ಪರಿಸರ ರಕ್ಷಣೆಗೆ ದೇಶ ಪರ್ಯಟನೆ
Team Udayavani, Jan 11, 2019, 5:47 AM IST
ಕಲಬುರಗಿ: ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಮಹಾರಾಷ್ಟ್ರ ಸತಾರಾ ಜಿಲ್ಲೆಯ ವಿಕಾಸ ಜಗನ್ನಾಥ ಶಿಂಧೆ ವಿದ್ಯಾರ್ಥಿಗಳೊಂದಿಗೆ ಪರಿಸರ ಮಹತ್ವ ಕುರಿತು ಸಂವಾದ ನಡೆಸಿದರು.
ದ್ವಿಚಕ್ರ ವಾಹನದ ಮೇಲೆ ದೇಶ ಪರ್ಯಟನೆ ಮಾಡುತ್ತ ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಹರಿಯಾಣ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ಸಹಿತ ಎಲ್ಲ ರಾಜ್ಯಗಳಲ್ಲೂ ಪ್ರವಾಸ ಕೈಗೊಂಡು ನಗರಕ್ಕೆ ಆಗಮಿಸಿ, ಪರಿಸರದ ಮಹತ್ವ ಹಾಗೂ ರಕ್ಷಣೆ ಅರಿವು ಸಾರುತ್ತ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮ, ನೀರು ಉಳಿಸಿ, ಹೆಣ್ಣು ಮಗಳನ್ನು ಉಳಿಸಿ-ಓದಿಸಿ, ಗಿಡಮರಗಳನ್ನು ಬೆಳೆಸಿರಿ ಮತ್ತು ಪ್ರಕೃತಿ ಅರಿತು ನಡೆಯಿರಿ ಎನ್ನುವ ಧ್ಯೇಯದೊಂದಿಗೆ ವಿಕಾಸ ಜಗನ್ನಾಥ ಶಿಂಧೆ ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಅಪ್ಪಾ ಪಬ್ಲಿಕ್ ಶಾಲೆ ಹಾಗೂ ಎಸ್‌ಬಿಆರ್ ಶಾಲೆಯ ವಿದ್ಯಾರ್ಥಿಗಳು, ಪ್ರಾಚಾರ್ಯರಾದ ಎನ್. ಎಸ್. ದೇವರಕಲ್ ಮತ್ತು ಶಿಕ್ಷಕರ ವರ್ಗದವರು ಹಾಜರಿದ್ದರು. ಹಿರಿಯ ಉಪನ್ಯಾಸಕ ಡಾ| ಚಂದ್ರಕಾಂತ ಪಾಟೀಲ ನಿರೂಪಿಸಿದರು. ಶಂಕರಗೌಡ ಹೊಸಮನಿ ವಿಕಾಸ ಜಗನ್ನಾಥ ಶಿಂಧೆ ಅವರಿಗೆ ಹೂಗುಚ್ಚ ನೀಡಿ ಸನ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.