ವಿದ್ಯಾರ್ಥಿ ಹತ್ಯೆಗೆ ದಲಿತ ಸೇನೆ ಖಂಡನೆ
Team Udayavani, Aug 25, 2022, 4:38 PM IST
ಮಾದನಹಿಪ್ಪರಗಿ: ರಾಜಸ್ಥಾನದಲ್ಲಿ ನಡೆದ ವಿದ್ಯಾರ್ಥಿ ಹತ್ಯೆ ಖಂಡಿಸಿ ದಲಿತ ಸೇನೆ ಸ್ಥಳೀಯ ನಾಡ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿತು.
ಈ ವೇಳೆ ದಲಿತ ಸೇನೆ ವಿದ್ಯಾರ್ಥಿ ಒಕ್ಕುಟದ ಜಿಲ್ಲಾಧ್ಯಕ್ಷ ಶಿವಲಿಂಗಪ್ಪ ದೊಡ್ಡಮನಿ ಮಾತನಾಡಿ, ನೀರಿನ ಮಡಿಕೆ ಮುಟ್ಟಿದನೆಂದು ಶಿಕ್ಷಕನೊಬ್ಬ ದಲಿತ ವಿದ್ಯಾರ್ಥಿ ಹತ್ಯೆ ಮಾಡಿರುವುದು ಅಮಾನವೀಯ ಕೃತ್ಯ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ದಲಿತ ಸೇನೆ ವಲಯದ ಅಧ್ಯಕ್ಷ ಶಿವಲಿಂಗ ಚೆನ್ನಗುಂಡ ಮಾತನಾಡಿ, ದಲಿತ ವಿದ್ಯಾರ್ಥಿ ಹತ್ಯೆ ಮಾಡಿದ ಶಿಕ್ಷಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ರಾಷ್ಟ್ರಪತಿಗೆ ಮನವಿ ಪತ್ರ ಕಳಿಸಲಾ ಗುವುದು ಎಂದು ಹೇಳಿದರು.
ನಿಂಬಾಳ ಗ್ರಾಮ ಶಾಖೆ ಅಧ್ಯಕ್ಷ ಲಕ್ಷ್ಮಣ ತಳಕೇರಿ ಮನವಿ ಪತ್ರ ಓದಿದರು. ನಾಡಕಾರ್ಯಾಲಯದ ಉಪ ತಹಶೀಲ್ದಾರ್ ರವೀಂದ್ರ ಶೇರಿಕಾರ ಮನವಿ ಪತ್ರ ಸ್ವೀಕರಿಸಿದರು. ಕಂದಾಯ ನಿರೀಕ್ಷಕ ರಾಜಕುಮಾರ ಸರಸಂಬಿ, ಮುಖಂಡರಾದ ಹಣಮಂತ ಹೋಳಿಕೇರಿ, ರಮೇಶ ಪಾಟೀಲ ಕೇರೂರ, ಶರಣಬಸಪ್ಪ ಅಂಬೇವಾಡ, ಶಿವಲಿಂಗಪ್ಪ ಅಂಜುಟಗಿ, ಚನ್ನಮಲ್ಲಪ್ಪ ಮುಲಗೆ, ನಿಂಬಾಳ ಚಲಗೇರಾ, ಕೇರೂರ ಗ್ರಾಮ ಶಾಖೆಗಳ ದಲೆತ ಸೇನೆ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.