ದೇವಲ್ ಗಾಣಗಾಪುರ ನಕಲಿ ವೆಬ್ ಸೈಟ್ : ವಿಚಾರಣೆಗೆ ಹಾಜರಾಗಲು ಅರ್ಚಕರಿಗೆ ಮತ್ತೆ ನೋಟಿಸ್
Team Udayavani, Jul 8, 2022, 8:32 PM IST
ಕಲಬುರಗಿ: ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾಸ್ಥಳ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ ದೇವತ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿರುವ ದೇವಾಲಯದ ಐವರು ಅರ್ಚಕರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವಂಚನೆ ಸಂಬಂಧ ದೇವಾಲಯದ ಐವರ ವಿರುದ್ದ ಎಫ್ಐಆರ್ ದಾಖಲಾಗಿದ್ದರಿಂದ ಜಿಲ್ಲಾ ಸೈಬರ್ ಕ್ರೈಂ ( ಸಿಇಎನ್) ಠಾಣೆ ಪೊಲೀಸ ರು ಜುಲೈ 9ರಂದು ಬೆಳಗ್ಗೆ 10ಕ್ಕೆ ಸೆನ್ ಠಾಣೆ ಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಠಾಣಾಧಿಕಾರಿಗಳು ಮೂರನೇ ನೋಟಿಸ್ ಹೊರಡಿಸಿದ್ದಾರೆ.
ಈಗಾಗಲೇ ಮೊದಲನೇ ಹಾಗೂ ಎರಡನೇ ನೋಟೀಸ್ ನೀಡಲಾಗಿದ್ದರೂ ವಿಚಾರಣೆಗೆ ಗೈರು ಹಾಜರಾಗಿರುವುದರಿಂದ ಈಗ ಮೂರನೇ ಬಾರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನಕಲಿ ವೆಬ್ ಸೈಟ್ ರೂಪಿಸಿ ವಂಚನೆ ಸಂಬಂಧ ದೇವಲ್ ಗಾಣಗಾಪುರ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿ, ತದನಂತರ ಸಿಇಎನ್ ಠಾಣೆಗೆ ವರ್ಗವಾಗಿದೆ. ಮೊಕದ್ದಮೆಗೆ ಸಂಬಂಧಿಸಿದಂತೆ ಸಿಇಎನ್ ಪೊಲೀಸ್ ರು ದಾಖಲೆಗಳನ್ನು ಕಲೆ ಹಾಕುತ್ತಿದ್ದು, ಅರ್ಚಕರ ಅಭಿಪ್ರಾಯ ಹಾಗೂ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.