ಅಕ್ರಮ ಮದ್ಯಮಾರಾಟ ತಡೆಗೆ ಆಗ್ರಹ
Team Udayavani, Feb 7, 2018, 11:48 AM IST
ಜೇವರ್ಗಿ: ಪಟ್ಟಣದ ಚಿಕ್ಕಜೇವರ್ಗಿ ಬಡಾವಣೆಯಲ್ಲಿ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ತಾಲೂಕು ಘಟಕದ ವತಿಯಿಂದ ಗ್ರೇಡ್-2 ತಹಶೀಲ್ದಾರ್ ನಾಗಿಂದ್ರಪ್ಪ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಪುರಸಭೆ ವ್ಯಾಪ್ತಿಯ ವಾರ್ಡ್ ನಂ.13ರ ಚಿಕ್ಕಜೇವರ್ಗಿ ಬಡಾವಣೆಯಲ್ಲಿ ಪರವಾನಗಿ ಇಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅಲ್ಲಿನ ಬಡ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಕೂಲಿ ಮಾಡಿ ಬದುಕುವ ಕೂಲಿ ಕಾರ್ಮಿಕರು ದುಡಿಮೆ ಮಾಡಿ ತಂದ ಹಣವನ್ನು ಹಾಳು ಮಾಡುತ್ತಿರುವುದರಿಂದ ಮಕ್ಕಳು ಹೊಟ್ಟೆಗೆ ಅನ್ನವಿಲ್ಲದೇ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿ ಈ ಮದ್ಯದ ಅಂಗಡಿ ಇದ್ದುದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಬಡಾವಣೆಯಲ್ಲಿ ಪರವಾನಗಿ ಇಲ್ಲದ 4 ಅಂಗಡಿಗಳನ್ನು ಕೂಡಲೇ ಮುಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಸಂಚಾಲಕ ಸಿದ್ದು ಮುದಬಾಳ, ಮಹೇಶ ಕೋಕಿಲೆ, ಸುಭಾಸ ಆಲೂರ, ಸಂಗು ಹರನೂರ, ಭೀಮಾಶಂಕರ ಹಂಗರಗಾ, ಭಾಗಣ್ಣ ಗೋಪಾಲಕರ್, ವಿಶ್ವರಾಧ್ಯ ಗೋಪಾಲಕರ್, ಸೋಮಶೇಖರ, ಯಲ್ಲಮ್ಮ ಚಂದ್ರಕಾಂತ, ಜಗಮ್ಮ ದೇವಪ್ಪ, ಭೀಮವ್ವ ಮುಡಬೂಳ, ಮಹಾದೇವಿ ದೇವಪ್ಪ, ಗೌರಮ್ಮ ಲಕ್ಷ್ಮಣ, ಹುಲಗಮ್ಮ ಹಣಮಯ್ಯ, ಫಾತೀಮಾ ಖಾಲೆಸಾಬ, ಲಕ್ಷ್ಮೀಬಾಯಿ ಹಣಮಂತ, ಶಿವಲಿಂಗಪ್ಪ ನಾಟಿಕಾರ, ಕಲ್ಲಣ್ಣ ಹಳ್ಳಿ, ನಾಗು ಮುಡಬೂಳ, ಜೈಭೀಮ ಅಯ್ಯಪ್ಪ, ಶಂಕರ ಗೋಪಾಲಕರ್, ಭೀಮು ಹರವಬಾಳ, ಗುಂಡಪ್ಪ ಚೌದ್ರಿ, ಆಡಿವೆಮ್ಮ ಮಡಿವಾಳಪ್ಪ ಇದ್ದರು.
ಅಕ್ರಮ ಸಾರಾಯಿ ಮಾರಾಟ ನಿಲ್ಲಿಸಿ
ಜೇವರ್ಗಿ: ತಾಲೂಕಿನ ಕೆಲ್ಲೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಮಂಗಳವಾರ ಶ್ರೀರಾಮಸೇನೆ ತಾಲೂಕು ಘಟಕದ ವತಿಯಿಂದ ಅಬಕಾರಿ ಉಪನಿರೀಕ್ಷಕ ಎನ್.ಟಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಅನೇಕ ದಿನಗಳಿಂದ
ಕೆಲ್ಲೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು,
ಇದರಿಂದ ಹಲವಾರು ಕುಟುಂಬಗಳು ಬೀದಿಪಾಲಾಗಿವೆ. ನಿತ್ಯ ಗ್ರಾಮದಲ್ಲಿ ಜಗಳ, ಗಲಭೆ ಹೆಚ್ಚಾಗಿದ್ದು, ಕುಡುಕರ ಹಾವಳಿ
ಹೆಚ್ಚಳವಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಬಕಾರಿ ಕಚೇರಿ ಎದುರು ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಶರಣು ಕೋಳಕೂರ, ಈಶ್ವರ ಹಿಪ್ಪರಗಿ, ಸಚಿನ್ ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.