ಅಭಿವೃದ್ಧಿ ಕುಂಠಿತ: ಅಧಿಕಾರಿ ತರಾಟೆ
Team Udayavani, Apr 22, 2017, 3:56 PM IST
ಚಿಂಚೋಳಿ: ಅನೇಕ ಯೋಜನೆಗಳ ಅಡಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮಕ್ಕೆ ಅಭಿವೃದ್ಧಿ ಕಾಮಗಾರಿಗಳನ್ನು ನೀಡಲಾಗಿದ್ದರೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ನಿಗಮದ ಜೆಇ ಮೂಸಾ ಖಾದ್ರಿ ಅವರನ್ನು ಸಾಮಾನ್ಯ ಸಭೆಯಲ್ಲಿ ತರಾಟೆ ತೆಗೆದುಕೊಳ್ಳಲಾಯಿತು.
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 5ನೇ ಸಾಮಾನ್ಯ ಸಭೆಯಲ್ಲಿ ತಾಪಂ ಅಧಿಧಿಕಾರಿ ಅನೀಲಕುಮಾರ ರಾಠೊಡ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಮಾತನಾಡಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಅಭಿವೃದ್ಧಿ ಕೆಲಸಗಳಿಗಾಗಿ ಕೋಟ್ಯಂತರ ರೂ. ನೀಡಲಾಗಿದೆ.
ಆದರೆ ಕೆಲಸಗಳು ಚುರುಕಿನಿಂದ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 100ಕ್ಕೂ ಹೆಚ್ಚು ಕೆಲಸಗಳು ಪ್ರಗತಿಯಿಲ್ಲದೆ ಕುಂಠಿತಗೊಂಡಿವೆ. ಎಇಇ ಕಳೆದ ಆರು ತಿಂಗಳಿಂದ ಸಾಮಾನ್ಯ ಸಭೆಗೆ ಬರುತ್ತಿಲ್ಲ. ನೀವು ಇಲಾಖೆ ಜೆಇ ಅಲ್ಲ ಮೇಸ್ರಿಯಾಗಿದ್ದಿರಿ. ನಿಮಗೆ ಕೆಲಸಗಳ ಮಾಹಿತಿ ಸರಿಯಾಗಿಲ್ಲ.
ಸಭೆಯಿಂದ ಹೊರಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಕೈಗಾರಿಕಾ ವಿಸ್ತೀಣಾಧಿಧಿಕಾರಿ ನಳಿನಿ ಅವರು ಇಲಾಖೆ ಪ್ರಗತಿ ಬಗ್ಗೆ ಹೇಳುವ ಸಂದರ್ಭದಲ್ಲಿ ಕೋಡ್ಲಿ ತಾಪಂ ಸದಸ್ಯ ಗೌರಮ್ಮ ಚೆಂಗಟಿ ಮಾತನಾಡಿ, ನಾವು ನಿಮ್ಮ ಭಾಷಣ ಕೇಳಲಿಕ್ಕೆ ಬಂದಿಲ್ಲ. ಸರಕಾರದ ಯೋಜನೆಗಳ ಪ್ರಗತಿ ಎಷ್ಟು ಮಾಡಿದ್ದೀರಿ ಎಂಬುದನ್ನು ತೋರಿಸಿ ಎಂದರು.
ಇದಕ್ಕೆ ರಾಮರಾವ್ ರಾಠೊಡ, ಪ್ರೇಮಸಿಂಗ್ ಜಾಧವ್ ಧ್ವನಿಗೂಡಿಸಿದರು. ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ ಜನರು ಕುಡಿಯುವ ನೀರಿಗಾಗಿ ತೊಂದರೆ ಪಡಬೇಕಾಗಿದೆ. ಬಹುಗ್ರಾಮ ಯೋಜನೆ ಇನ್ನು ಪೂರ್ಣಗೊಂಡಿಲ್ಲ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ.
ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ ಹುಸೇನ ನಾಯಕೋಡಿ ಎಇ ಕಲಿಮೋದ್ದೀನ ಅವರಿಗೆ ಸೂಚಿಸಿದರು. ಪಶು ಇಲಾಖೆ ವೈದ್ಯಾಧಿಧಿಕಾರಿ ಡಾ| ಧನರಾಜ ಬೊಮ್ಮ ಮಾತನಾಡಿ, ದನಕರುಗಳ ಮೇವಿಗಾಗಿ 1600 ಹುಲ್ಲಿನ ಪ್ಯಾಕೇಟ್ ಮತ್ತು ಮೆಕ್ಕೆ ಜೋಳ 800 ಪ್ಯಾಕೇಟ್ ಬಂದಿವೆ.
ರೈತರಿಂದ ಪಹಣಿ ಮತ್ತು ಆಧಾರ ಸಂಖ್ಯೆ ಪಡೆದುಕೊಂಡು ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಸಾಮಾಜಿಕ ಅರಣ್ಯಾಧಿಧಿಕಾರಿ ಸಂಜೀವಕುಮಾರ ಚವ್ಹಾಣ ಮಾತನಾಡಿ, 2016-17ನೇ ಸಾಲಿನಲ್ಲಿ 14,189 ಸಸಿಗಳನ್ನು ರಸ್ತೆ ಬದಿಯಲ್ಲಿ ಹಚ್ಚಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 28 ಸಾವಿರ ಸಸಿಗಳನ್ನು ನೆಡಲಾಗಿದೆ.
ತಾಜಲಾಪುರ, ಕೊಳ್ಳುರ ಗ್ರಾಮದ ಬಳಿ ನರ್ಸರಿಯಲ್ಲಿ ಒಂದು ಲಕ್ಷ ಸಸಿ ಬೆಳೆಸಲಾಗುತ್ತಿದೆ ಎಂದರು. ತಾಲೂಕಿನ ಐನಾಪುರ, ಚಿಮ್ಮನಚೋಡ, ಗಡಿಲಿಂಗದಳ್ಳಿ, ಹೇಮಲಾ ನಾಯಕ ತಾಂಡಾಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಗಾಳಿ ರಭಸವಾಗಿ ಬೀಸಿದಾಗ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಹತ್ತಿ, ಹುಲ್ಲಿನ ಬಣಮೆಗಳು ಸುಟ್ಟಿವೆ.
ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಐನಾಪುರ ತಾಪಂ ಸದಸ್ಯ ಪ್ರೇಮಸಿಂಗ ಜಾಧವ್ ಒತ್ತಾಯಿಸಿದರು. ಬಿಇಒ ಜರ್ನಾಧನರೆಡ್ಡಿ ಮಾಲಿಪಾಟೀಲ ಮಾತನಾಡಿ, ತಾಲೂಕಿನಲ್ಲಿ ಬೇಸಿಗೆ ಸಂಭ್ರಮ ಯೋಜನೆ ಅಡಿಯಲ್ಲಿ 57 ಹಿರಿಯ ಪ್ರಾಥಮಿಕ ಶಾಲೆಗಳು ಆಯ್ಕೆಗೊಂಡಿವೆ ಎಂದರು.
ಪಿಆರ್‌ಇ ಎಇಇ ಅಶೋಕ ತಳವಾಡೆ, ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಂದ್ರಕುಮಾರ, ಸಿಡಿಪಿಒ ಜಗನ್ನಾಥ ಗಾದಾ, ಜೆಸ್ಕಾಂ ಸಿಂಧೆ, ಮೀನುಗಾರಿಕೆ ಸಹಾಯಕ ನಿರ್ದೇಶಕ ಚಿತಂಬರರಾವ್, ಸಮಾಜ ಕಲ್ಯಾಣ ಇಲಾಖೆ ಪ್ರಭುಲಿಂಗ ತಮ್ಮ ಇಲಾಖೆ ಪ್ರಗತಿ ವಿವರಿಸಿದರು.
ತಾಪಂ ಸದಸ್ಯರಾದ ಹಣಮಂತರಾವ ರಾಜಗಿರಿ, ಚಿರಂಜೀವಿ ಶಿವರಾಮಪುರ, ಬಸವಣ್ಣಪ್ಪ ಕುಡಹಳ್ಳಿ, ಜಗನ್ನಾಥ ಇದಲಾಯಿ, ಉಮಣಿಬಾಯಿ, ಬಲರಾಮ ನಾಯಕ ಭಾಗವಹಿಸಿದ್ದರು. ತಾಪಂ ಇಒ ಅನೀಲಕುಮಾರ ರಾಠೊಡ ಸ್ವಾಗತಿಸಿದರು. ರಾಜೂ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.