
ಆಸ್ಪತ್ರೆಗೆ 50ಲಕ್ಷ ಮೌಲ್ಯದ ಉಪಕರಣ ವಿತರಣೆ
Team Udayavani, Oct 22, 2021, 10:46 AM IST

ಜೇವರ್ಗಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾಟೆಕ್ ಕಮ್ಯುನಿಟಿ ವೆಲ್‌ಫೇರ್ ಫೌಂಡೇಶನ್ ವತಿಯಿಂದ 50 ಲಕ್ಷ ರೂ. ಮೌಲ್ಯದ ಕೋವಿಡ್-19 ಸೋಂಕಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ನೀಡಿರುವುದಕ್ಕೆ ಶಾಸಕ ಡಾ| ಅಜಯಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಅಲ್ಟ್ರಾಟೆಕ್ ಕಮ್ಯುನಿಟಿ ವೆಲ್‌ಫೇರ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ವೈದ್ಯಕೀಯ ಉಪಕರಣಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವನವನ್ನು ಪಣಕ್ಕಿಟ್ಟು ಶ್ರಮಿಸಿದ್ದರ ಫಲವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, 2ನೇ ಅಲೆ ಹೇಗೆ ನಿಯಂತ್ರಿಸಲಾಯಿತೋ ಅದೇ ರೀತಿ 3ನೇ ಅಲೆ ತಡೆಗಟ್ಟಲು ಶ್ರಮಿಸಬೇಕು. ಜೇವರ್ಗಿ-ಯಡ್ರಾಮಿ ಅವಳಿ ತಾಲೂಕಿನಲ್ಲಿ ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮವಹಿಸಿದರ ಪರಿಣಾಮ 2 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಲಸಿಕಾಕರಣ ಈ ಕ್ಷೇತ್ರದಲ್ಲಿ ನಡೆದಿದೆ. ಆದರೂ ಸೋಂಕಿನ ಬಗ್ಗೆ ಜನ ನಿರ್ಲಕ್ಷ್ಯತನ ತೋರಬಾರದು. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರುವುದರ ಜತೆಗೆ ನಮ್ಮ ಮನೆ ಸುತ್ತ ಸ್ವತ್ಛತೆ ಕಾಪಾಡುವುದರ ಮೂಲಕ ಕೊರೊನಾ ಸೋಂಕು ತಡೆಗಟ್ಟಬೇಕು ಎಂದರು.
ಇದನ್ನೂ ಓದಿ: ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು
ಅಲ್ಟ್ರಾಟೆಕ್ ಫೌಂಡೇಶನ್ ವತಿಯಿಂದ ಜೇವರ್ಗಿ ಆಸ್ಪತ್ರೆಗೆ ಅಗತ್ಯವಿರುವ 2 ವೆಂಟಿಲೇಟರ್, 2 ಎಚ್ ಎಫ್‌ಎಂಸಿ, 30 ಮಂಚ, ಗಾದಿ, ಹೊದಿಕೆ, ಬೆಡ್ ಸೈಡ್ ಲಾಕರ್, ಐವಿ ಸ್ಟ್ಯಾಂಡ್, ಪಲ್ಸ್ ಆಕ್ಸಿಮೀಟರ್, 6 ಇಸಿಜಿ ಮಶೀನ್ ಸೇರಿದಂತೆ 50 ಲಕ್ಷ ರೂ. ಮೌಲ್ಯದ ಅಗತ್ಯ ವೈದ್ಯಕೀಯ ಉಪಕರಣಗಳು ನೀಡಿದ್ದು, ಫೌಂಡೇಶನ್ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅಲ್ಟ್ರಾಟೆಕ್ ಕಮ್ಯುನಿಟಿ ವೆಲ್‌ಫೇರ್ ಫೌಂಡೇಶನ್‌ನ ಹಿರಿಯ ಕಾರ್ಯನಿರ್ವಾಹಕ ಅದ್ಯಕ್ಷ ಸೂರ್ಯ ವೆಲ್ಲಾರಿ ಮಾತನಾಡಿ, ಜೇವರ್ಗಿ ಆಸ್ಪತ್ರೆಯಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಬಗ್ಗೆ ಆರೋಗ್ಯಾಧಿಕಾರಿ ಅವರಿಂದ ಮಾಹಿತಿ ಪಡೆದು, ನಮ್ಮ ಫೌಂಡೇಶನ್ ವತಿಯಿಂದ ಅಂದಾಜು 50 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣ ವಿತರಿಸಲಾಗಿದೆ. ತಾಲೂಕಿನ ಜನರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಅಲ್ಟ್ರಾಟೆಕ್ ಕಮ್ಯುನಿಟಿ ವೆಲ್‌ಫೇರ್ ಫೌಂಡೇಶನ್‌ನ ನಾರಾಯಣ, ರಾಜಶ್ರೀ ಸಿಮೆಂಟ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ| ಮೂಸ್‌ನಾಯ, ಅಬ್ದುಲ್ ನಜೀರ್, ಡಾ| ರಾಘವೇಂದ್ರ ಕುಲಕರ್ಣಿ, ಡಾ| ಶಿವಶಂಕರ, ಡಾ| ವಿಜಯ ಪಾಟೀಲ, ಡಾ| ಶಯನಾಜ್, ಡಾ| ಗೀತಾ, ಡಾ| ಅಜೀಜ್, ಶರಣು ಭೂಸನೂರ, ತಿಪ್ಪಣ್ಣ ಬಳಬಟ್ಟಿ, ಮಹಿಮೂದ್ ನೂರಿ, ಬಸಣ್ಣ ಸರ್ಕಾರ, ಉಸ್ಮಾನ್‌ಸಾಬ, ಗುಂಡು ಗುತ್ತೇದಾರ, ಮರೆಪ್ಪ ಸರಡಗಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.