ಕಲಬುರಗಿಯಲ್ಲಿ 35 ಜನರಿಗೆ ಡೆಂಘೀ!


Team Udayavani, Jun 25, 2017, 2:40 PM IST

gul2.jpg

ಕಲಬುರಗಿ: ಮತ್ತೆ ಜಿಲ್ಲೆಯಲ್ಲಿ ಕಾಡುವ ಡೆಂಘೀ ರೋಗ ನಿಧಾನವಾಗಿ ಹರಡಲಾರಂಭಿಸಿದೆ. 2017ರ ಜನವರಿಯಿಂದ ಜೂನ್‌ 22ರ ವರೆಗೆ ಒಟ್ಟು 35 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಮೂರ್‍ನಾಲ್ಕು ಚಿಕೂನ್‌ಗುನ್ಯಾ ರೋಗಗಳು ಪತ್ತೆಯಾಗಿದೆ. 

ಇದರೊಂದಿಗೆ ಮತ್ತೂಮ್ಮೆ ಡೆಂಘೀ ಭೂತ ಕಾಡಲಾರಂಭಿಸಿದೆ. ಅಚ್ಚರಿ ಎಂದರೆ ಈ ಬಾರಿ ನಗರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಭೂಪಾಲ ತೆಗನೂರು ಗ್ರಾಮದಲ್ಲಿ 2013-14ನೇ ಸಾಲನಲ್ಲಿ ಡೆಂಘೀಯಿಂದ ಇಡಿ ಊರು ಖಾಲಿಯಾಗಿತ್ತು.

ಒಂದೇ ಗ್ರಾಮದಲ್ಲಿ 19 ಜನರಿಗೆ ಸೋಂಕು ತಗುಲಿತ್ತು. ಐದಾರು ಜನ ಸಾವನ್ನಪ್ಪಿದ್ದರು. ಅಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಊರಿನ್ನೇ ಸ್ವಚ್ಚಗೊಳಿಸಿತ್ತು. ಆದಾಗ ಬಳಿಕ ಸ್ವಲ್ಪ ಡೆಂಘೀ ತಡೆಯುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ವಹಿಸಿದ್ದರು. ಅಲ್ಲದೆ, ಜಿಲ್ಲೆಯಲ್ಲಿ ಪ್ರಚಾರಾಂದೋಲನ ನಡೆದಿತ್ತು.

ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಫಾಗಿಂಗ್‌ ಯಂತ್ರಗಳನ್ನು ಕೂಡ ಖರೀದಿ ಮಾಡಿ ಕೊಡಲಾಗಿತ್ತು. ಆದರೆ, ಈಚೆಗೆ ಗ್ರಾಮ ಪಂಚಾಯಿತಿಯಲ್ಲಿ ಈ ಯಂತ್ರಗಳು ಕೆಲಸ ಮಾಡುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಬರುವ ಅನುದಾನವೂ ದುರ್ಬಳೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

204 ಜನರ ರಕ್ತ ಪರೀಕ್ಷೆ: ಜಿಲ್ಲೆಯಲ್ಲಿ ಡೆಂಘೀ ಸೋಂಕು ಪತ್ತೆಯಾಗಿರುವ ಪ್ರದೇಶ ಮತ್ತು ಊರುಗಳಲ್ಲಿನ ಒಟ್ಟು 204 ಜನರ ರಕ್ತದ ಮಾದರಿಯನ್ನು ಸಂಗ್ರಹ ಮಾಡಿ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಅತೀ ಹೆಚ್ಚು ಗುಲಬರ್ಗಾ ತಾಲೂಕು ಮತ್ತು ನಗರದ ಪ್ರದೇಶ ವ್ಯಾಪ್ತಿಯಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. 

ಮೇ ತಿಂಗಳಲ್ಲಿ 12, ಜೂನ್‌ 22ರವೆಗೆ ಅತಿ ಹೆಚ್ಚು ಅಂದರೆ 23 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಜೂನ್‌ ತಿಂಗಳಲ್ಲಿ ಮಳೆ ನೀರು ಸಂಗ್ರಹ ಹೆಚ್ಚಾಗುವುದರಿಂದ ಈಡೀಸ್‌ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಹೆಚ್ಚಾಗಿ ಬಾಲಕರು, ವೃದ್ಧರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಅಂಕಿ ಅಂಶಗಳು ಬಹಿರಂಗಗೊಳಿಸಿವೆ. 

ರೋಗದ ಭೀತಿ: ಮಳೆಗಾಲ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಘೀ ಹಾಗೂ ಮಲೇರಿಯಾ ಪ್ರಕರಣಗಳು ಭೀತಿ ಜನರಲ್ಲಿ ಶುರುವಾಗುತ್ತದೆ. ಈ ಹಿಂದೆ ಎರಡು ವರ್ಷಗಳ ಹಿಂದೆ ಡೆಂಘೀ ಹಲವು ಜೀವಗಳನ್ನು ನುಂಗಿತ್ತು. ಅಲ್ಲದೆ, ಮಲೇರಿಯಾದಿಂದಲೂ ಮಕ್ಕಳು ಬಲಿಯಾಗಿರುವ ಕಹಿ ಘಟನೆಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ. 

ಆದ್ದರಿಂದ ಮಳೆಗಾಲ ಶುರುವಾದರೆ ಜನರು ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಜನರು ಆರೋಗ್ಯ ಇಲಾಖೆಯೊಂದಿಗೆ ಸತತ ಸಂಪರ್ಕ ಸಾಧಿಸುತ್ತಾರೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಇರದೇ ಇರುವುದು ಜನರ ಭಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಗಮನಿಸಿ ವ್ಯವಸ್ಥೆ ಸರಿ ಮಾಡಬೇಕಿದೆ. 

* ಸೂರ್ಯಕಾಂತ ಎಂ. ಜಮಾದಾರ

ಟಾಪ್ ನ್ಯೂಸ್

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

vaibhavi shandilya

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

2-bng

Anekal: ನಗರದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ

1-munirathna

DNA Test: ಮುನಿರತ್ನಗೆ ಡಿಎನ್‌ಎ ಟೆಸ್ಟ್‌: ಎಸ್‌ಐಟಿ ನಿರ್ಧಾರ

Tirupati Laddu case:ಇದು ಕೋಟ್ಯಂತರ ಭಕ್ತರ ನಂಬಿಕೆ ವಿಷಯ- SIT ತನಿಖೆಗೆ ಸುಪ್ರೀಂ ಆದೇಶ

Tirupati Laddu case:ಇದು ಕೋಟ್ಯಂತರ ಭಕ್ತರ ನಂಬಿಕೆ ವಿಷಯ- SIT ತನಿಖೆಗೆ ಸುಪ್ರೀಂ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

TEACHER

Kalaburagi: 77 ಪರೀಕ್ಷೆ ಬರೆದ ಕನ್ನಡ ಶಿಕ್ಷಕನಿಂದ ವಿಶ್ವದಾಖಲೆ!

15-Chincholi

Chincholi: ಬಟ್ಟೆ ಒಗೆಯುವ ವೇಳೆ ‌ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ

Miracle: ಲಿಂಗದ ಮೇಲಿನ ಕಲ್ಲು‌ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು: ಕಡಣಿಯಲ್ಲೊಂದು ಅಚ್ಚರಿ

Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6-darshan

Darshan Bail: ಇಂದು ದರ್ಶನ್‌ ಜಾಮೀನು ಅರ್ಜಿ ವಿಚಾರಣೆ: ಕುತೂಹಲ

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

2(2)

Bantwala: ಹುಲಿ ಕುಟುಂಬದಲ್ಲಿ ಆಕೆ ಬ್ಲ್ಯಾಕ್‌ ಟೈಗರ್‌!

5-hasan

Hasana:ಅನಾರೋಗ್ಯ: 3 ದಿನಗಳಿಂದ ನಿಂತಲ್ಲೇ ನಿಂತಿದ್ದ ಕಾಡಾನೆ ಸಾವು

4-bng-rain

Bengaluru: ರಾಜಧಾನಿಯಲ್ಲಿ ತಿಂಗಳ ಬಳಿಕ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.