Kalaburagi; ಸರ್ಕಾರದ ಹೊಸ ಮದ್ಯದಂಗಡಿ ಯೋಜನೆ ವಿರುದ್ದ ಆಡಳಿತ ಪಕ್ಷ ಶಾಸಕರ ಗುಡುಗು
ಪಾಪದ ಹಣದಿಂದ ಸರ್ಕಾರ ನಡೆಸುವುದು ಬೇಡ: ಬಿ.ಆರ್ ಪಾಟೀಲ್
Team Udayavani, Oct 2, 2023, 3:56 PM IST
ಕಲಬುರಗಿ: ರಾಜ್ಯ ಸರ್ಕಾರದ ಹೊಸ ಮದ್ಯದಂಗಡಿ ವಿರುದ್ಧ ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕರೇ ಗುಡುಗಿದ್ದು, ಯಾವ ಪುರುಷಾರ್ಥಕ್ಕಾಗಿ ಸಾವಿರ ಮದ್ಯದಂಗಡಿ ಎಂದು ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಜಯಂತಿ ಅಂಗವಾಗಿ ನಶೆ ಮುಕ್ತ ಭಾರತ ಜಾಗೃತಿ ಆಂದೋಲನ ಸಮಿತಿ ಹಮ್ಮಿಕೊಂಡ ಮದ್ಯಪಾನ ನಿಷೇಧ ಆಂದೋಲನ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು.
ಪಾಪದ ಹಣದಿಂದ ಸರ್ಕಾರ ನಡೆಸುವುದು ಬೇಡ, ಸರ್ಕಾರಕ್ಕೆ ಹಣದ ಕೊರತೆಯಾದರೆ ಜನರಿಂದ ಬೇಡಿ ಕೊಡುತ್ತೇವೆ. ಒಳ್ಳೆಯ ಗ್ಯಾರಂಟಿಗಳನ್ನು ಕೊಟ್ಟು ಮತ್ತೊಂದು ಮಗ್ಗುಲಿನಿಂದ ದಿವಾಳಿ ಮಾಡುವುದು ಸರಿಯಲ್ಲ. ಹಳ್ಳಿಗಳಿಗೆ ಹೊದಾಗ ಮಹಿಳೆಯರು ನೀರು, ರಸ್ತೆ ಏನೂ ಕೇಳುವುದಿಲ್ಲ. ಸಾರಾಯಿ ನಿಷೇಧ ಮಾಡುವಂತೆ ಒತ್ತಾಯಿಸುತ್ತಾರೆ. ಯಾರೂ ಮದ್ಯದಂಗಡಿ ತೆರೆಯುವಂತೆ ಅರ್ಜಿ ಹಾಕಿಲ್ಲ. ಆದರೂ ಸರ್ಕಾರ ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿದೆ. ಪಾಪದ ಹಣದಿಂದ ಸರ್ಕಾರ ನಡೆಸುವುದು ಅವಶ್ಯಕತೆ ಇತ್ತೇ?ಎಂದು ಶಾಸಕಬಿ.ಆರ್. ಪಾಟೀಲ್ ಖಾರವಾಗಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೂ ಮದ್ಯ ಮಾರಾಟ ನಿಷೇಧ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ 36 ಸಾವಿರ ಕೋ. ರೂ ಆದಾಯ ಬಗ್ಗೆ ಹೇಳುತ್ತಾರೆ. ರಾಜ್ಯ ಸರ್ಕಾರದ ಜತೆಗೇ ಕೇಂದ್ರ ಸರ್ಕಾರವೂ ಮದ್ಯ ಮಾರಾಟ ನಿಷೇಧ ಜಾರಿಗೆ ತರಲಿ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ. ಧಾರ್ಮಿಕವಾಗಿ ಮಾತನಾಡುತ್ತಾರೆ. ಅವರೂ ದೇಶದಾದ್ಯಂತ ಮದ್ಯಪಾನ ಮಾರಾಟ ನಡುವೆ ನಿಷೇಧ ಕಾಯ್ದೆ ಜಾರಿಗೆ ತರಲಿ ಎಂದರು.
ಸ್ವಾಮೀಗಳು ಮುಂದಾಗಲಿ: ಜನರು ರಾಜಕಾರಣಿಗಳಿಗಿಂತ ಸ್ವಾಮೀಗಳ ಮಾತು ಕೇಳುತ್ತಾರೆ. ಹೀಗಾಗಿ ತಮ್ಮ ಹತ್ತಿರ ಬರುವ ಭಕ್ತರಿಗೆ ಮದ್ಯಪಾನ ಚಟ ಬಿಡಿಸುವ ಬಗ್ಗೆ ಹಿತೋಪದೇಶ ಹೇಳುವ ಜತೆಗೆ ಮಧ್ಯಪಾನ ಮುಕ್ತ ಆಂದೋಲನ ಬಲಪಡಿಸಲು ನೇತೃತ್ವ ವಹಿಸಬೇಕೆಂದು ಕರೆ ನೀಡಿದರು.
ಈಗಾಗಲೇ ಮೌನಯೋಗಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳವರು ಆಳಂದ ತಾಲೂಕಿನ ನಿಂಬಾಳದಲ್ಲಿ ತಮ್ಮ ಪ್ರಯತ್ನದ ಮೂಲಕ ದಶಕದ ಹಿಂದೆಯೇ ಭಕ್ತರ ಮನವೋಲಿಸಿ ಮದ್ಯಪಾನ ನಿಷೇಧಗೊಳಿಸಿದ್ದಾರೆ. ನಶೆಮುಕ್ತ ಭಾರತಕ್ಕಾಗಿ ಜನಾಂದೋಲನ ಮುಂದುವರೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕ ಬಿ.ಆರ್. ಪಾಟೀಲ್ ಪ್ರಕಟಿಸಿದರು.
ದಿಲ್ಲಿಗೆ ಬರಲು ರೆಡಿ: ಹಳ್ಳಿಗಳಲ್ಲಿ ಸಾರಾಯಿ ನಿಷೇಧಕ್ಕಾಗಿ ದಿಲ್ಲಿಗೆ ಬರಲು ಸಿದ್ದರಿದ್ದೇವೆ. ಕುಡುಕ ಗಂಡನ ಸಲುವಾಗಿ ಸಾಕಾಗಿ ಹೋಗ್ಯಾದ್, ಮನ್ಯಾಗ ಒಂದು ಕ್ಷಣವೂ ನೆಮ್ಮದಿ ಇಲ್ದಾಂಗ್ಯಾಗದ್, ಮಿಸ್ ಕಾಲ್ ಕೊಟ್ಟರೆ ಮನಿಗಿ ಸಾರಾಯಿ ತಂದು ಕೊಡ್ತಾರೆ ಎಂದು ಹಲವು ಮಹಿಳೆಯರು ತಮ್ಮ ಅಸಾಯಕತೆ ತೋಡಿ ತಮ್ಮ ಅಳಲು ವ್ಯಕ್ತಪಡಿಸಿದರು.
ತಾಜಸುಲ್ತಾನಪುರದ ದೇವಮ್ಮ ಎನ್ನುವ ಮಹಿಳೆಯರು ಸಾರಾಯಿ ಮಾರಾಟ ನಿಷೇಧಕ್ಕೆ ದಿಲ್ಲಿಗೆ ಬರಲು ಸಿದ್ದ ಎಂದು ಆಕ್ರೋಶಭರಿತವಾಗಿ ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಮಾತನಾಡಿ, ಸರ್ಕಾರದ ವಿರುದ್ದವೇ ಅಡಳಿರೂಢ ಶಾಸಕರು ಹೋರಾಟಕ್ಕೆ ಇಳಿದಿರುವುದು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ಮಹಿಳೆಯರಿಗೆ ಭಿಕ್ಷುಕರಂತೆ 2000 ರೂ ನೀಡುತ್ತಿದೆ. ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿದೆ. ಅದರ ಬದಲು ಮದ್ಯಪಾನ ನಿಷೇಧ ಮಾಡಿದರೆ ಇಡೀ ಸಮಾಜ ಸುಧಾರಣೆಗೆ ನಾಂದಿ ಮಾಡಿದಂತಾಗುತ್ತದೆಯಲ್ಲದೇ ಗಂಡಸರು ದುಡಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಏನೇ ಆದರೂ ರಾಜಕೀಯ ಪಕ್ಷಗಳು ಜನಹಿತದ ಕಡೆಗೆ ಲಕ್ಷ್ಯ ವಹಿಸಬೇಕೆಂದರು.
ಶಾಸಕ ಎಂ.ವೈ. ಪಾಟೀಲ್ ವಿಚಾರವಾದಿ ಪ್ರೊ. ಆರ್.ಕೆ ಹುಡಗಿ, ವಿವಿಧ ಮಠಾಧೀಶರಾದ ಚಿನ್ಮಯಗಿರಿ ಸಿದ್ದರಾಮ ಶಿವಾಚಾರ್ಯರು, ನರೋಣಾದ ಮಹಾಂತ ಶಿವಾಚಾರ್ಯರು, ಶ್ರೀ ನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಅಪ್ಪಾರಾವ ದೇವಿ ಮುತ್ಯಾ, ಪಾಳಾ ಶ್ರೀ ಗಳು ಸೇರಿದಂತೆ, ಮುಖಂಡರಾದ ರವೀಂದ್ರ ಶಾಬಾದಿ, ಡಿ.ಜಿ.ಸಾಗರ, ದೀಪಕ ಗಾಲಾ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.