ಸಿಮೆಂಟ್‌ ನಗರಿಯಲ್ಲಿ ಡೆಂಘೀ ಭಯ


Team Udayavani, Aug 11, 2017, 3:42 PM IST

10gu-wadi1(a) copy.JPG

ವಾಡಿ: ಕತ್ತಲಾಗುತ್ತಿದ್ದಂತೆ ರೆಕ್ಕೆ ಬಿಚ್ಚಿ ಹಾರಾಡುವ ಸೊಳ್ಳೆಗಳ ಕಾಟಕ್ಕೆ ಸಿಮೆಂಟ್‌ ನಗರಿ ವಾಡಿ ಪಟ್ಟಣದ ಜನರು ಅಕ್ಷರಶಃ
ಹೌಹಾರಿದ್ದಾರೆ. ನೊಣಗಳು ಮುತ್ತಿಕ್ಕುವಂತೆ ಸೊಳ್ಳೆಗಳು ದೇಹದ ಮೇಲೆ ಸವಾರಿ ಮಾಡಿ ಜನರ ರಕ್ತ ಹೀರುತ್ತಿವೆ. ಪಟ್ಟಣದಾದ್ಯಂತ ನಿರ್ಮಿಸಲಾಗಿರುವ ಚರಂಡಿಗಳಲ್ಲಿ ನಿಂತ ನೀರು ಮುಂದಕ್ಕೆ ಹರಿಯದೆ ತುಂಬಿ ನಿಂತಿದ್ದೇ ಸೊಳ್ಳೆ ಕಾಟ ಹೆಚ್ಚಳಕ್ಕೆ ಕಾರಣವಾಗಿದೆ. ಸೊಳ್ಳೆ ಕಡಿತಕ್ಕೆ ತುತ್ತಾದ ನೂರಾರು ಜನರು ಜ್ವರದಿಂದ ಬಳಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೇಹವನ್ನು ಸುತ್ತು ವರೆದು ಕಚ್ಚಿ ತುರಿಕೆಗೆ ಕಾರಣವಾಗುವ ಚುರುಕು ಸೊಳ್ಳೆಗಳು ಒಂದೆಡೆಯಾದರೆ, ಮಲೇರಿಯಾ ಹಾಗೂ ಮಹಾಮಾರಿ ಡೆಂಘೀ ರೋಗಕ್ಕೆ ಕಾರಣವಾಗುವ ಈಡೀಸ್‌ ಎನ್ನುವ ಹೆಣ್ಣು ಸೊಳ್ಳೆಗಳು ಮತ್ತೂಂದೆಡೆಯಾಗಿವೆ.
ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಯ ಸುಮಾರು 700 ಜನರು ರಕ್ತ ಪರೀಕ್ಷೆಗೊಳಗಾಗಿದ್ದು, ನಾಲ್ವರಲ್ಲಿ ಮಲೇರಿಯಾ ಪತ್ತೆಯಾಗಿದೆ. ಸಮೀಪದ ಇಂಗಳಗಿ ಗ್ರಾಮದಲ್ಲಿ ಈಗಾಗಲೇ ನಾಲ್ವರಲ್ಲಿ ಜೀವಕಂಠಕ ಡೆಂಘೀ ಪತ್ತೆಯಾಗಿದೆ. ಸಾಂಪ್ರದಾಯಿಕ ಅಥಿತಿ ಎಂಬಂತೆ ರಾವೂರ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದಲ್ಲಿ ಈ ವರ್ಷ ಮತ್ತೆ
ಮಲೇರಿಯಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಯಿಂದ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಿದರೂ ಗ್ರಾಮದ ಅನೇಕ ಜನರು ಈಗಾಗಲೇ ಜ್ವರದಿಂದ ಬಳಲುತ್ತಿದ್ದಾರೆ. ವಾಡಿ ನಗರದಲ್ಲಿ ಮಲೇರಿಯಾ ಜತೆಗೆ ಚಿಕೂನ್‌ ಗುನ್ಯಾ
ಪ್ರಕರಣಗಳು ಕಾಣಿಸಿಕೊಂಡಿದ್ದು, ಕೆಲವರು ಮೊಣಕಾಲು ಬೇನೆಯಿಂದ ನಡೆಯಲಾಗದೆ ಹಾಸಿಗೆ ಹಿಡಿದು ಮಲಗಿದ್ದಾರೆ. ರೋಗವನ್ನು ಹತೋಟಿಗೆ ತರುವಲ್ಲಿ ಪುರಸಭೆ ಆಡಳಿತ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿವೆ. ಜನರ ಆಕ್ರೋಶದ ಮೇರೆಗೆ ಕೆಲ ವಾರ್ಡ್‌ಗಳಲ್ಲಿ ಫಾಗಿಂಗ್‌ ಮಾಡಿಸಿದ್ದಾರೆ. ಆದರೂ ಸೊಳ್ಳೆಗಳ ನಿಯಂತ್ರಣವಾಗಿಲ್ಲ. ಕೊಳೆಗಟ್ಟಿದ ನೀರು ಸ್ಥಳಾಂತರಗೊಂಡಿಲ್ಲ ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ ಮುಖಂಡ ರಾಜು ಒಡೆಯರಾಜ ಆರೋಪಿಸಿದ್ದಾರೆ ಬೆಂಗಳೂರಿನಿಂದ ನಗರಕ್ಕೆ
ವೈದ್ಯಕೀಯ ತಂಡ ಮನೆಯ ಸುತ್ತಮುತ್ತಲ ಪರಿಸರ ಕಲುಷಿತದಿಂದ ಕೂಡಿದ್ದರೆ ಸೊಳ್ಳೆಗಳ ಸಂತತಿ ಹೆಚ್ಚುತ್ತದೆ. ಬಹಳ ದಿನದ ವರೆಗೆ
ನೀರು ಸಂಗ್ರಹವಾಗಿದ್ದರೆ ಅಲ್ಲಿ ಈಡೀಸ್‌ ಎನ್ನುವ ಹೆಣ್ಣು ಸೊಳ್ಳೆಗಳು ಜನಿಸುತ್ತವೆ. ಇವು ಕಚ್ಚುವುದರಿಂದ ಡೆಂಘೀ ಮತ್ತು ಮಲೇರಿಯಾ
ಹರಡುತ್ತದೆ. ಈಗಾಗಲೇ ಬೆಂಗಳೂರಿನಿಂದ ವೈದ್ಯಕೀಯ ತಂಡ ವಾಡಿಗೆ ಆಗಮಿಸಿದ್ದು, ವಿವಿಧ ಬಡಾವಣೆಗಳಲ್ಲಿ ಲಾರ್ವಾ ಸರ್ವೇ
ಮಾಡಲಾಗುತ್ತಿದೆ. 

ಡಾ| ಜುನೈದ್‌ ಖಾನ್‌, ವೈದ್ಯಾಧಿ ಕಾರಿ, ಸರಕಾರಿ ಆಸ್ಪತ್ರೆ

ವಾರಕ್ಕೊಮ್ಮೆ ಬಡಾವಣೆಗಳಲ್ಲಿ ಫಾಗಿಂಗ್‌: ನೈರ್ಮಲ್ಯ ವ್ಯವಸ್ಥೆ ಕಾಪಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಬಹುತೇಕ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿಸಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಕೆಲ ಖಾಲಿ ನಿವೇಶನದಾರರಿಗೆ ನೋಟಿಸ್‌ ನೀಡಲಾಗಿದೆ. ಖಾಲಿ ನಿವೇಶನಗಳಲ್ಲಿ ನಿಂತ ನೀರನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಹಲವು ಖಾಲಿ ನಿವೇಶನದಾರರ ವಿಳಾಸ ಪತ್ತೆಯಾಗಿಲ್ಲ. ಸೊಳ್ಳೆ ಕಾಟ ನಿಯಂತ್ರಣಕ್ಕೆ ಪೌರ ಕಾರ್ಮಿಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಎರಡು ಹೊಸ
ಫಾಗಿಂಗ್‌ ಯಂತ್ರಗಳನ್ನು ಖರೀದಿಸಿದ್ದೇವೆ. ವಾರಕ್ಕೊಮ್ಮೆ ಎಲ್ಲ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿಸಲಾಗುವುದು.

ಶರಣಪ್ಪ ಮಡಿವಾಳ, ಹಿರಿಯ ಆರೋಗ್ಯ ನಿರೀಕ್ಷಕರು, ಪುರಸಭೆ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

All set for the Indian Cultural Festival

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.