ಗೋವಾ ಸಚಿವ ಮನೋಹರ ರಾಜೀನಾಮೆಗೆ ಆಗ್ರಹ
Team Udayavani, Apr 8, 2017, 3:42 PM IST
ಜೇವರ್ಗಿ: ಬಂಜಾರಾ ಸಮಾಜದ ಕುರಿತು ಲಘುವಾಗಿ ಮಾತನಾಡಿದ ಗೋವಾ ರಾಜ್ಯದ ಪ್ರವಾಸೋದ್ಯಮ ಸಚಿವ ಮನೋಹರ ಅಜಗಾಂವಕರ್ ರಾಜೀನಾಮೆಗೆ ಒತ್ತಾಯಿಸಿ ಶುಕ್ರವಾರ ಬಂಜಾರಾ ಹಿತರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನೋಹರ ಪರಿಕ್ಕರ ನೇತೃತ್ವದ ಗೋವಾ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿರುವ ಅಜಗಾಂವಕರ್, ಬಂಜಾರಾ ಸಮಾಜದವರು ಗೋವಾ ಪರಿಸರವನ್ನು ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋವಾ ರಾಜ್ಯದಲ್ಲಿ ಬಂಜಾರಾ ಸಮಾಜದವರಿಗೆ ಪ್ರವೇಶ ನಿಷೇಧಿಧಿಸಬೇಕೆಂದು ಹೇಳಿರುವುದು ಬಂಜಾರಾ ಹಿತರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರಾ ಸಮಾಜದ ಸಂಸ್ಕೃತಿಯನ್ನು ಇಡೀ ವಿಶ್ವವೇ ಆರಾಧಿಸುತ್ತದೆ. ಅಂತಹದ್ದರಲ್ಲಿ ಬಂಜಾರಾ ಸಮಾಜದವರು ಗೋವಾ ಕರಾವಳಿ ಪ್ರದೇಶಕ್ಕೆ ಹೊಂದಾಣಿಕೆ ಆಗುವುದಿಲ್ಲ ಎಂದು ಹೇಳಿರುವುದು ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಮಾರಕ. ಆದ್ದರಿಂದ ಕೂಡಲೇ ಸಚಿವ ಅಜಗಾಂವಕರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಬಂಜಾರಾ ಹಿತರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಧನರಾಜ ರಾಠೊಡ ಮುತ್ತಕೋಡ, ಉಪಾಧ್ಯಕ್ಷ ಲಕ್ಷ್ಮಣ ಪವಾರ ಮಾವನೂರ, ಬಾಬುರಾವ ಜಾಧವ ಜೈನಾಪುರ, ಪ್ರಭು ಜಾಧವ, ಚಂದ್ರಶೇಖರ ಬಳಬಟ್ಟಿ, ರಮೇಶ ರಾಠೊಡ ರೇವನೂರ, ತಿರುಪತಿ ರಾಠೊಡ ಕೊಣ್ಣೂರ, ವಿನೋಧ ರಾಠೊಡ ಬಳಬಟ್ಟಿ, ಲಕ್ಷಣ ರಾಠೊಡ ಖಾದ್ಯಾಪುರ, ಶಿವಾನಂದ ರಾಠೊಡ, ರಮೇಶ ಶಿವಪುರ, ರಮೇಶ ರಾಠೊಡ ಖಾದ್ಯಾಪುರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.