ದಾಲ್‌ಮಿಲ್ ಪುನಶ್ಚೇತನಕ್ಕೆ ಒತ್ತಾಯ
Team Udayavani, Jun 3, 2018, 2:01 PM IST
ಕಲಬುರಗಿ: ಬೆಲೆ ಕುಸಿತ ಹಾಗೂ ಪೂರೈಕೆ ಬೇಡಿಕೆ ಕಡಿಮೆಯಾಗಿರುವ ಕಾರಣ ಬಂದ್ ಆಗಿರುವ ದಾಲ್‌ಮಿಲ್‌ಗಳ ಪುನಶ್ಚೇತನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.
ಜಿಲ್ಲೆಯಲ್ಲಿರುವ 297 ದಾಲ್‌ಮಿಲ್‌ಗಳ ಪೈಕಿ 38 ದಾಲ್‌ಮಿಲ್‌ಗಳು ಎನ್‌ಪಿಎದಿಂದ ಉದ್ಭವಿಸಿರುವ ಗಂಭೀರ ಸಮಸ್ಯೆಯಿಂದ ರೋಗಗ್ರಸ್ತವಾಗಿ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಏರಿಳಿತಗಳಿಂದ ಮತ್ತು ಸರಕಾರದ ತಪ್ಪು ನೀತಿಗಳಿಂದಾಗಿ 156 ದಾಲ್‌ಮಿಲ್‌ಗಳ ಬೆಳೆ ಉತ್ಪಾದಿಸುವ ಪ್ರಮಾಣವು
ಗಣನೀಯವಾಗಿ ಕುಸಿದಿದೆ. ಜತೆಗೆ 103 ದಾಲ್ ಮಿಲ್‌ಗಳ ಗರಿಷ್ಠ ಪ್ರಮಾಣದ ಬೆಳೆ ಉತ್ಪಾದನೆ ಮಟ್ಟವು ನೀರಿಕ್ಷೆಗೆ ಮೀರಿ ವಿಫಲವಾಗಿವೆ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಹಾಗೂ ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ವಿವರಿಸಿದ್ದಾರೆ.
ದಾಲ್‌ಮಿಲ್‌ಗಳು ಆರ್ಥಿಕ ಸಂಕಷ್ಟ ಎದುರಿಸಿ, ಬ್ಯಾಂಕ್‌ಗಳಿಂದ ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸುವಲ್ಲಿ ವಿಫಲವಾಗಿವೆ. ಕಳೆದ ಅಕ್ಟೋಬರ್ 28ರಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಿತಿಮಿರಿದ ಸಂಕಷ್ಟದಲ್ಲಿರುವ ದಾಲ್‌ಮಿಲ್‌ಗಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಾಗ, ಸಚಿವರು ಕಲಬುರಗಿ ಜಿಲ್ಲಾ ಧಿಕಾರಿಗಳಿಗೆ ಸಮಸ್ಯೆ ಕುರಿತು
ವರದಿ ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಸಲಹೆ ಸಲ್ಲಿಸುವಂತೆ ಸೂಚನೆ ನೀಡಿದ್ದರು.
ಸಚಿವರ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ವರದಿಯನ್ನು ಜಾರಿ ಮಾಡುವ ಮುಖಾಂತರ ದಾಲ್‌ಮಿಲ್‌ಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಸಲಹೆಗಳ ಜೊತೆಯಲ್ಲಿ ಸರಕಾರವು ಕಲಬುರಗಿಯಲ್ಲಿರುವ ದಾಲ್ ಮಿಲ್‌ಗಳಿಗೆ ನಾಫೇಡ್ ಮೂಲಕ ತೊಗರಿ ಸರಬರಾಜು ಮಾಡಿದರೆ ದಾಲ್‌ಮಿಲ್‌ಗಳು ಉತ್ಪಾದನೆ ಶುಲ್ಕದ ಮೇಲೆ ತೊಗರಿ ಬೆಳೆಯಾಗಿ ಉತ್ಪಾದಿಸುವರು ಮತ್ತು ತೊಗರಿ ಬೆಳೆಯನ್ನು ಸರಕಾರವು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲು ಸಹಾಯಕವಾಗುವುದು. ಸರಕಾರವು ಜವಳಿ ಫಟಕಗಳಿಗೆ ವಿದ್ಯುತ್‌ನ್ನು 1ರೂ. ದರದಲ್ಲಿ ಸರಬರಾಜು ಮಾಡುತ್ತಲಿದೆ. ಸಂಕಷ್ಟದಲ್ಲಿರುವ ದಾಲ್‌ಮಿಲ್‌ಗಳಿಗೆ ಇದೇ ದರದಲ್ಲಿ ವಿದ್ಯುತ್ ಸರಬರಾಜು ಮಾಡಿದಲ್ಲಿ ಅನುಕೂಲವಾಗುತ್ತದೆ.
ಸರಕಾರವು ಸಕ್ಕರೆ ಉತ್ಪಾದಿಸುವ ಕೈಗಾರಿಕೆಗಳನ್ನು ಮರು ಸ್ಥಾಪಿಸಲು 60,000 ಕೋಟಿ ರೂ. ಗಳ ಆರ್ಥಿಕ ಸಹಾಯ ಒದಗಿಸಿದೆ. ಹೈಕ ಪ್ರದೇಶದ ಐದು ಜಿಲ್ಲೆಗಳ ರೈತರು ತೊಗರಿಯನ್ನು ಬೆಳೆಯಲು ನೆರವಾಗುರುತ್ತಿರುವುದರಿಂದ ಸರಕಾರವು ದಾಲ್ ಮಿಲ್‌ಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಸಕ್ಕರೆ ಉತ್ಪಾದಿಸುವ ಕೈಗಾರಿಕೆಗಳಿಗೆ ನೀಡಿರುವ ಆರ್ಥಿಕ ಸಹಾಯದ ಮಾದರಿಯಲ್ಲಿ ಒಂದು ಆರ್ಥಿಕ ಸಹಾಯದ ಪ್ಯಾಕೆಜ್‌ನ್ನು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಕಲಬುರಗಿ ಜಿಲ್ಲಾಧಿಕಾರಿ ನೀಡಿರುವ ದಾಲ್‌ಮಿಲ್‌ಗಳ ಪುನಶ್ಚೇತನಾ ವರದಿಯನ್ನು ಜಾರಿ ತರಬೇಕೆಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.