ಇಷ್ಟಪಟ್ಟು ಖರೀದಿಸಿದ ಮನೆಯಲ್ಲಿ ಕಷ್ಟ ಕೋಟಲೆ


Team Udayavani, Jan 11, 2018, 10:09 AM IST

gulbarga-1.jpg

ಕಲಬುರಗಿ: ಇಷ್ಟಪಟ್ಟು ಸಾಲ ಸೋಲ ಮಾಡಿಕೊಂಡು ಖರೀದಿ ಮಾಡಿರುವ ಮನೆಯಲ್ಲಿ ಕಷ್ಟ ಸಹಿಸಿಕೊಂಡು ಇರಲಾರದ ಪರಿಸ್ಥಿತಿ ಹೌಸಿಂಗ್‌ಬೋರ್ಡ್‌ ಮನೆ ಮಾಲೀಕರಿಗೆ ಬಂದೊದಗಿದೆ. ಇಂತಹದೊಂದು ಕಷ್ಟವನ್ನು ನಗರದ ಕೋಳನೂರು-ಕುಸನೂರುಗೆ ಹೊಂದಿ ಕೊಂಡಿರುವ ಕರ್ನಾಟಕ ಹೌಸಿಂಗ್‌ ಬೋರ್ಡ್‌ ಕಾಲೋನಿ ನಿವಾಸಿಗಳು
ಅನುಭವಿಸುತ್ತಿದ್ದಾರೆ.

140ಕ್ಕೂ ಹೆಚ್ಚು ಮನೆಗಳಿರುವ ಈ ಕಾಲೋನಿಯಲ್ಲಿ ಸದ್ಯವಾಸವಿರೋದು ಬೆರಳೆಣಿಕೆಯಷ್ಟು ಕುಟುಂಬಗಳು. ಎಲ್‌
ಐಜಿ 13.50 ಲಕ್ಷ ರೂ., ಎಂಐಜಿ 18.50 ರೂ. ಮತ್ತು ಹೆಚ್‌ಐಜಿ 23-24 ಲಕ್ಷ ರೂ. ನಿಗದಿ ಮಾಡಲಾಗಿದೆ. ಇಷ್ಟು ಹಣ ಕೊಟ್ಟು ಖರೀದಿಸಿದರೂ ಅಲ್ಲಿ ಹೋಗಿ ಇರಲು ಆಗುತ್ತಿಲ್ಲ. ಈ ಕಡೆ ಇರುವ ಮನೆಗೆ ಬಾಡಿಗೆಯನ್ನು ಕಟ್ಟಲೂ ಆಗುತ್ತಿಲ್ಲ ಎನ್ನುವುದು ಕೆಲವು ಸರಕಾರಿ ನೌಕರರ ಅಳಲು. ಇತ್ತ ಇಎಂಐ ಕಟ್ಟಬೇಕು. ಇನ್ನೊಂದು ಕಡೆ ಮನೆ ಬಾಡಿಗೆಯನ್ನು ಕಟ್ಟಬೇಕು. ಇದು ಹೌಸಿಂಗ್‌ ಬೋರ್ಡ್‌ ಎನ್ನುವ ಸರಕಾರಿ ಸಂಸ್ಥೆ ಸೃಷ್ಟಿಸಿರುವ ಇಕ್ಕಟ್ಟಿನ ಪರಿಸ್ಥಿತಿ.

ಸರಿಯಾದ ರಸ್ತೆ ಇಲ್ಲ: ಅಚ್ಚರಿ ಎಂದರೆ ಮೂಲಭೂತ ಸೌಕರ್ಯಗಳಿಗೆ ಹೆಸರಾಗಿರುವ ಹೌಸಿಂಗ್‌ ಬೋರ್ಡ್‌ ಕೋಳನೂರು-ಕುಸನೂರು ಪ್ರದೇಶದಲ್ಲಿ ಗುಡ್ಡದ ಮೇಲೆ 140 ಮನೆಗಳನ್ನು ನಿರ್ಮಿಸಿದೆ. ಎಲ್‌ಐಜಿ, ಎಂಐಜಿ ಮತ್ತು ಹೆಚ್‌ಐಜಿ ಮೂರು ಮಾದರಿಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಮೂರ್‍ನಾಲ್ಕು ಕಡೆಗಳಿಂದ ಕಾಲೋನಿಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.
 
ಆದರೆ, ಈ ಹೌಸಿಂಗ್‌ ಬೋರ್ಡ್‌ ಕಾಲೋನಿಗೆ ಗುಲಬರ್ಗಾ ವಿವಿ ಹಿಂಬಾಗದ ಮತ್ತು ಕುಸುನೂರು ಗ್ರಾಮದಿಂದ ಹೋಗುವ ಒಂದೇ ಒಂದು ರಸ್ತೆ ಇದೆ. ಅದು ತುಂಬಾ ಕಿರಿದಾಗಿದೆ. ಅಲ್ಲದೆ, ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಜಮೀನು ಮಾಲೀಕರಿಗೂ ಹಾಗೂ ಹೌಸಿಂಗ್‌ ಬೋರ್ಡಿನ ಅಧಿಕಾರಿಗಳ ಮಧ್ಯೆ ಆಗಿರುವ ಒಪ್ಪಂದದಲ್ಲಿ ಏರುಪೇರಾಗಿ ಈ ರಸ್ತೆ ಸಮಸ್ಯೆ ಉದ್ಭವಿಸಿದೆ ಎಂದು ಕಾಲೋನಿ ನಿವಾಸಿಗಳು ದೂರಿದ್ದಾರೆ. 
ರಸ್ತೆಯನ್ನು ಸರಿಯಾಗಿ ನಿರ್ಮಿಸಿಲ್ಲ. ಟಾರ್‌ ನ್ನು ಹಾಕಿಸಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ರಾತ್ರಿ ಇರಲಿ ಹಗಲು ಹೊತ್ತಿನಲ್ಲಿಯೂ ಮನೆಗಳಿಗೆ ಹೋಗಿ ಮುಟ್ಟುವುದು ಅಸಾಧ್ಯ. ಇಷ್ಟು ಪರಿಸ್ಥಿತಿ ಕೆಟ್ಟಿದ್ದರೂ ಹೌಸಿಂಗ್‌ ಬೋರ್ಡ್‌ ಮಾತ್ರ ಮನೆಗಳನ್ನು ಮಾರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸಾಲದ್ದಕ್ಕೆ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.

ಮನೆ ಕಟ್ಟಲು ಮತ್ತು ಮಾರಲು ಇರುವ ಆಸಕ್ತಿಯನ್ನು ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹೌಸಿಂಗ್‌ ಬೋರ್ಡು ಆಸಕ್ತಿ ತೋರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ರಸ್ತೆ ಮತ್ತು ಇತರೆ ಮೂಲಭೂತ ಸೌಕರ್ಯ ಒದಗಿಸಬೇಕು ಎನ್ನುವುದು ನಿವಾಸಿಗಳ ಮನವಿ.

ಕಳ್ಳರ ಕಾಟವೂ ಇದೆ
ನು ಮಾಡೋದು, ಹೌಸಿಂಗ್‌ ಬೋರ್ಡ್‌ನವರು ಮನೆ ಸರಿಯಾಗಿ ಕಟ್ಟದೇ ಇದ್ದರೂ ಮೂಲಭೂತ ಸೌಕರ್ಯ ಮತ್ತು ಸಂಪರ್ಕಕ್ಕೆ ತೊಂದರೆ ಇರೋದಿಲ್ಲ ಎನ್ನುವ ಕಾರಣಕ್ಕೆ ಸಾಲ ಮಾಡಿ ಮನೆ ಖರೀದಿ ಮಾಡಿದ್ದೆ. ಆದರೆ, ಐದು ವರ್ಷಗಳಿಂದ ರಾತ್ರಿ ಸರಿಯಾಗಿ ವಿದ್ಯುತ್‌ ಇರೋದಿಲ್ಲ.. ಓವರ್‌ಹೆಡ್‌ ಟ್ಯಾಂಕ್‌ ಇದ್ದರೂ ಸಮಪರ್ಕವಾಗಿ ನೀರಿಲ್ಲ. 140 ಮನೆಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಇರೋದ್ರಿಂದ ಕಳ್ಳರ ಕಾಟವೂ ಇದೆ. ಇದನ್ನು ತಡೆಯಲು ಸಾಧ್ಯವಾಗಿಲ್ಲ. ಈ ಕಷ್ಟದಿಂದ ನಮ್ಮನ್ನು ಯಾರು ಪಾರು ಮಾಡುತ್ತಾರೆ. 
ಅಶೋಕ ಚವ್ಹಾಣ, ಕಾಲೋನಿ ನಿವಾಸಿ 

ಎಲ್ಲವೂ ಸರಿಯಾಗಿದೆ
ಏನಿಲ್ಲ..ನೋಡಿ ದೊಡ್ಡ ಯೋಜನೆಯಾಗಿದೆ. ಸ್ವಲ್ಪ ಸಣ್ಣ ಪುಟ್ಟ ತೊಂದರೆ ಇತ್ತು. ಎಲ್ಲವನ್ನು ಬಗೆಹರಿಸಲಾಗಿದೆ. ಸಂಪರ್ಕ ರಸ್ತೆ ಇದೆ. ಎಲ್ಲ 140 ಮನೆಗಳು ಮಾರಾಟವಾಗಿವೆ. ರಸ್ತೆ ಸಂಪರ್ಕ ಇರದೆ ಹೇಗೆ ಮಾರಾಟವಾಗುತ್ತವೆ. ಕೆಲವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ರಸ್ತೆ ತೊಂದರೆ ಇದ್ದದ್ದು ನಿಜ, ಅದನ್ನು ಬಗೆ ಹರಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಹೊಸ ರಿಂಗ್‌ ರಸ್ತೆ ನಮ್ಮ ಯೋಜನಾ ಪ್ರದೇಶದಲ್ಲಿಯೇ ಹಾಯ್ದು ಹೋಗಿದೆ. ಅದು ಕೂಡ ಆಗುತ್ತದೆ ಎಂದು ಸುಮ್ಮನಿದ್ದೇವೆ. ಜನರಿಗೆ ತೊಂದರೆ ಇದ್ದರೆ ಬಗೆಹರಿಸುತ್ತೇವೆ.
ಪಾಶಾ, ಇಂಜಿನಿಯರ್‌, ಹೌಸಿಂಗ್‌ ಬೋರ್ಡ್‌ ಕಲಬುರಗಿ

„ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.