ಮಹಿಳಾ ರೋಗಿ ಸಾವಿನ ಕಾರಣ ಬಹಿರಂಗಪಡಿಸಿ
Team Udayavani, Jun 18, 2021, 7:32 PM IST
ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಚಾರ ಯತ್ನಕ್ಕೊಳಗಾದ ಕೊರೊನಾ ಸೋಂಕಿತ ಮಹಿಳಾ ರೋಗಿಯ ಸಾವಿನ ಕಾರಣವನ್ನು ಜನತೆ ಎದುರು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ನಗರದ ಜಿಮ್ಸ್ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಆಸ್ಪತ್ರೆಯಲ್ಲೇ ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿ ಮೃತಪಟ್ಟಿದ್ದಾರೆ. ಇದು ಭದ್ರತೆ ಲೋಪ ಆಗಿರುವುದನ್ನು ನಿರೂಪಿಸುತ್ತದೆ. ಅತ್ಯಾಚಾರ ಯತ್ನದ ಸಂಬಂಧ ಯಾವ ಸಿಬ್ಬಂದಿ ಮೇಲೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಅತ್ಯಾಚಾರದ ಪ್ರಯತ್ನದ ಪ್ರಕರಣವನ್ನು ಆಡಳಿತ ಮಂಡಳಿಯವರು ಎಳ್ಳಷ್ಟೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಂಡುಬರುತ್ತಿದೆ.
ಇಷ್ಟೆಲ್ಲ ನಡೆದ ಮೇಲೆಯೂ ಜಿಲ್ಲಾಡಳಿತ ಮೌನ ವಹಿಸಿದೆ. ಹೀಗಾಗಿ ಮಹಿಳೆ ಸಾವು ಉಂಟಾಗಿರುವ ಸಾಧ್ಯತೆ ಇದೆ. ಸರ್ಕಾರ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಅತ್ಯಾಚಾರ ಯತ್ನದ ಬಳಿಕ ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ಮತ್ತು ಆಪ್ತಸಮಾಲೋಚನೆ ನಡೆಸಲಾಗಿದೆಯೆ? ಅತ್ಯಾಚಾರ ಪ್ರಯತ್ನದ ದಿನದಂದು ಕೆಲಸಕ್ಕೆ ಹಾಜರಿದ್ದ ವೈದ್ಯರು ಏನು ಮಾಡುತ್ತಿದ್ದರು? ಈ ಘಟನೆ ಬಗ್ಗೆ ಸಂಸದರು, ಶಾಸಕರು ಯಾಕೆ ಚಕಾರ ಎತ್ತುತ್ತಿಲ್ಲ? ಹೀಗಾಗಿ ಅನೇಕ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.
ಈ ಕುರಿತು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿತರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಮುಖರಾದ ಕೆ. ನೀಲಾ, ಅಮೀನಾ ಬೇಗಂ, ಚಂದಮ್ಮ ಗೋಳಾ, ಶರಣಬಸಪ್ಪ ಮಮಶೆಟ್ಟಿ, ಶಹನಾಜ್ ಅಖ್ತರ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.