಕೊರಳ್ಳಿ, ಬಡಸಾವಳಗಿ ಹಾಗೂ ಸಾವಳೇಶ್ವರ ಗ್ರಾಪಂಗಳಲ್ಲಿ 400ಕ್ಕಿಂತ ಹೆಚ್ಚು ಶೌಚಾಲಯಗಳು ನಿರ್ಮಿಸಬೇಕಾಗಿದೆ. ಈ ಗ್ರಾಪಂಗಳಲ್ಲಿ ಆ. 30ರೊಳಗಾಗಿ ಅರ್ಧಕ್ಕಿಂತ ಹೆಚ್ಚು ಶೌಚಾಲಯ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿದಿನ ಗುರಿ ಹೊಂದಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಜೇವರ್ಗಿ ತಾಲೂಕಿನಲ್ಲಿ ಒಟ್ಟು 42 ಗ್ರಾಪಂಗಳಿವೆ. ಈಗಾಗಲೇ ಹರವಾಳ ಮತ್ತು ಬಳೂಂಡಗಿ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. 200ಕ್ಕಿಂತ ಕಡಿಮೆ ಶೌಚಾಲಯ ನಿರ್ಮಿಸಬೇಕಾಗಿರುವ 21 ಗ್ರಾಪಂಗಳು, 200-300 ಶೌಚಾಲಯ ನಿರ್ಮಿಸಬೇಕಾಗಿರುವ 7 ಗ್ರಾಪಂಗಳು, 300-400 ಶೌಚಾಲಯ ನಿರ್ಮಿಸಬೇಕಾಗಿರುವ 9 ಗ್ರಾಪಂಗಳು ಹಾಗೂ ಹಿಪ್ಪರಗಾ ಎಸ್.ಎನ್., ಯಾಳವಾರ, ಕುರಲಗೇರಾ, ಗಂವಾರ ಗ್ರಾಪಂಗಳು 400ಕ್ಕಿಂತ ಹೆಚ್ಚು ಶೌಚಾಲಯ ನಿರ್ಮಿಸಬೇಕಾಗಿರುವುದರಿಂದ ಸೆ. 15ರೊಳಗಾಗಿ ಎಲ್ಲ ಶೌಚಾಲಯಗಳನ್ನು ಪೂರ್ಣಗೊಳಿಸಲು ಪ್ರತಿದಿನ ನಿರ್ಮಿಸಬೇಕಾಗಿರುವ ಶೌಚಾಲಯಗಳನ್ನು ಪರಿಗಣನೆಗೆ ತೆಗೆದುಕೊಂಡು ಶೌಚಾಲಯ ನಿರ್ಮಾಣದ ಪ್ರತಿದಿನದ ವರದಿ ಸಲ್ಲಿಸಲು ಸೂಚಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ಹಾಗೂ ಕಲಬುರಗಿ ತಾಲೂಕಿನ ಎಲ್ಲ ಗ್ರಾಪಂಗಳ ಅಭಿವೃದ್ಧಿ
ಅಧಿಕಾರಿಗಳು ಹಾಗೂ ಅಧಿಕಾರಿಗಳ ಪ್ರಯತ್ನದಿಂದಾಗಿ ಕಲಬುರಗಿ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಘೋಷಿಸಲು ಸಾಧ್ಯವಾಗಿದೆ. ಆಳಂದ ತಾಲೂಕಿನಲ್ಲಿಯೂ ಸಹ ಶೌಚಾಲಯ ನಿರ್ಮಾಣಕ್ಕೆ ವೇಗ ನೀಡಲು ಪ್ರವೀಣ ಪ್ರಿಯಾ ಡೇವಿಡ್ ಅವರು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು. ಆಳಂದ ಮತ್ತು ಜೇವರ್ಗಿ ತಾಲೂಕಿನಲ್ಲಿ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳ ಕೊರತೆಯಿದ್ದಲ್ಲಿ ಕಲಬುರಗಿ ತಾಲೂಕಿನ ಪಿಡಿಒಗಳನ್ನು ಶೌಚಾಲಯ ನಿರ್ಮಾಣ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ಹೇಳಿದರು. ಆಳಂದ ಮತ್ತು ಜೇವರ್ಗಿ ತಾಲೂಕಿನ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.