ಕೋವಿಡ್ 19 ಎಫೆಕ್ಟ್: ಕಲ್ಲಂಗಡಿ, ಹೂವು-ದ್ರಾಕ್ಷಿ ಹಾಳು
Team Udayavani, Mar 28, 2020, 12:35 PM IST
ಕಲಬುರಗಿ: ಕಳೆದ ವರ್ಷ ನೀರಿಲ್ಲದಿದ್ದಕ್ಕೆ ಕಂಗಾಲಾಗಿದ್ದ ರೈತ ಈ ವರ್ಷ ಇದ್ದ ನೀರಿನ ವ್ಯವಸ್ಥೆ ನಡುವೆ ಬೆಳೆಯಲಾದ ದ್ರಾಕ್ಷಿ, ಹೂವು ಹಾಗೂ ಕಲ್ಲಂಗಡಿ ಸೇರಿ ಇತರ ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ಇರದ ಹಿನ್ನೆಲೆಯಲ್ಲಿ ರಸ್ತೆಗೆ ಚೆಲ್ಲುವಂತಾಗಿದೆ. ಇದಕ್ಕೆ ಕಾರಣ ಕೋವಿಡ್ 19 ವಾಗಿದೆ.
ಹೂವು ಬಂದ ನಂತರ ವಾರದೊಳಗೆ ಕಡಿದು ಮಾರುಕಟ್ಟೆಗೆ ತಲುಪಿಸಬೇಕು. ಅದೇ ರೀತಿ ಕಲ್ಲಂಗಡಿ ಹಾಗೂ ದ್ರಾಕ್ಷಿ ಸಹ ಕಟಾವು ಮಾಡಿ ವಾರದೊಳಗೆ ಮಾರುಕಟ್ಟೆಗೆ ತಲುಪಿಸಬೇಕು. ಆದರೆ ಕೋವಿಡ್ 19 ದಿಂದ ಪ್ರಮುಖವಾಗಿ ಈ ಮೂರು ಬೆಳೆಗಳ ಮಾರುಕಟ್ಟೆಯೇ ಬಂದಾದಂತಾಗಿದೆ.
ಕಲ್ಲಂಗಡಿ ಹಣ್ಣು ತೆಗೆದುಕೊಂಡು ಹೋಗುವಂತೆ ಹೇಳಿದರೂ ಮಧ್ಯವರ್ತಿಗಳು ಬರುತ್ತಿಲ್ಲ. ವರ್ಷ ಪ್ರತಿ 8ರಿಂದ 12 ರೂ. ಕೆಜಿಗೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಈಗ ಕೇವಲ 3 ರೂ. ಕೆಜಿ ಮಾರಾಟವಾಗುತ್ತಿದೆ. ಅದೂ ಸಹ ವ್ಯಾಪಾರಿಗಳಿಗೆ ಮನವಿ ಮಾಡಿದಾಗ ತೆಗೆದುಕೊಂಡು ಹೋಗುತ್ತಿದ್ದಾರೆ. 3 ರೂ.ಗೆ ಮಾರಾಟವಾದರೆ ಒಂದು ಎಕರೆಗೆ ಖರ್ಚು ಮಾಡಲಾಗಿರುವ ಒಂದು ಲಕ್ಷ ರೂ ಬಾರದೇ ಉಲ್ಟಾ ಕೇವಲ 50 ಸಾವಿರ ರೂ. ಬರುವುದೇ ದೊಡ್ಡ ಸಾಹಸ ಎನ್ನುವಂತಿದೆ.
ಅದೇ ರೀತಿ ಹೂವು ಮಾರುಕಟ್ಟೆಯೂ ಸಂಪೂರ್ಣ ಬಿದ್ದಿದೆ. ಬೆಳೆ ಬಂದ ವಾರದೊಳಗೆ ಕಡಿದು ಮಾರಾಟವಾಗಬೇಕಿದ್ದ ಹೂವಿನ ಬಳ್ಳಿಯನ್ನೇ ಕಡಿದು ರಸ್ತೆಗೆ ಚೆಲ್ಲಲಾಗುತ್ತಿದೆ. ಇನ್ನೂ ದ್ರಾಕ್ಷಿ ವರ್ಷಪೂರ್ತಿ ಮಗುವಿನ ಹಾಗೆ ಸಂರಕ್ಷಿಸಿಕೊಂಡು ಬರಲಾಗುತ್ತದೆ. ದ್ರಾಕ್ಷಿ ಈಗ ಎಲ್ಲೆಡೆ ಕಟಾವು ಆಗುತ್ತಿದೆ. ಆದರೆ ಕಟಾವು ಮಾಡಿದ ದ್ರಾಕ್ಷಿ ಮಾರುಕಟ್ಟೆಗೆ ಪೂರೈಕೆ ಮಾಡಲಾಗುತ್ತಿಲ್ಲ. ಮಧ್ಯವರ್ತಿಗಳ್ಯಾರು ಖರೀದಿಮಾಡಲು ಮುಂದೆ ಬರ್ತಾ ಇಲ್ಲ. ಒಣಗಿಸಿ ಒಣ ದ್ರಾಕ್ಷಿ ಮಾಡಬೇಕೆಂದರೆ ಸೂಕ್ತ ಶೆಡ್ ಇಲ್ಲ. ಹೀಗಾಗಿ ದ್ರಾಕ್ಷಿ ರೈತನಿಗೆ ಹುಳಿಯಾಗಿ ಮಾರ್ಪಪಟ್ಟಿದೆ. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲು ಸರ್ಕಾರ ಮನಸ್ಸು ಮಾಡಬೇಕೆಂಬುದು ರೈತರ ಆಗ್ರಹವಾಗಿದೆ.
ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭತ್ತ, ದ್ರಾಕ್ಷಿ, ಜೋಳ, ಬಾಳೆ ಸೇರಿದಂತೆ ನಾನಾ ಬೆಳೆಗಳು ಕಟಾವಿಗೆ ಬಂದಿದ್ದು, ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೈತರ ಬೆಳೆಗಳ ಕಟಾವು ಸೇರಿದಂತೆ ಅವುಗಳನ್ನು ಮಾರುಕಟ್ಟೆಗೆ ತಲುಪಿಸುವ ನಿಟ್ಟಿನಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. –ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ಹೊರ ಬೋರ್‌ವೆಲ್ ಹಾಕಿಸಿ ಇದೇ ಮೊದಲ ಬಾರಿಗೆ ಒಂದು ಎಕರೆಯಲ್ಲಿ ಬೀಜ, ಗೊಬ್ಬರ ಹಾಗೂ ಹನಿ ನೀರಾವರಿಗೆಂದು ಲಕ್ಷ ರೂ ಅಧಿಕ ಖರ್ಚು ಮಾಡಲಾಗಿದೆ. ಆದರೆ ಕೋವಿಡ್ 19 ದಿಂದ ಮಾರುಕಟ್ಟೆಯೇ ಇಲ್ಲದಿರುವುದರಿಂದ ಕಲ್ಲಂಗಡಿ ಬೀದಿಗೆ ಚೆಲ್ಲುವಂತಾಗಿದೆ. ಕೆಜಿಗೆ 10-12ರೂ. ಮಾರಾಟವಾಗುತ್ತಿದ್ದ ಕಲ್ಲಂಗಡಿ ಕೆಜಿಗೆ 3 ರೂ. ಸಹ ಕೇಳ್ತಾ ಇಲ್ಲ. ಹೀಗಾಗಿ ಮಾಡಲಾದ ಸಾಲಕ್ಕೆ ಯಾರು ದಿಕ್ಕು ಎನ್ನುವಂತಾಗಿದೆ. –ಶಿವಾನಂದ ಜೋಗದ, ಭೈರಾಮಡಗಿ ರೈತ
-ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.