![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 13, 2017, 10:20 AM IST
ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಲೋಕೋಪಯೋಗಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ಜೆಸಿಬಿ ಇನ್ನಿತರ ವಾಹನಗಳೊಂದಿಗೆ ರವಿವಾರ ಬೆಳಗ್ಗೆ ಮುಂದಾದಾಗ ವ್ಯಾಪಾರಿಗಳು, ವಕೀಲರು ಸೇರಿಕೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ನೂರಾರು ಪೊಲೀಸರ ಜತೆಗೂಡಿಸಿ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಇನ್ನಿತರ ವಾಹನಗಳೊಂದಿಗೆ ಲೋಕೋಪಯೋಗಿ
ಹಾಗೂ ಪಾಲಿಕೆ ಸಿಬ್ಬಂದಿ ಆಗಮಿಸಿದ್ದರು. ಒಳಾವರಣದಲ್ಲಿರುವ ಅಂಗಡಿಗಳನ್ನು ತೆಗೆಯಲಾಗುತ್ತದೆ ಎನ್ನುವ ಮುನ್ಸೂಚನೆ ಅರಿತು ಹಲವರು ಜಮಾಗೊಂಡರು ನ್ಯಾಯಾಲಯ ಪ್ರವೇಶಕ್ಕೆ ಮುಖ್ಯರಸ್ತೆಯಲ್ಲಿರುವ ಬಾಗಿಲು
ಮುಂಭಾಗದಲ್ಲಿಯೇ ವಕೀಲರು, ವ್ಯಾಪಾರಿಗಳು ಸೇರಿಕೊಂಡು ಕುಳಿತು ಪ್ರತಿಭಟನೆ ಆರಂಭಿಸಿದರಲ್ಲದೇ ಸಮಯಾವಕಾಶ ಕೇಳಿದರು. ಇದರ ನಡುವೆ ಪೊಲೀಸರ ಬಲದೊಂದಿಗೆ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಒಳಪ್ರವೇಶಕ್ಕೆ ಮುಂದಾದರು. ಈ ವೇಳೆಯಲ್ಲಿ ಪ್ರತಿರೋಧಿಸಿದವರ ಹಾಗೂ ತೆರವುಗೊಳಿಸಲು ಮುಂದಾದವರ ನಡುವೆ ಮಾತಿನ ಚಕಮಕಿ ನಡೆಯಿತು.
ಗೂಡಂಗಡಿಗಳ ತೆರವಿಗೆ ಮಾನ್ಯ ಹೈಕೋರ್ಟ್ ಸೂಚನೆಯಿದೆ. ಹೀಗಾಗಿ ಕಾರ್ಯಾಚರಣೆಗೆ ಮುಂದಾಗಲಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದದರು. ಇದಕ್ಕೆ ಎರಡು ದಿನ ಸಮಯ ಕೊಡಿ ನಾವೇ ಖಾಲಿ ಮಾಡುತ್ತೇವೆ ಎಂದು ವ್ಯಾಪಾರಿಗಳು ಅಧಿಕಾರಿಗಳಿಗೆ ಮೊರೆ ಹೋದರು. ಕೊನೆಗೆ ಸಂಜೆ ವೇಳೆ ಗಡುವು ನೀಡಿ, ಕಾರ್ಯಾಚರಣೆ ಕೈಬಿಡಲಾಯಿತು. ವಕೀಲರ ಸಂಘದ ಅಧ್ಯಕ್ಷ ಹಿರಿಯ ನ್ಯಾಯವಾದಿಗಳಾದ ಪಿ.ವಿಲಾಸಕುಮಾರ, ಪಿ.ಎಸ್.ಪಾಟೀಲ್ ಬಳಬಟ್ಟಿ, ರಮೇಶ ಕಡಾಳೆ ಸೇರಿದಂತೆ ಮುಂತಾದವರಿದ್ದರು.
ರಿಂಗ್‌ರೋಡ್‌ನಲ್ಲಿ ಜೆಸಿಬಿ ಸದ್ದು: ಕಲಬುರಗಿ ನಗರದ ರಿಂಗ್‌ರೋಡ್ ನಲ್ಲಿ ಒತ್ತುವರಿ ಮಾಡಿಕೊಂಡು ತಲೆ ಎತ್ತಿರುವ
ಕಟ್ಟಡಗಳನ್ನು ಹಾಗೂ ಸರ್ವಿಸ್ ರೋಡ್ ಕಬ್ಜಾ ಮಾಡಿಕೊಂಡು ಶೆಡ್ ಹಾಕಿದ್ದನ್ನು ಮಹಾನಗರ ಪಾಲಿಕೆ ಸಿಬ್ಬಂದಿ ರವಿವಾರ ಬೆಳಗ್ಗೆ ಮಿಂಚಿನ ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿದರು.
ಹಾಗರಗಾ ಕ್ರಾಸ್, ಬುಲಂದಪರ್ವೇಜ್ ಕಾಲನಿ ರೋಡ್, ಮಹ್ಮದ ರಫೀಚೌಕ್, ಕೆಸಿಟಿ ಸರ್ಕಲ್ ಮೊದಲಾದ ಕಡೆಗಳಲ್ಲಿನ ಒತ್ತುವರಿಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತೆರುವುಗೊಳಿಸಲಾಯಿತು. ಇದಲ್ಲದೇ
ನಗರದ ವಿವಿಧೆಡೆ ಜೆಸಿಬಿ ಸದ್ದು ಮಾಡಿವೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.