ಕೇಂದ್ರೀಯ ವಿದ್ಯಾಲಯದಲ್ಲಿ ಅಜ್ಜ- ಅಜ್ಜಿಯರ ದಿನಾಚರಣೆ
Team Udayavani, Dec 7, 2022, 11:45 AM IST
ಕಲಬುರಗಿ: ಎಪ್ಪತ್ತು- ಎಂಭತ್ತು ವಯಸ್ಸಿನ ಹಿರಿಯ ಜೀವಿಗಳು ತಮ್ಮ ಮೊಮ್ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬ ವೀಕ್ಷಿಸಿದರಲ್ಲದೇ ಮೊಮ್ಮಕ್ಕಳ ಕ್ರಿಯಾಶೀಲತೆ ಕಂಡು ಪುಳಕಿತಗೊಂಡರು.
ಇದು ನಗರದ ಕೇಂದ್ರೀಯ ವಿದ್ಯಾಲಯದಲ್ಲಿಂದು ನಡೆದ ಅಜ್ಜ- ಅಜ್ಜಿಯರ (ಗ್ರ್ಯಾಂಡ್ ಪೇರಂಟ್) ದಿನಾಚರಣೆ ಯಲ್ಲಿ ಕಂಡು ಬಂದ ನೋಟವಿದು.
ಶಾಲಾ-ಕಾಲೇಜುಗಳಲ್ಲಿ ಪಾಲಕರ ದಿನಾಚರಣೆ ಅಥವಾ ಸಭೆ ನಡೆಯುವುದನ್ನು ಕೇಳಿದ್ದೇವೆ. ಆದರೆ ಅಜ್ಜಿ- ಅಜ್ಜಿಯರ ದಿನಾಚರಣೆ ಆಚರಿಸಿರುವುದು ವಿಶೇಷವಾಗಿತ್ತು.ಶಾಲಾ ಮಕ್ಕಳೆಲ್ಲರೂ ಅಜ್ಜ – ಅಜ್ಜಿಯರಿಗೆ ಹೂವು ನೀಡಿ ನಮಸ್ಕರಿಸಿ ಸ್ವಾಗತಿಸಿರುವುದು ಮನ ಮುಟ್ಟುವಂತಿತ್ತು.
ಪರಿಸರ ಕಾಳಜಿ, ದೇಶಭಕ್ತಿ ಅದರಲ್ಲೂ ಮನತಟ್ಟುವ ಪ್ರಸಂಗಗಳು ಅದರಲ್ಲೂ ದುಡ್ಡು ಕೊಟ್ಟರೆ ಬೇಕಾದು ಸಿಗುವುದು… ಹಡೆದ ತಾಯಿಯನ್ನು ಕಳಕೊಂಡ ಮೇಲೆ ಮತ್ತೇ ಸಿಗುವಳೇನು? ಎಂಬ ಗೀತೆ ರೂಪಕವಂತು ಎಲ್ಲರ ಕಣ್ಣಲ್ಲೂ ಧಾರಾಕಾರವಾಗಿ ಹರಿದು ಬಂತು. ಸಮಾರಂಭದ ಇಡೀ ಸಭಿಕರೆಲ್ಲರೂ ಭಾವನಾತ್ಮಕದಲ್ಲಿ ಮುಳುಗಿದರು.
ಕೆಲವರು ಹಿರಿಯರಂತು ಮನೆಯಲ್ಲಿಂದು ಹಿರಿಯರು ನಾಮಕವಾಸ್ತೆ ಎನ್ನುವಂತಾಗಿದೆಯಲ್ಲದೇ ಗೌರವ ಅಪರೂಪ ಎನ್ನುವಂತಾಗಿದೆ. ಶಿಕ್ಷಣ ಎಂಬುದು ಪ್ರತಿಷ್ಠೆಗೆ ಎನ್ನುವಂತಾಗಿದೆ. ಆದರೆ ಕೇಂದ್ರೀಯ ವಿದ್ಯಾಲಯದವರು ಹಿರಿಯರನ್ನು ಗೌರವದಿಂದ ಕಾಣುವ ಹಾಗೂ ಮೊಮ್ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಅಜ್ಜ- ಅಜ್ಜಿಯರ ದಿನಾಚರಣೆ ಆಯೋಜಿಸಿರುವುದು ಹೆಚ್ಚು ಖುಷಿ ತಂದಿದೆಯಲ್ಲದೇ ಮನ ಮುಟ್ಟಿದೆ ಎಂದು ಸಂತಸ ಪಟ್ಟರು.
ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರಾದ ಪ್ರಲ್ಹಾದ ಎಸ್, ಮುಖ್ಯ ಗುರುಗಳಾದ ಕೆ.ಕೆ.ಕಲಕೇರಿ, ಅಜ್ಜ- ಅಜ್ಜಿಯರ ಪರವಾಗಿ ನಿವೃತ್ತ ಪೊಲೀಸ್ ಅಧಿಕಾರಿ ಶರಣಪ್ಪ, ಹಿರಿಯ ಪತ್ರಕರ್ತ ಶಂಕರ ಕೊಡ್ಲಾ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.