ರಟಕಲ್ ಮಠದ ಅಭಿವೃದ್ದಿಗೆ ಬದ್ದ : ಡಾ| ಅವಿನಾಶ್
Team Udayavani, Aug 30, 2022, 2:37 PM IST
ಕಲಬುರಗಿ: ಮುರುಘೇಂದ್ರ ಶಿವಯೋಗಿಗಳ ವಿರಕ್ತ ಮಠದ ಕುರಿತು ನನಗೆ ಅಪಾರ ಗೌರವ ಇದೆ. ನನ್ನ ಅಧಿಕಾರದ ಅವಧಿ ಮುಗಿಯುದರೊಳಗೆ ಮಠದ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ಮತ್ತು ಅನುದಾನವನ್ನು ಬಿಡುಗಡೆ ಮಾಡುವುದಾಗಿ ಚಿಂಚೋಳಿ ಶಾಸಕ ಡಾ| ಅವಿನಾಶ್ ಜಾಧವ್ ಭರವಸೆ ನೀಡಿದರು.
ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಮುರುಗೇಂದ್ರ ಶಿವಯೋಗಿಗಳ ವಿರಕ್ತ ಮಠ (ದೊಡ್ಡ ಮಠ)ದಲ್ಲಿ ಶ್ರಾವಣ ಮಾಸ ಅಂಗವಾಗಿ ಶ್ರೀಮಠದ ಎಂಟನೇ ಪೀಠಾಧಿಪತಿ ಸಿದ್ದರಾಮ ಮಹಾಸ್ವಾಮಿಗಳ ಮೌನ ಅನುಷ್ಠಾನ ಮಹಾಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಬಿಜೆಪಿ ಸರಕಾರ ಮಠ, ಮಂದಿರಗಳ ಬೆಳವಣಿಗೆಗೆ ವಿಶೇಷ ಆಸಕ್ತಿಯನ್ನು ವಹಿಸುತ್ತದೆ. ಆದ್ದರಿಂದ ಮಠದ ಕೌಂಪೌಂಡ್ ಗೋಡೆ ನಿರ್ಮಾಣ, ಅಲ್ಲದೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಸಿದ್ದನಿದ್ದೇನೆ ಎಂದ ಅವರು, ಮಠಗಳು ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವುದರಿಂದ ಜನರು ಹೆಚ್ಚು ಭಕ್ತಿ ಇಟ್ಟುಕೊಂಡಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಲೋಕಲ್ಯಾಣಾರ್ಥ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಐದು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಮೌನ ಅನುಷ್ಠಾನ ಮಾಡಿದೆ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಹ ಧರ್ಮ ಮತ್ತು ಅಧ್ಯಾತ್ಮದಿಂದ ಜೀವನ ಶುದ್ಧಿ ಆಗುತ್ತದೆ. ಸಂಸ್ಕಾರ, ವಿಶ್ವಶಾಂತಿ, ನೆಮ್ಮದಿ ತಂದುಕೊಡಲಿದೆ ಎಂದು ಪ್ರತಿಪಾದಿಸಿದರು.
ಭರತನೂರು ಶ್ರೀಮಠದ ಚಿಕ್ಕ ಗುರುನಂಜೇಶ್ವರ ಹಾಗೂ ರಟಕಲ್ ದ ನಡುವಿನ ಮಠದ ರೇವಣಸಿದ್ದ ಶ್ರೀಗಳು ಹಾಗೂ ನಾಗೂರು ಶ್ರೀಮಠದ ಅಲ್ಲಮಪ್ರಭು , ಚಂದನಕೇರಾ ಹಾಗೂ ಡೊಣ್ಣುರು ಶ್ರೀಗಳ ನೇತೃತ್ವದಲ್ಲಿ ಮಹಾಮಂಗಲ ಕಾರ್ಯ ನೆರವೇರಿತು.
ಇದೇ ವೇಳಗೆ ಶ್ರೀಮಠದಿಂದ ಪತ್ರಕರ್ತರಾದ ಭೀಮಾಶಂಕರ ಫಿರೋಜಾಬಾದ, ಸಂತೋಷ ನಾಡಗೇರಿ, ಸಂಚಾರಿ ಪೇದೆ ಅಂಬಾರಾಯ ಪೂಜಾರಿ ಮತ್ತಿತರರನ್ನು ಶ್ರೀಗಳು ಸತ್ಕರಿಸಿದರು. ಶ್ರೀಮಠದ ಕಾರ್ಯದರ್ಶಿ ಮುರುಗಯ್ಯ ಪುರಾಣಿಕ, ಹೈಕೋರ್ಟ್ ನಿವೃತ್ತ ನ್ಯಾಯಾ ಧೀಶ ಚನ್ನಮಲ್ಲಪ್ಪ ಬೇನಕನಳ್ಳಿ, ಮಲ್ಲಣ್ಣ.ಎ.ಭೈರಪ್ಪ, ಬಸವರಾಜ ಚೋಕಾ, ಸಿದ್ದು ಚಟ್ಟನಳ್ಳಿ ಮುಕರಂಬಾ, ಆರ್.ಬಿ. ಬೀಜನಳ್ಳಿ, ಮಹಾದೇವಪ್ಪ ಭೀಮಳ್ಳಿ, ಶರಣು ಸೀಗಿ, ಸಂತೋಷ ಹಂದ್ರೋಳಿ, ಮಲ್ಲು ಮುಚ್ಚಟ್ಟಿ, ರಾಘವೇಂದ್ರರಾವ್ ಭೈರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.