![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 5, 2021, 8:48 PM IST
ಕಲಬುರಗಿ: ಈ ಭಾಗದ ಆರಾಧ್ಯದೈವ, ತ್ಯಾಗದ ಸಂಕೇತ, ಮಹಾದಾಸೋಹಿ ಶರಣಬಸವೇಶ್ವರ ದೇಗುಲವು ಸೋಮವಾರದಿಂದ ಭಕ್ತರ ದರ್ಶನಕ್ಕಾಗಿ ತೆರೆಯಲಿದೆ. ದೇವಾಲಯದ ಸ್ವಯಂ ಸೇವಕರು ಮತ್ತು ಸಿಬ್ಬಂದಿ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶ ಮತ್ತು ಶರಣ ಬಸವೇಶ್ವರ ದೇಗುಲದ ವಿಸ್ತಾರವಾದ ಸಂಕೀರ್ಣದಲ್ಲಿಯೂ ಸ್ವತ್ಛತೆ ಕಾರ್ಯ ಕೈಗೊಂಡಿದ್ದಾರೆ.
ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯ ಸರಕಾರ ಹೇರಿದ ನಿರ್ಬಂಧನೆಗಳನ್ನು ಅನುಸರಿಸಿ ಏಪ್ರಿಲ್ 23 ರಿಂದ ದರ್ಶನ ಭಾಗ್ಯ ನಿಲ್ಲಿಸಲಾಗಿತ್ತು. ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾ ದಾಸೋಹ ಪೀಠಾ ಧಿಪತಿಗಳಾದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ರಾದ ಮಾತೋಶ್ರೀ ಡಾ| ದಾûಾಯಿಣಿ ಅವ್ವ ಅವರು, ರಾಜ್ಯ ಸರಕಾರವು ವಿ ಧಿಸಿರುವ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನು ಸರಿಸಲಾಗುವುದು ಎಂದಿದ್ದಾರೆ.
ಭಕ್ತರು ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಗೊಳಿಸಿ ಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ. ಪೂಜ್ಯ ಡಾ| ಅಪ್ಪ ಮತ್ತು ಮಾತೋಶ್ರೀ ಡಾ| ಅವ್ವ ಭಕ್ತರಿಗೆ ಶರಣ ಬಸವೇಶ್ವರರ ದರ್ಶನಾಶೀರ್ವಾದ ಪಡೆಯಲು ಮತ್ತು ದೇಗುಲಕ್ಕೆ ಭೇಟಿ ನೀಡುವಾಗ ಸರಕಾರ ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿ ಸಬಾರದು. ದೇವಾಲಯದಲ್ಲಿ ಅ ಧಿಕಾರಿ ಗಳೊಂದಿಗೆ ಸಹಕರಿಸಿ ಭಕ್ತರ ಸುರಕ್ಷತೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ. ಇಡೀ ದೇವಾಲಯ ಸಂಕೀರ್ಣ ಮತ್ತು ದೇವಾಲಯವನ್ನು ಸ್ವಯಂಸೇವಕರು ಮತ್ತು ದೇಗುಲದ ಸಿಬ್ಬಂದಿಗಳು ಸ್ವತ್ಛತೆ ಕಾರ್ಯ ಕೈಗೊಂಡಿದ್ದಾರೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.