ಜನರನ್ನು ಪ್ರೀತಿಯಿಂದ ಜೋಡಿಸಿ: ಸದಾಶಿವ ಶ್ರೀ
Team Udayavani, Aug 29, 2022, 2:12 PM IST
ಸೇಡಂ: ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಬೇಕಾದರೆ ಶಿಸ್ತು ಪಾಲನೆ ಅಗತ್ಯ. ಅದರಂತೆ ಜನರನ್ನು ಅತ್ಯಂತ ಪ್ರೀತಿಯಿಂದ ಜೋಡಿಸುವ ಕೆಲಸ ಮಾಡಬೇಕು ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಆರ್‌ಎಸ್‌ಎಸ್ ಕಾರ್ಯಾಲಯದ ಗಂಗೋತ್ರಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯ ಉದ್ಘಾಟನೆ ಹಾಗೂ ದೀಪಲಕ್ಷ್ಮೀ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಆಯೋಜಕರು ಹಾಗೂ ಸ್ವಾಗತ ಸಮಿತಿ ಸದಸ್ಯರು ಧನಾತ್ಮಕ ಚಿಂತನೆ ಮಾಡಬೇಕು. ಮನುಷ್ಯ-ಮನುಷ್ಯರಲ್ಲಿನ ಅಂತರ ಹೆಚ್ಚಾಗುತ್ತಿವೆ. ಈ ವೈಷಮ್ಯದ ಮನೋಭಾವ ದೂರವಾಗಿ ನಾವೆಲ್ಲ ಒಂದು ಎನ್ನುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಐದು ಸಾವಿರ ಮಾತೆಯರಿಂದ ಪೂಜೆ ನೆರವೇರಿಸುವ ವಿಚಾರ ಮಾಡಿದ್ದು ಸಮಚಿತ್ತವಾಗಿದೆ. ಕಾರ್ಯಕ್ರಮದಲ್ಲಿ ನೀಡಲಾದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಎಲ್ಲರೂ ನಿಭಾಯಿಸಬೇಕು ಎಂದರು.
ಆರ್‌ಎಸ್‌ಎಸ್‌ನ ಡಾ|ನಾಗರಾಜ ಮನ್ನೆ ಮಾತನಾಡಿ, ಸಮಾಜದಲ್ಲಿ ಜಾತಿ, ಪಕ್ಷ, ಪಂಥ, ಬಾಷೆ ಹೀಗೆ ಅನೇಕ ರೀತಿಯಲ್ಲಿ ನಾವು ಸಮಾಜದಲ್ಲಿ ವಿಭಜನೆಯ ಹಾದಿ ಕಾಣುತ್ತೇವೆ. ಆದರೆ ಇದೆಲ್ಲದಕ್ಕೂ ಭಿನ್ನವಾಗಿ ಸಂಘ ಪರಿವಾರ ಮತ್ತು ಕೆಲವು ಸಂಘಟನೆಗಳು ಎಲ್ಲರನ್ನು ಒಂದುಗೂಡಿಸಿಕೊಂಡು ಹೋಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಎಚ್‌ಪಿ ಕಲಬುರಗಿ ವಿಭಾಗ ಸಹಕಾರ್ಯದರ್ಶಿ ಅಂಬರೀಶ ಸುಲೇಗಾಂವ ಮಾತನಾಡಿ, ಕರ್ನಾಟಕ ಉತ್ತರ ಪ್ರಾಂತ್ಯದಲ್ಲಿ ದೀಪಲಕ್ಷ್ಮೀ ಕಾರ್ಯಕ್ರಮದ ಕಲ್ಪನೆ ಕೊಟ್ಟದ್ದು ಸೇಡಂ. ಸತತ ಏಳನೇ ವರ್ಷ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.
ಪೂಜ್ಯ ಲಿಂಗರಾಜಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ರಾಘವೇಂದ್ರ ಮುಸ್ತಜಾರ, ಮಾತೃ ಶಕ್ತಿ ಪ್ರಮುಖ ಶೀಲಾ ನಿರ್ಣಿ ವೇದಿಕೆಲ್ಲಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ|ಶ್ರೀನಿವಾಸ ಮೊಕದಂ, ಪ್ರಮುಖರಾದ ಶಿವುಕುಮಾರ ಪಾಟೀಲ (ಜಿಕೆ) ತೇಲ್ಕೂರ, ಶಿವುಕುಮಾರ ಬೋಳಶೆಟ್ಟಿ, ಪ್ರದೀಪ ಪಾಟೀಲ ಹೊಸಳ್ಳಿ, ಕಾಶಿನಾಥ ನಿಡಗುಂದಾ, ವೀರೇಶ ಹೂಗಾರ, ಶಿವಾನಂದ ಸ್ವಾಮಿ, ಗೋವಿಂದ ಯಾಕಂಬರಿ, ಭರತ್ ಭಜಾಜ್, ಬಸವಪ್ರಭು ಪಾಗಾ, ಅವಿನಾಶ ಮಡಿವಾಳ, ಶಶಿಕಾಂತ, ಪ್ರೇಮ ಚವ್ಹಾಣ, ಸರಿತಾ ಮಾಣಿಕವಾರ, ಭಾಗ್ಯಲಕ್ಷ್ಮೀ ನಾಯಿಕೋಡಿ, ಮಾಧವಿ ಐನಾಪುರ, ಡಾ|ರೂಪಾ ದಾದಾಪುರೆ, ರೂಪಾ ಅಲ್ಲೂರ, ಶ್ರೀದೇವಿ ಅಗನೂರ, ಸಂಧ್ಯಾ ಕುಲಕರ್ಣಿ ಇನನಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.