ಕಟಾವಿಗೆ ಬಂದಿದ್ದ ಜೋಳ, ದ್ರಾಕ್ಷಿ ಹಾನಿ
Team Udayavani, Mar 17, 2017, 3:14 PM IST
ಕಲಬುರಗಿ: ಜಿಲ್ಲೆಯಾದ್ಯಂತ ಬುಧವಾರ ಹಾಗೂ ಗುರುವಾರ ಬೆಳಗ್ಗೆ ಸುರಿದ ಅಕಾಲಿಕ ಮಳೆಗೆ ಕಟಾವು ಆಗದೇ ಉಳಿದ ಜೋಳ, ದ್ರಾಕ್ಷಿ ಬೆಳೆಗೆ ಹಾನಿಯುಂಟಾಗಿದ್ದು, ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಕ್ಕೆ ಮಾರಾಟಕ್ಕಾಗಿ ತರಲಾದ ತೊಗರಿಯು ಹಸಿಯಾಗಿದ್ದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಸೀಮಾಂತರದಲ್ಲಿ ಬುಧವಾರ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕ ದಾವೂಲ್ ರಸೂಲ್ಸಾಬ (22) ಸಿಡಿಲಿಗೆ ಬಲಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಜಿಲ್ಲೆಯಾದ್ಯಂತ 12.01 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ಒಂದೆರಡು ದಿನ ಹಾಗೂ ಮುಂದಿನ ವಾರಗಳಲ್ಲಿ ಕಟಾವು ಆಗಬೇಕಿದ್ದ ದ್ರಾಕ್ಷಿ ಬೆಳೆ ನಷ್ಟಕ್ಕೆ ಒಳಗಾಗಿದೆ.
ದ್ರಾಕ್ಷಿ ಹಣ್ಣುಗಳು ಉದುರಿವೆಯಲ್ಲದೆ ನೀರಿನಿಂದ ಕೊಳೆಯುವಂತಾಗಿದೆ. ವಾರ ಇಲ್ಲವೇ ಎರಡು ವಾರದೊಳಗೆ ಬಹುತೇಕ ದ್ರಾಕ್ಷಿ ಫಲ ಕಟಾವು ಆಗಿ ಮಾರುಕಟ್ಟೆಗೆ ಹೋಗುತ್ತಿತ್ತು. ಆದರೆ ಅಕಾಲಿಕವಾಗಿ ಸುರಿದ ಮಳೆ ದ್ರಾಕ್ಷಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನುಳಿದಂತೆ ಅಫಜಲಪುರ, ಆಳಂದ ತಾಲೂಕಿನಲ್ಲಿರುವ ದ್ರಾಕ್ಷಿ ಬೆಳೆಯೇ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಜಿಲ್ಲೆಯಾದ್ಯಂತ 350 ಎಕರೆ ದ್ರಾಕ್ಷಿ ಬೆಳೆಯಿದ್ದು, ಇದರಲ್ಲಿ ಶೇ. 90ರಷ್ಟು ದ್ರಾಕ್ಷಿ ಕಟಾವು ಆಗಿದೆ. ಉಳಿದ ಶೇ. 10 ರಷ್ಟರಲ್ಲಿನ ದ್ರಾಕ್ಷಿ ಬೆಳೆ ಮಳೆಗೆ ಹಾನಿಗೊಳಗಾಗಿದೆ. ಒಣ ಬೇಸಾಯದ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿರುವ ಜೋಳದ ರಾಶಿ ಶೇ. 90ರಷ್ಟು ಆಗಿದೆ. ಅದೇ ರೀತಿ ವಾರ ಕಳೆದಿದ್ದರೆ ಅಳಿದುಳಿದ ಜೋಳವೆಲ್ಲ ರಾಶಿಯಾಗುತ್ತಿತ್ತು. ಆದರೆ ಈಗ ಮಳೆಯಾಗಿದ್ದರಿಂದ ಸ್ವಲ್ಪ ಹಾನಿಯಾಗುವಂತಾಗಿದೆ.
ಹಾನಿ ವರದಿ ಸಲ್ಲಿಕೆಗೆ ಸೂಚನೆ: ಗುರುವಾರ ಬಿದ್ದ ಅಕಾಲಿಕ ಮಳೆಯಿಂದಾಗಿ ಹಾನಿಯಾಗಿರುವ ದ್ರಾಕ್ಷಿ ಬೆಳೆರ ವಿವರಗಳೊಂದಿಗೆ ಪಹಣಿ ಸಮೇತ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸುವಂತೆ ಎಲ್ಲ ರೈತರಿಗೆ ಸೂಚನೆ ನೀಡಲಾಗಿದೆ. ಬಂದ ದೂರಿನ ಅರ್ಜಿಗಳೊಂದಿಗೆ ಆಯಾ ಕ್ಷೇತ್ರಕ್ಕೆ ಹೋಗಿ ಹಾನಿ ದಾಖಲು ಮಾಡಿಕೊಳ್ಳಲಾಗುವುದು. ಸಿಆರ್ಎಫ್ ಅಡಿ ಪರಿಹಾರ ದೊರಕಿಸಲು ಯತ್ನಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹ್ಮದ ಅಲಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ತೆರೆಯಲಾದ ತೊಗರಿ ಖರೀದಿ ಕೇಂದ್ರಕ್ಕೆ ರೈತ ತಂದಿದ್ದ ತೊಗರಿ ಮಳೆಯಿಂದ ಹಸಿಯಾಗಿರುವ ಘಟನೆಗಳು ವರದಿಯಾಗಿದೆ. ಮಾರಾಟಕ್ಕಾಗಿ ಸರದಿಯಾಗಿ ಟ್ರಾಕ್ಟರ್ನಲ್ಲಿ ನಿಲ್ಲಿಸಲಾಗಿದ್ದ ತೊಗರಿ ಹಸಿಯಾಗಿದ್ದರಿಂದ ರೈತರು ಅದನ್ನು ಬಿಸಿಲಿನಲ್ಲಿ ಒಣಗಿಸುತ್ತಿರುವುದು ಕಂಡು ಬಂತು. ಚೀಲದ ಸಮಸ್ಯೆಯಿಂದ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯದಿರುವುದರಿಂದ ಅಪಾರ ಪ್ರಮಾಣದಲ್ಲಿ ತೊಗರಿ ಹಾನಿಯಾಗುವುದು ತಪ್ಪಿದೆ.
* ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.