ಫೋಸು ಕೊಡುವ ಲೀಡರ್‌ಗಳಾಗಬೇಡಿ: ಡಾ| ಮಲ್ಲಿಕಾರ್ಜುನ
Team Udayavani, Jan 29, 2018, 11:38 AM IST
ಕಲಬುರಗಿ: ದಿ| ವಿಠ್ಠಲ ಹೇರೂರ ನಂತರದಲ್ಲಿ ಕೋಲಿ ಸಮಾಜಕ್ಕೆ ಯಾರೂ ನಾಯಕರಿಲ್ಲ. ಈಗ ಆಗುತ್ತೇನೆ ಎಂದು
ಘೋಷಿಸಿಕೊಂಡವರು ಕೇವಲ ಫೋಸು ನೀಡುವ ಲೀಡರ್‌ಗಳೇ ಹೆಚ್ಚು. ಆದ್ದರಿಂದ ಫೋಸು ನೀಡುವ ನಾಯಕರಾಗುವ ಬದಲು ಜನ ಮೆಚ್ಚೋ ನಾಯಕರಾಗಿ ಎಂದು ಅಖೀಲ ಕರ್ನಾಟಕ ಸ್ನೇಹ ಗಂಗಾವಾಹಿನಿ ಕಾರ್ಯಾಧ್ಯಕ್ಷ ಡಾ| ಮಲ್ಲಿಕಾರ್ಜುನ ಮುಕ್ಕಾ ಹೇಳಿದರು.
ನಗರದ ಕೋರ್ಟ್ ರಸ್ತೆಯ ವಿಶ್ವೇಶ್ವರಯ್ಯ ಇಂಜಿನಿಯರ್ ಭವನದಲ್ಲಿ ರವಿವಾರ ಜಿಲ್ಲಾ ಕೋಲಿ (ಕಬ್ಬಲಿಗ) ನೌಕರರ
ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಾವೇಶ ಹಾಗೂ ಸ್ನೇಹ ಸಂಗಮ ಪರಿಚಯ ಗ್ರಂಥ ಬಿಡುಗಡೆ ಸಮಾರಂಭದಲ್ಲಿ
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ವಿಠ್ಠಲ ಹೇರೂರು ಬಯ್ಯುತ್ತಿದ್ದರು ಎನ್ನುವ ಮಾತು ಇದೆಯಲ್ಲ ಅದು
ಇದಕ್ಕಾಗಿಯೇ.. ಯಾರೂ ಜಾತಿಯಿಂದೇಳುತ್ತ ಸುಳ್ಳುಗಳನ್ನು ಹೇಳಬೇಡಿ. ಮೋಸ ಮಾಡಬೇಡಿ ಎನ್ನುತ್ತಿದ್ದರು. ಅದನ್ನು ಅಗರಿಸಿಕೊಳ್ಳಲಾಗದ ಕೆಲವರು ಅವರಿಗೆ ಮುಳ್ಳುವಾದರು ಎಂದು ಹೇಳಿದರು. ನಾವೇನು ನೌಕರರು ಏನು ಮಾಡಲು ಸಾಧ್ಯ ಎನ್ನುವ ಮನೋಭಾವ ಸರಿಯಲ್ಲ. ನಿರಂತರವಾಗಿ ಸಭೆ ಮಾಡಿ ಒಂದೆಡೆ ಕೂಡುವುದರಿಂದ ಬೆಳೆಯುವ ಆಲೋಚನೆ ಬೆಳೆಯುತ್ತದೆ. ನೌಕರರು ತಮ್ಮ ಕುಟಂಬದ ಸದಸ್ಯರ ಯೋಗಕ್ಷೇಮ ನೋಡಿಕೊಳ್ಳಬೇಕು. ಹೋರಾಟ, ರ್ಯಾಲಿಗಳಿಗೆ ಸಹಕಾರ ನೀಡಿ ಇದರಿಂದ ಸಮಾಜಮುಖೀಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಲೋಕಸೇವಾ ಆಯೋಗ ಸದಸ್ಯೆ ಡಾ| ನಾಗಾಬಾಯಿ ಬಿ. ಬುಳ್ಳಾ ಮಾತನಾಡಿ, ನಮ್ಮ ಸಮಾಜದಲ್ಲಿ ಈಗೀಗ ಸಾಧಕರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತರೂ ಒಂದುಕಡೆ ಕುಳಿತು ವಿಚಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಲಬುರಗಿ ನಗರದಲ್ಲಿ ವಸತಿ ನಿಲಯ ಮಾಡಿ. ನೌಕರರ ಭವನ ನಿರ್ಮಿಸಿ ಕೋಚಿಂಗ್
ಅಕಾಡೆಮಿ ಸ್ಥಾಪಿಸಬೇಕು. ಇದೆಲ್ಲವನ್ನು ನೌಕರರ ಸಂಘದಿಂದಲೇ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ಕೋಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ
ಬಾಬುರಾವ ಜಮಾದಾರ, ಆಳಂದ ಡಿವೈಎಸ್‌ಪಿ ಪಿ.ಕೆ. ಚೌಧರಿ, ಎನ್‌ಈಕೆಆರ್‌ಟಿಸಿ ಕೋಲಿ ನೌಕರರ ಸಂಘದ ಅಧ್ಯಕ್ಷ ಸುಭಾಷ ಆಲೂರ, ಶಾಂತಪ್ಪ ಹೇರೂರ, ಸೂರ್ಯಕಾಂತ ಗುಡ್ಡಡಗಿ, ನಾಮದೇವ ಕಡಕೋಳ, ಸಿದ್ದಪ್ಪ ಮಹಾಗಾಂವ, ಭೀಮರಾಯ ಅರಕೇರಿ, ಜಯಾನಂದ ಜಮಾದಾರ, ಈರಣ್ಣ ಡಾಂಗೆ, ಜಯಪ್ಪ ಚಾಪಲ್, ಚಂದ್ರಾಮ ಅಮೀನಗಡ, ದೇವಿಂದ್ರ ಆನೆಗುಂದಿ, ಅಮೃತ ಮಾಲಿಪಾಟೀಲ, ಬಿಚ್ಚಪ್ಪ ಬೆಡಕಪಲ್ಲಿ, ಸಂತೋಷ ಬೆಳಗುಂಪಿ ಇದ್ದರು. ಮೌಂಟ್ ಎವರೆಸ್ಟ್ ಶಿಖರ ಏರಿದ ಶ್ರೀಧರ ಗುಗ್ಗರಿ, ಶ್ರೀಧರ ಗದ್ವಾಲ ಹಾಗೂ ಪಿಎಚ್‌ಡಿ ಪದವಿ ಮಾಡಿದಮಹೇಶ್ವರಿ ಲಕ್ಷ¾ಣ ಮೈನಾಳ, ಡಾ| ಸ್ವರೂಪರಾಣಿ ಚನ್ನಪ್ಪ ಮುನ್ನೋಳ್ಳಿ, ಹರಿಶ್ಚಂದ್ರ ಎಸ್. ಬಿದನೂರಕರ, ಡಾ| ಮರಿಯಮ್ಮ ಶ್ರೀಶೈಲ, ಡಾ| ಪ್ರಿಯದರ್ಶಿನಿ ಚಿಂಚನಸೂರ, ಜಗನ್ನಾಥ ಗುಂಡಪ್ಪ ಕಾವಲೆ, ಭೀಮಾಶಂಕರ ಡಾಂಗೆ, ಕು.ಭಾಗ್ಯಶ್ರೀ ಎಸ್. ವಡಗೇರಿ, ಲತಾ ಬಸವರಾಜ ಖೇಳಗಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಕಾರಾಮ ಚಿತ್ತಾಪುರ
ಸ್ವಾಗತಿಸಿದರು. ಧರ್ಮರಾಜ ಜವಳಿ ನಿರೂಪಿಸಿದರು.ಸಿದ್ದಣ್ಣ ಮುಕರಂಬಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.