ಮಸ್ಕಿ ದಳಪತಿಗೆ ಗಾಳ?
| ಸೋಮನಾಥ ನಾಯಕ ಜತೆ ಡಿಕೆಶಿ ಮಾತುಕತೆ
Team Udayavani, Nov 25, 2020, 5:00 PM IST
ಮಸ್ಕಿ: ಕಳೆದ 2018ರ ಸಾರ್ವತ್ರಿಕ ಚುನಾವಣೆ ವೇಳೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ರಾಜಾ ಸೋಮನಾಥ ನಾಯಕ ಮನೆಗೆ ದಿಢೀರ್ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊಸ ಸಂಚಲನ ಮೂಡಿಸಿದ್ದಾರೆ. ಸೋಮವಾರ ಆಯೋಜಿಸಿದ್ದ ಆರ್. ಬಸನಗೌಡ ತುರುವಿಹಾಳ ಪಕ್ಷ ಸೇರ್ಪಡೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಲಿಂಗಸುಗೂರು ಮೂಲಕ ಕಲಬುರಗಿಗೆ ತೆರಳುವ ಮಾರ್ಗ ಮಧ್ಯದ ಗುರುಗುಂಡಾದಲ್ಲಿರುವ ರಾಜ ಸೋಮನಾಥ ಅವರ ನಿವಾಸಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿ ಮಾತುಕತೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ನಾಯಕ, ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ಮಧ್ಯಸ್ಥಿತಿಕೆಯಲ್ಲಿ ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಮಸ್ಕಿ ಉಪಚುನಾವಣೆಯ ಸ್ಥಿತಿಗತಿ, ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳ ಕುರಿತು ಚರ್ಚೆ ಜತೆಗೆ ರಾಜಾ ಸೋಮನಾಥ ನಾಯಕಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಸೋಲಿಗೆ ಕಾರಣ: 2018ರ ಸಾರ್ವತ್ರಿಕ ಚುನಾವಣೆ ವೇಳೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ರಾಜಾ ಸೋಮನಾಥ ನಾಯಕ ಕಣಕ್ಕೆ ಇಳಿದಿದ್ದರಿಂದ 12 ಸಾವಿರ ಮತಗಳನ್ನು ಸೆಳೆದಿದ್ದರು.
ಇದನ್ನೂ ಓದಿ:ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಗೆಳೆಯರು ಒತ್ತಡ ಹಾಕದ್ದಾರೆ: ರಮೇಶ್ ಜಾರಕಿಹೊಳಿ
ಇದರ ಫಲವಾಗಿಯೇ ಆಗಿನ ಬಿಜೆಪಿ ಅಭ್ಯಥಿಯಾಗಿದ್ದ ಆರ್.ಬಸನಗೌಡ ತುರುವಿಹಾಳ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಆರ್.ಬಸನಗೌಡ ಸೋಲಿಗೆ ಜೆಡಿಎಸ್ ಅಭ್ಯರ್ಥಿಯೇ ಕಾರಣ ಎಂದು ಬಣ್ಣಿಸಲಾಗಿತ್ತು. ಹೀಗಾಗಿ ಈ ಬಾರಿ ಇಂತಹ ಪರಿಸ್ಥಿತಿ ಮರುಕಳಿಸಬಾರದು ಎನ್ನುವ ಕಾರಣಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದ ರಾಜಾ ಸೋಮನಾಥ ನಾಯಕಗೆಗಾಳ ಹಾಕಿದ್ದಾರೆ.
ನೇರವಾಗಿ ಅವರ ಮನೆಗೆ ಭೇಟಿ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆ, ತಮ್ಮ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈ ಬೆಳವಣಿಗೆ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
ಜೆಡಿಎಸ್ ಸ್ಪರ್ಧೆ ಇಲ್ಲ: ಪ್ರಸಕ್ತ ಉಪಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿಯುವ ತೀರ್ಮಾನಕ್ಕೆ
ಬಂದಿದೆ. ಸ್ಪರ್ಧೆ ಬಗ್ಗೆ ಸ್ವತಃ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂದಿನ ಅಭ್ಯರ್ಥಿಯಾಗಿದ್ದ ರಾಜಾ ಸೋಮನಾಥ ನಾಯಕರನ್ನು ಎರಡು ಮೂರು ಬಾರಿ ಸಂಪರ್ಕ ಮಾಡಿ ಸ್ಪರ್ಧೆ ಮಾಡಬಯಸುವಿರಾ ಎನ್ನುವ ಅಭಿಪ್ರಾಯ ಕೇಳಿದ್ದರು.
ಆದರೆ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಪರ್ಧೆ ಸದ್ಯಕ್ಕೆ ಬೇಡ. ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಯತ್ನ ಮಾಡುವುದಾಗಿ ರಾಜಾ ಸೋಮನಾಥ ನಾಯಕ ಪ್ರತಿಕ್ರಿಯಿಸಿದ್ದರು. ಹೀಗಾಗಿ ಪರ್ಯಾಯವಾಗಿಯೂ ಜೆಡಿಎಸ್‌ಗೆಇದುವರೆಗೆ ಯಾವ ಅಭ್ಯರ್ಥಿಯೂಸಿಕ್ಕಿಲ್ಲ. ಇದರಿಂದ ಈ ಬಾರಿ ಜೆಡಿಎಸ್ ಸ್ಪರ್ಧೆ ಬಹುತೇಕ ಅನುಮಾನ. ಹೀಗಾಗಿ ತಟಸ್ಥವಾಗಿ ಉಳಿಯುವ ಬದಲು ತಮಗೆ ಬೆಂಬಲಿಸುವಂತೆ ಡಿ.ಕೆ.ಶಿವಕುಮಾರ್‌ರಾಜಾ ಸೋಮನಾಥ ನಾಯಕಮನವೊಲಿಸಿದ್ದಾರೆ. ಆದರೆ ಇದು ಏನಾಗಲಿದೆ ಕಾದು ನೋಡಬೇಕಿದೆ
-ಮಲ್ಲಿಕಾರ್ಜುನ ಚಿಲ್ಕರಾಗಿ
ಬಿಜೆಪಿ, ಕಾಂಗ್ರೆಸ್‌ಎರಡು ಕಡೆಯಿಂದಲೂ ಆಹ್ವಾನವಿದೆ. ಆದರೆ ನಾನು ಯಾವಪಕ್ಷಕ್ಕೆ ಸೇರಬೇಕು ಎನ್ನುವ ನಿರ್ಧಾರ ಇನ್ನು ಮಾಡಿಲ್ಲ. ನಮ್ಮ ಬೆಂಬಲಿಗರ ಬಳಿ ಚರ್ಚೆ ಮಾಡುತ್ತೇನೆ. ಮಾಡುತ್ತೇನೆ. ಆದರೆ ಈ ಬಾರಿಚುನಾವಣೆಗೆ ಮಾತ್ರ ನಿಲ್ಲುವುದಿಲ್ಲ.
-ರಾಜಾ ಸೋಮನಾಥ, ನಾಯಕ, ಜೆಡಿಎಸ್ ಮುಖಂಡ,ಗುರುಗುಂಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.