ದಿಗ್ಗಾಂವ ಶಂಭುಲಿಂಗೇಶ್ವರ ಜಾತ್ರೆ ಇಂದಿನಿಂದ
Team Udayavani, Apr 21, 2017, 3:24 PM IST
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ.21ರಂದು ಮಹಾ ರಥೋತ್ಸವ ನಡೆಯಲಿದೆ ಎಂದು ಶಂಭುಲಿಂಗೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.
ಏ.21ರಂದು ಸಂಜೆ 4:00ಕ್ಕೆ ಮಾಲಿಗೌಡರ ಮನೆಯಿಂದ ಕುಂಭಮೇಳ ಹಾಗೂ ಪೊಲೀಸ್ ಗೌಡರ ಮನೆಯಿಂದ ತೇರಿನ ಕಳಸ ಮತ್ತು ಅಣ್ಣೆಪ್ಪಗೌಡರ ಮನೆಯಿಂದ ಮಾಯೆಮರ್ತಪ ದಿವಟಿಗೆ, ಪುರವಂತರ ಆಟದೊಂದಿಗೆ ಸಕಲ ಮಂಗಲ ವಾದ್ಯಗಳೊಂದಿಗೆ ದೇವಾಲಯಕ್ಕೆ ತಲುಪುವುದು.
ಸಂಜೆ 6:00ಕ್ಕೆ ಮಹಾ ರಥೋತ್ಸವ ನಡೆಯಲಿದೆ. ರಾತ್ರಿ 8:00ಕ್ಕೆಪಂಚಗೃಹ ಹಿರೇಮಠದ ಶ್ರೀ ಸಿದ್ದವೀರ ಶಿವಾಚಾರ್ಯರು ಮತ್ತು ಕಂಚಗಾರಹಳ್ಳ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ ಅವರಿಂದ ಆಶೀವರ್ಚನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9:30ಕ್ಕೆ ಗೀಗೀ ಪದ ಹಾಡುಗಾರಿಕೆ ಕಾರ್ಯಕ್ರಮ, ಏ. 22ರಂದು ಬೆಳಗ್ಗೆ 8:00ರಿಂದ 10:00ರ ವರೆಗೆ ಮತ್ತು ಸಂಜೆ 4:00ರಿಂದ 6:00ರ ವರೆಗೆ ಕುಸ್ತಿ ನಡೆಯಲಿದೆ. ಪ್ರತಿದಿನ ರಾತ್ರಿ 10:00ಕ್ಕೆ ನಾ ಸಾಕಿದ ಗಿಣಿ ಸಾಮಾಜಿಕ ನಾಟಕ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇತಿಹಾಸ: ತಾಲೂಕಿನ ದಿಗ್ಗಾಂವದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಪ್ರತಿರೂಪವಾಗಿದೆ. ದಿಗ್ಗಾಂವ ಗ್ರಾಮದ ಮೂಲ ಹೆಸರು ದಿಗ್ಗಾವಿ. ಕಲ್ಯಾಣ ಚಾಲುಕ್ಯರ ಕಾಲದಿಂದ 14 ಗ್ರಾಮಗಳ ಮಧ್ಯದಲ್ಲಿರುವ ದಿಗ್ಗಾವಿ ಗ್ರಾಮದಲ್ಲಿ 360 ಲಿಂಗಗಳು, 360 ಬಾವಿಗಳು ಹಾಗೂ 360 ಚಾವುಲಿ ಭೂಮಿ ಇವೆ.
ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಅತ್ಯಂತ ವೈಭವದ ಗೋಪುರ ನಿರ್ಮಿಸಲಾಗಿದೆ. ಇಲ್ಲಿ ಉದ್ಬವ ಲಿಂಗವಾಗಿ ಹೊಂದಿರುವ ಶಂಭುಲಿಂಗೇಶ್ವರ ದೇವಸ್ಥಾನ ಪ್ರಸಿದ್ಧ ಪಡೆದಿದೆ. ಪೂಜೆ ಬಾವಿ, ಸ್ನಾನದ ಬಾವಿ, ತೀರ್ಥದ ಬಾವಿ, 60 ಲಿಂಗದ ಪರುಷ ಸ್ನಾನದ ಬಾವಿ, ಹೂವಿನ ಬಾವಿ, ಗಂಗಾ ಸ್ಥಳದ ಬಾವಿ, ಮನುಕುಲದ ಷಡುಣಗಳ ಶುದ್ಧಿಕರಣದ ಬಾವಿಗಳಿವೆ.
ಪೂರ್ವಾಭಿಮುಖವಾಗಿರುವ ಗುಡಿ ಆವರಣದಲ್ಲಿ 12 ಜ್ಯೋತಿ ರ್ಲಿಂಗಗಳಿವೆ. ಮಲ್ಲಿಕಾರ್ಜುನ ದೇವಾಲಯ, ಶ್ರೀ ವೀರಭದ್ರೇಶ್ವರ ದೇವಾಲಯ, ಭ್ರಮರಾಂಭೆ, ಕಾಳಿಕಾ ದೇವಾಲಯವಿದೆ. ಪಂಚಮುಖೀ ಪರಮೇಶ್ವರ ತ್ರಿಮೂರ್ತಿ ಲಿಂಗಗಳಿವೆ. ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕೆ ಹೊಂದಿರುವ 360 ಲಿಂಗಗಳು ಇರುವುದರಿಂದಲೇ ಇದು ಸಾಕ್ಷಾತ್ ಶ್ರೀಶೈಲ ಚಿಕ್ಕ ಕ್ಷೇತ್ರ ಎಂದು ಹೇಳಲಾಗುತ್ತಿದೆ.
ಇಲ್ಲಿ ಅನೇಕ ಶಾಸನಗಳನ್ನು ನೋಡಬಹುದಾಗಿದೆ. ನೂರಾರು ವರ್ಷಗಳ ಹಿಂದಿನ ರಥದ ಕಲ್ಲಿನ ಚಕ್ರಗಳು ಶಕ್ತಿಯುತವಾಗಿವೆ. ಹಿಂದೆ ರಥಕ್ಕೆ ಇದ್ದ ಬಿದರಿನ ತಡಕಿ ತೆಗೆದು 1985ರಲ್ಲಿ ಕಬ್ಬಿಣದ ತಡಕಿ ತಯಾರಿಸಿ ಅಲಂಕೃತಗೊಳಿಸಲಾಗಿದೆ. ಗ್ರಾಮಸ್ಥರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡಿದ್ದು, ದೇವಸ್ಥಾನ ಕಟ್ಟಡಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.