ಪುಸ್ತಕ ಪ್ರಕಟಣೆಯೊಂದಿಗೆ ಓದುಗರನ್ನು ಸೃಷ್ಟಿಸಿ: ಕೃಷ್ಣಾಜಿ
Team Udayavani, Sep 22, 2018, 2:10 PM IST
ಕಲಬುರಗಿ: ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಇಂದಿನ ದಿನಗಳಲ್ಲಿ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗಿರುವ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳು ಹೊರ ಬರುತ್ತಿವೆಯಾದರೂ ಮುಖ್ಯವಾಗಿ ಓದುಗರ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದು ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಹೇಳಿದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ, ಸಂಗಮೇಶ್ವರ ಮಹಿಳಾ ಮಂಡಳದ ಸಹಯೋಗದಲ್ಲಿ ಹಿರಿಯ ರಂಗತಜ್ಞ ಪ್ರಭಾಕರ ಸಾತಖೇಡ ಅನುವಾದಿಸಿದ “ರಕ್ತಬೀಜ’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪುಸ್ತಕ ಸುಂದರವಾಗಿ ಪ್ರಕಟಿಸಬಹುದು. ಆದರೆ ಅದು ಓದುಗನಿಗೆ ತಲುಪಿದರೆ ಸಾರ್ಥಕತೆ ಹೊಂದಿದಂತಾಗುತ್ತದೆ ಎಂದು ನುಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಪುಸ್ತಕ ಕುರಿತು ಮಾತನಾಡಿ, ಬದುಕಿನ ವಿವಿಧ ಮಜಲುಗಳಲ್ಲಿ ಜ್ಞಾನ ಗಳಿಸಿಕೊಳ್ಳುವುದು ಒಂದು ಘಟ್ಟವಾದರೆ, ಅದನ್ನು ಬಳಕೆ ಮಾಡಿಕೊಳ್ಳುವುದು ಇನ್ನೊಂದು ಘಟ್ಟ. ಗಳಿಸಿದ ಜ್ಞಾನವನ್ನು ಅನೇಕರು ಬಳಸಿದ್ದೆಷ್ಟು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
“ರಕ್ತಬೀಜ’ ನಾಟಕ ಕೃತಿ ಲೋಕಾರ್ಪಣೆ ನಾಟಕ ಮೂರು ವಿಭಾಗಗಳಲ್ಲಿ ನೋಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಸಣ್ಣವ, ದೊಡ್ಡವ ಮತ್ತು ಕೀರ್ತಿ (ಯಶಸ್ಸು) ಎಂಬ ಪಾತ್ರಗಳ ಮೂಲಕ ಬದುಕನ್ನು ತೆರೆದಿಡುವ ಸಂಗತಿ ಪ್ರಸ್ತಾಪಗೊಂಡಿದೆ. ನಾಟಕದ ಮಧ್ಯೆ ಪಾತ್ರಗಳು ಪ್ರೇಕ್ಷಕರೊಂದಿಗೆ ಮಾತನಾಡುವ ಮೂಲಕ ರಂಗಕೃತಿಯಾಗುವ ಕುತೂಹಲ ತರುವ ಸಂಗತಿಯಾಗಿದೆ ಎಂದು ಹೇಳಿದರು. ಮೂಲ ಶಂಕರ ಶೇಷ ಅವರು ಬರೆದ ಈ ನಾಟಕವನ್ನು ಸಮರ್ಥವಾಗಿ ಅನುವಾದಿಸಿರುವ ಪ್ರಭಾಕರ ಸಾತಖೇಡ ಅವರಿಗೆ ಸಾಹಿತ್ಯಕೃತಿಯನ್ನು ರಂಗಕೃತಿಯಾಗಿಸುವ ಬಗೆ ಗೊತ್ತಿದೆ. ಹೀಗಾಗಿ ಈ ನಾಟಕ ಕೃತಿ ಯಶಸ್ಸು ಪಡೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದು ಶ್ಲಾಘಿಸಿದರು.
ಹಿರಿಯ ರಂಗತಜ್ಞ ಗವೀಶ ಹಿರೇಮಠ, ಕೃತಿ ಅನುವಾದಿಸಿದ ಪ್ರಭಾಕರ ಸಾತಖೇಡ ಮಾತನಾಡಿದರು. ಹಿರಿಯ ರಂಗತಜ್ಞೆ ಶೋಭಾ ರಂಜೋಳಕರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಚ್.ನಿರಗುಡಿ ಸ್ವಾಗತಿಸಿದರು, ಪ್ರೊ| ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು. ಸುರೇಶ ಬಡಿಗೇರ ವಂದಿಸಿದರು. ಶಿವಶಾಂತರೆಡ್ಡಿ ಮುನ್ನೋಳಿ ಪ್ರಾರ್ಥನಾಗೀತೆ ಹಾಡಿದರು. ಕಿರಣ ಪಾಟೀಲ ಕನ್ನಡಪರ ಗೀತಗಾಯನ ನಿರೂಪಿಸಿದರು.
ಲೇಖಕರಾದ ಪ್ರೊ| ರವೀಂದ್ರ ಕರ್ಜಗಿ, ಏ.ಕೆ. ರಾಮೇಶ್ವರ, ಡಾ| ಸ್ವಾಮಿರಾವ್ ಕುಲಕರ್ಣಿ, ನಾಟಕಕಾರ ಎಲ್.ಬಿ.ಕೆ. ಆಲ್ದಾಳ, ಕೆ.ಎಂ. ಮಠ, ಕಲ್ಯಾಣರಾವ್ ಭಕ್ಷಿ, ಸುಬ್ರಾವ್ ಕುಲಕರ್ಣಿ, ಡಾ| ಸುಜಾತಾ ಜಂಗಮಶೆಟ್ಟಿ, ಡಾ| ಶಾಂತಾ ಭೀಮಸೇನರಾವ್, ಶಂಕ್ರಯ್ಯ ಘಂಟಿ, ಪಿ.ಎಂ. ಮಣೂರ, ಡಾ| ಎಸ್.ಎಸ್. ಗುಬ್ಬಿ, ಪ್ರೊ| ಹೇಮಂತ ಕೊಲ್ಲಾಪುರ, ಎಂ. ಸಂಜೀವ್, ಕೆ.ಪಿ. ಗಿರಿಧರ, ರಾಜಶೇಖರ ಮಾಂಗ್ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.