ಕೋವಿಡ್ ಗೆ ಯುವ ಜನರೇ ಟಾರ್ಗೆಟ್‌

ಯುವಕ-ಯುವತಿಯರೇ ಅಧಿಕ ಸೋಂಕಿತರು

Team Udayavani, Aug 10, 2020, 12:56 PM IST

ಕೋವಿಡ್ ಗೆ ಯುವ ಜನರೇ ಟಾರ್ಗೆಟ್‌

ಕಲಬುರಗಿ: ಕೋವಿಡ್ ಮಹಾಮಾರಿ ರೋಗ ಯುವ ಜನಾಂಗವನ್ನು ಬಾಧಿಸುವುದಿಲ್ಲ. ವಯಸ್ಸಾದರಲ್ಲೇ ಬೇಗ ಸೋಂಕು ವ್ಯಾಪಿಸುತ್ತದೆ ಎಂಬ ವಾದಗಳು ಸುಳ್ಳಾಗಿವೆ. ಜಿಲ್ಲೆಯಲ್ಲಿ ಯುವ ಸಮುದಾಯವೇ ಕೋವಿಡ್  ನ ಟಾರ್ಗೆಟ್‌ ಆಗಿದ್ದು, ಹೆಚ್ಚು ಸೋಂಕಿತರು ಯುವಕ-ಯುವತಿಯರೇ ಆಗಿದ್ದಾರೆ.

ಜಿಲ್ಲೆಗೆ ಕೊರೊನಾ ಹೆಮ್ಮಾರಿ ಕಾಲಿಟ್ಟು ಇಂದಿಗೆ (ಜು.10) ಬರೋಬ್ಬರಿ ಐದು ತಿಂಗಳು ಕಳೆದಿದೆ. ಸೌದಿಯಿಂದ ಮರಳಿದ್ದ 76 ವರ್ಷದ ವೃದ್ಧ ಮಾ.10ರಂದು ಮೃತಪಟ್ಟಿದ್ದ. ಈತ ಕೋವಿಡ್ ದಿಂದಲೇ ಸಾವನ್ನಪ್ಪಿದ್ದ ಎಂದು ಮಾ.12ರಂದು ಖಾತ್ರಿಯಾಗಿತ್ತು. ಈ ಮೂಲಕ ಸೋಂಕಿನಿಂದ ದೇಶದಲ್ಲೇ ಮೊದಲು ಸಾವು ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ (ಆ.8) ಜಿಲ್ಲೆಯಲ್ಲಿ ಒಟ್ಟು 7,147 ಜನರಿಗೆ ಕೋವಿಡ್ ವಕ್ಕರಿಸಿದೆ. 136 ಜನರು ಸೋಂಕಿಗೆ ತುತ್ತಾಗಿದ್ದಾರೆ.

ನಾಲ್ಕು ತಿಂಗಳ ಹಸುಗೂಸಿನಿಂದ ಹಿಡಿದು 80-85 ವರ್ಷಕ್ಕೂ ಮೇಲ್ಪಟ್ಟ ವಯೋವೃದ್ಧರು ಸೇರಿ ಎಲ್ಲ ವಯೋಮಾನದವರಿಗೂ ಸೋಂಕು ವ್ಯಾಪಿಸಿದೆ. ಆದರೆ, ಯುವ ಸಮುದಾಯವೇ ಅತಿ ಹೆಚ್ಚಾಗಿ ಕೋವಿಡ್ ಸೋಂಕಿಗೆ ಒಳಪಟ್ಟಿದೆ. ಹೀಗಾಗಿ ಕೊರೊನಾ ನಮಗೇನು ಮಾಡಲ್ಲ ಎಂದು ಮೆರೆಯುತ್ತಿರುವ ಯುವಕರು ಇನ್ನುಂದೆ ಜಾಗೃತರಾಗಿರೋದೇ ಒಳ್ಳೆಯದು.

ಒಟ್ಟು 7,147 ಮಂದಿ ಸೋಂಕಿತರಲ್ಲಿ ಶೇ.35.90ರಷ್ಟು 20ರಿಂದ 30 ವರ್ಷದ ಒಳಗಿನ ಯುವ ಜನಾಂಗ (2,566 ಜನರು) ಸೋಂಕಿಗೆ ಗುರಿಯಾಗಿದೆ. ಇದರಲ್ಲಿ 1,526 ಯುವಕರು ಇದ್ದರೆ, 1,040 ಯುವತಿಯರು ಸೇರಿದ್ದಾರೆ. 1,805 ಮಂದಿ ಗುಣಮುಖರಾಗಿದ್ದರೆ, 759 ಯುವಕ-ಯುವತಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. 30ರಿಂದ 40 ವಯಸ್ಸಿನ 717 ಜನರು ಸೋಂಕಿಗೆ ಸಿಲುಕಿದ್ದಾರೆ. 467 ಪುರುಷರು, 250 ಮಹಿಳೆಯರು ಸೋಂಕಿತರಾಗಿದ್ದಾರೆ. ಇವರಲ್ಲಿ 461 ಜನರು ಗುಣಮುಖರಾಗಿದ್ದರೆ, ಇನ್ನೂ 248 ಮಂದಿ ಸಕ್ರಿಯ ಕೋವಿಡ್ ರೋಗಿಗಳಿದ್ದಾರೆ ಎನ್ನುವುದು ಜಿಲ್ಲಾಡಳಿತದ ಮಾಹಿತಿ.

ಕಂದಮ್ಮಗಳನ್ನೂ ಬಿಡದ ಕ್ರೂರಿ: ಪುಟ್ಟ-ಪುಟ್ಟ ಮಕ್ಕಳನ್ನು ಕೋವಿಡ್ ಮಹಾಮಾರಿ ಸೋಂಕು ಬಿಟ್ಟಿಲ್ಲ. ಆರಂಭದಲ್ಲಿ ವಾಡಿ ಪಟ್ಟಣದ ಎರಡು ವರ್ಷದ ಮಗುವಿಗೆ ಸೋಂಕು ಅಂಟಿ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಸಾವಳಗಿ ಬಿ. ಗ್ರಾಮದಲ್ಲಿ ಒಂದು ವರ್ಷದ ಕಂದನಿಗೂ ರೋಗ ವ್ಯಾಪಿಸಿತ್ತು. ನಂತರದಲ್ಲಿ ಮಹಾರಾಷ್ಟದಿಂದ ಆಗಮಿಸಿದ ವಲಸಿಗ ಕುಟುಂಬಗಳ ಮಕ್ಕಳಲ್ಲಿ ಕ್ರಮೇಣವಾಗಿ ಸೋಂಕು ಪತ್ತೆಯಾಗಿತ್ತು. ನಾಲ್ಕು ತಿಂಗಳು, ಏಳು ತಿಂಗಳ ಕೂಸು ಹೀಗೆ ಚಿಕ್ಕ ಕಂದಮ್ಮಗಳನ್ನೂ ಬಿಡದೆ ಸೋಂಕು ಕಾಡುತ್ತಿದೆ. ಇದುವರೆಗೆ ಹತ್ತು ವರ್ಷದೊಳಗಿನ 503 ಮಕ್ಕಳಿಗೆ ಕೋವಿಡ್ ಹರಡಿದ್ದು, 264 ಗಂಡು ಮಕ್ಕಳು ಹಾಗೂ 239 ಹೆಣ್ಣು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 10ರಿಂದ 20 ವರ್ಷದೊಳಗಿನ 707 ಬಾಲಕ-ಬಾಲಕಿಯರಿಗೆ ವೈರಾಣು ತಾಗಿದೆ.

ಮಕ್ಕಳು ಸೋಂಕಿತರ ಸಂಪರ್ಕ ಮತ್ತು ಸಣ್ಣ-ಪುಟ್ಟ ರೋಗಗಳ ಲಕ್ಷಣಗಳಿದ್ದ ಸೋಂಕಿತರರಾಗುತ್ತಿದ್ದಾರೆ. ಯುವಕರು ಕೆಮ್ಮು, ಜ್ವರ ಬಳಲುತ್ತಿರುವ ವಿಷಮಶೀತ ಜ್ವರ ಪ್ರಕರಣದ ರೋಗಿಗಳಿದ್ದು, ಸಮಾಧಾನದ ಸಂಗತಿ ಎಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಬೇಗ ಗುಣಮುಖರೂ ಆಗುತ್ತಿದ್ದಾರೆ ಎಂಬುವುದು ತಜ್ಞರು ಹೇಳಿಕೆ.

40ಕ್ಕೂ ಮೇಲ್ಪಟ್ಟವರ ಸ್ಥಿತಿಯೇನು?: ಯುವಕರು ಅತಿ ಹೆಚ್ಚು ಸೋಂಕಿಗೆ ಗುರಿಯಾಗುತ್ತಿದ್ದರೂ, 40 ವರ್ಷಕ್ಕೂ ಮೇಲ್ಪಟ್ಟವರ ಸ್ಥಿತಿ ಅಕ್ಷರಶಃ ವಿಷಮವಾಗಿದೆ. 40ರಿಂದ 50 ವರ್ಷದೊಳಗಿನ 1,088 ಜನರು ಮತ್ತು 50 ವರ್ಷಕ್ಕೂ ಮೇಲ್ಪಟ್ಟ 1,566 ಮಂದಿಗೆ ಸೋಂಕು ಹರಡಿದೆ. ಈ ವಯಸ್ಸಿನರಿಗೆ ಮಧುಮೇಹ, ಅಕ್ತದೊತ್ತಡ, ಹೃದ್ರೋಗ ಕಾಡುತ್ತಿರುವುದರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಸೂಕ್ತ ಚಿಕಿತ್ಸೆ ದೊರೆತರೂ ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 40ರಿಂದ 50 ವರ್ಷದೊಳಗಿನ 1,088 ಸೋಂಕಿತರಲ್ಲಿ 659 ರೋಗಿಗಳು ಗುಣಮುಖರಾಗಿದ್ದಾರೆ. 412 ರೋಗಿಗಳು ಸಕ್ರಿಯಾಗಿದ್ದು, ಈ ವಯೋಮಾನದ 17 ಮೃತಪಟ್ಟಿದ್ದಾರೆ. ಅದೇ ರೀತಿ 50 ವರ್ಷಕ್ಕೂ ಮೇಲ್ಪಟ್ಟ 1,566 ರೋಗಿಗಳಲ್ಲಿ 685 ಜನರು ಗುಣಮುಖಗೊಂಡಿದ್ದರೆ, ಇನ್ನೂ 777 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 104 ರೋಗಿಗಳು ಕೋವಿಡ್ ಗೆ ಬಲಿಯಾಗಿದ್ದಾರೆ.

ಶೇ.36 ಐಎಲ್‌ಐ ಪ್ರಕರಣ :  ಜಿಲ್ಲೆಯ ಕೋವಿಡ್ ರೋಗಿಗಳಲ್ಲಿ ವಿಷಮ ಶೀತ ಜ್ವರ(ಐಎಲ್‌ಐ)ದಿಂದ ಬಳಲುತ್ತಿರುವವರ ಸಂಖ್ಯೆ ಅಧಿ ಕವಾಗಿದೆ. ಶನಿವಾರದವರೆಗೆ ದೃಢಪಟ್ಟ ಒಟ್ಟು 7,147 ಸೋಂಕಿತರ ಪೈಕಿ 2,574 ಜನರು ಅಂದರೆ, ಶೇ.36.2 ಐಎಲ್‌ಐ ಪ್ರಕರಣಗಳೇ ಆಗಿವೆ. ಸೋಂಕಿತರ ನೇರ ಸಂಪರ್ಕಕ್ಕೆ ಬಂದವರು ಶೇ.18.3 (1,298 ರೋಗಿಗಳು), ಸೋಂಕಿನ ಮೂಲವೇ ಪತ್ತೆಯಾಗದ ಶೇ.17.4 (1,239), ಮಹಾರಾಷ್ಟ್ರದಿಂದ ವಾಪಸ್‌ ಆದ ವಲಸಿಗರು ಶೇ.17.4 (1,238), ತೀವ್ರ ಉಸಿರಾಟದ ತೊಂದರೆ (ಸಾರಿ)ಯಿಂದ ಬಳಲುತ್ತಿದವರು ಕೇವಲ ಶೇ.3 (235)ರಷ್ಟು ರೋಗಿಗಳು ಸೋಂಕಿನಿಂದ ಬಳಲುತ್ತಿದ್ದಾರೆ.

ಯುವಕರು ಹೆಚ್ಚಾಗಿ ಹೊರಗಡೆ ಸುತ್ತುತ್ತಿರುವುದರಿಂದ ಅವರಲ್ಲೇ ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸುವುದು, ಕೈಗಳಿಗೆ ಸ್ಯಾನಿಟೈಸರ್‌ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಆದರೂ, ನಿರ್ಲಕ್ಷಿಸುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರೋಗ ನಿರೋಧಕಶಕ್ತಿ ಹೆಚ್ಚಿರುವುದರಿಂದ ಯುವಕರು ಬೇಗ ಗುಣಮುಖರಾಗುತ್ತಿದ್ದಾರೆ. ಆದರೆ, ತಮಗೆ ಅರಿವಿದಲ್ಲೇ ತಮ್ಮ ಮನೆಗಳಲ್ಲಿ ಈಗಾಗಲೇ ಬೇರೆ-ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. -ಡಾ.ರಾಜಶೇಖರ ಮಾಲಿ, ಜಿಲ್ಲಾ ವೈದ್ಯಾಧಿಕಾರಿ.

 

-ರಂಗಪ್ಪ ಗಧಾರ

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

2-kalburgi

Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.