ಡಿಎಆರ್ ಪೊಲೀಸ್ ತಂಡಕ್ಕೆ ಸಮಗ್ರ ಪ್ರಶಸ್ತಿ
Team Udayavani, Dec 4, 2018, 10:17 AM IST
ಕಲಬುರಗಿ: ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ
ಕ್ರೀಡಾಕೂಟಕ್ಕೆ ಅದ್ಧೂರಿ ತೆರೆಬಿದ್ದಿದೆ. ಪ್ರಸಕ್ತ ಸಾಲಿನಲ್ಲೂ ಡಿಎಆರ್ ಪೊಲೀಸ್ ತಂಡ ಸಮಗ್ರ ಪ್ರಶಸ್ತಿಗೆ ಪಡೆಯುವುದರ
ಮೂಲಕ ಮತ್ತೂಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಸೋಮವಾರ ವಾರ್ಷಿಕ ಕ್ರೀಡಾಕೂಟ ಅಂತ್ಯವಾಗಿದ್ದು, ಸಮಾರೋಪದ ಸಮಾರಂಭದಲ್ಲಿ ವಿಜೇತರು ಪ್ರಶಸ್ತಿ ಪಡೆದು
ಸಂಭ್ರಮಿಸಿದರು. ಡಿಎಆರ್ ಪೊಲೀಸ್ ತಂಡದವರು ಸಮಗ್ರ ಪ್ರಶಸ್ತಿಗೆ ಭಾಜನರಾದರೆ, ವೈಯಕ್ತಿಕ ವಿಭಾಗದ ಮಹಿಳೆಯರಲ್ಲಿ ಆಳಂದದ ಡಬ್ಲ್ಯೂಪಿಸಿ ಸುವರ್ಣಾ ಮತ್ತು ಪುರುಷರ ವಿಭಾಗದಲ್ಲಿ ಡಿಎಆರ್ ಎಪಿಸಿ ನದಾಫ್ ಬೆಸ್ಟ್ ಅಥ್ಲೆಟ್ ಪ್ರಶಸ್ತಿಗೆ ಪಾತ್ರರಾದರು.
ಪುರುಷರ ಕಬಡ್ಡಿಯಲ್ಲಿ ಡಿಎಆರ್ ತಂಡ ವಿನ್ನರ್ ಮತ್ತು ಎ ಉಪವಿಭಾಗ ತಂಡ ರನ್ನರ್ ಅಪ್ ಪ್ರಶಸ್ತಿ, ವಾಲಿಬಾಲ್‌ನಲ್ಲೂ
ಡಿಎಆರ್ ತಂಡ ವಿನ್ನರ್ ಆದರೆ, ಗ್ರಾಮೀಣ ಉಪವಿಭಾಗ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಗ್ರಾಮೀಣ ಉಪ ವಿಭಾಗ ತಂಡ ಪ್ರಥಮ ಮತ್ತು ಡಿಎಆರ್ ತಂಡ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು.
ಎಸ್‌ಪಿ ಹಂತದ ಅಧಿಕಾರಿಗಳಿಗೆ ನಡೆದ ಶೂಟಿಂಗ್‌ನಲ್ಲಿ ಎಸ್‌ಪಿ ಎನ್.ಶಶಿಕುಮಾರ ಪ್ರಥಮ ಹಾಗೂ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ದ್ವಿತೀಯ ಬಹುಮಾನ ಪಡೆದರು. ರೈಫಲ್ ಶೂಟಿಂಗ್‌ನಲ್ಲೂ ಎಸ್‌ಪಿ ಎನ್. ಶಶಿಕುಮಾರ ಹಾಗೂ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ಕ್ರಮವಾಗಿ ಪ್ರಥಮ, ದ್ವಿತೀಯ ಪ್ರಶಸ್ತಿ ಗಳಿಸಿದರು.
ಪಿಎಸ್‌ಐಗಳ ಡಬಲ್ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಯಡ್ರಾಮಿ ಪಿಎಸ್‌ಐ ನಾಗಪ್ಪ ಮತ್ತು ಗ್ರಾಮೀಣ ಪಿಎಸ್‌ಐ ಚಂದ್ರಶೇಖರ ಪ್ರಥಮ, ಅಫಲಜಪುರದ ರೇವಣ್ಣ, ಮಂಜುನಾಥ ಹೂಗಾರ ದ್ವಿತೀಯ ಹಾಗೂ ಎಂ.ಬಿ. ನಗರದ ಶರಣಬಸಪ್ಪ, ವಾಡಿಯ ವಿಜಯಕುಮಾರ ತೃತೀಯ ಬಹುಮಾನ ಪಡೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಗೆ ಎಸ್‌ಪಿ ಎನ್.ಶಶಿಕುಮಾರ ಬಹುಮಾನ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.