ಕ್ರಿಕೆಟ್ ಪಂದ್ಯ: ಮೈಸೂರಿಗೆ ಗುವಿವಿ ತಂಡ ಪ್ರಯಣ
Team Udayavani, Jan 12, 2019, 5:47 AM IST
ಕಲಬುರಗಿ: ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡವು ಶುಕ್ರವಾರ ಮೈಸೂರಿಗೆ ಪ್ರಯಾಣ ಬೆಳೆಸಿತು.
ಜ.14ರಿಂದ 24ರ ವರೆಗೆ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಗುವಿವಿ ತಂಡದ ನಾಯಕ ನರಸಿಂಹ, ಸಹ ಆಟಗಾರರಾದ ಮೊಶಿನ್ ಪಟೇಲ, ಅಪ್ಪಾಶಾ ಶಿವಶರಣ, ಅಭಿಷೇಕ, ಅಬ್ದುಲ್ ಆರ್.ಎಸ್., ಕೇದಾರನಾಥ, ಮಯೂರ.ಎಂ.ಪಟೇಲ, ಅಕ್ಷಯ, ಭರತಕುಮಾರ ರೆಡ್ಡಿ, ಶೀತಲಕುಮಾರ, ಆಶ್ರಯಕುಮಾರ, ಈರಣ್ಣ, ಸತ್ಯಂ, ಸೋಮಶೇಖರ, ಸಿದ್ದರಾಮ ಮತ್ತು ತಿಕೋಲೆ ದಿನೇಶ, ತಂಡದ ವ್ಯವಸ್ಥಾಪಕ ಹಾಗೂ ತರಬೇತುದಾರರಾಗಿ ಯಾದಗಿರಿಯ ಸರ್ಕಾರಿ ಮಹಾವಿದ್ಯಾಲಯದ ದೈಹಿಕ ಶಿಕ್ಷಕ ಡಾ| ಪ್ರಸಾದ.ಬಿ, ತೆರಳಿದರು.
ತಂಡದ ಯಶಸ್ಸಿಗೆ ಕುಲಸಚಿವ ಪ್ರೊ| ಸಿ. ಸೋಮಶೇಖರ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ| ಕೆ. ವಿಜಯಕುಮಾರ ಮತ್ತು ಕಾನೂನು ನಿಕಾಯದ ಡೀನ್ ಪ್ರೊ| ದೇವಿದಾಸ ಮಾಲೆ, ಸ್ನಾತಕೋತ್ತರ ದೈಹಿಕ ಶಿಕ್ಷಣ ಸಂಯೋಜಕ ಡಾ| ಎಚ್.ಎಸ್. ಜಂಗೆ, ವಿವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಎನ್.ಜಿ. ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಎಂ.ಎಸ್. ಪಾಸೋಡಿ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.