ಸುಳ್ಳು ಭರವಸೆ ನಂಬಬೇಡಿ: ಗುತ್ತೇದಾರ
Team Udayavani, May 11, 2018, 11:29 AM IST
ಆಳಂದ: ಪಟ್ಟಣದಲ್ಲಿ ಗುರುವಾರ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ರೋಡ್ ಶೋ ನಡೆಸಿ
ಮತಯಾಚಿಸಿದರು. ಪಟ್ಟಣದ ಹನುಮಾನ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಗಣೇಶ ಚೌಕ್, ಅಂಬಾಭವಾನಿ ದೇವಸ್ಥಾನ, ರಜ್ವಿ ರೋಡ್, ಬಸ್ ನಿಲ್ದಾಣದಿಂದ ಶ್ರೀರಾಮ ಮಾರುಕಟ್ಟೆವರೆಗೆ ನಡೆಯಿತು.
ನಂತರ ಮಾತನಾಡಿದ ಅವರು, ಸುಳ್ಳು ಹೇಳುವ ಶಾಸಕ ಬಿ. ಆರ್. ಪಾಟೀಲ ಅವರನ್ನು ಜನ ಈ ಬಾರಿ ಮನೆಗೆ ಕಳುಹಿಸುವ ದೃಢನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮತದಾರರು ಸುಳ್ಳು ಭರವಸೆಗಳನ್ನು ನಂಬಬಾರದು ಎಂದು ಹೇಳಿದರು.
ಹಾಲಿ ಶಾಸಕರು ಐದು ವರ್ಷಗಳ ಕಾಲ ಜನರಿಗೆ ಭರವಸೆ ಮಾತ್ರ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೀಡಿದ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ. ಸಾಮರಸ್ಯದಿಂದ ಬದುಕುತ್ತಿದ್ದ ತಾಲೂಕಿನ ಜನತೆಯಲ್ಲಿ ಜಾತಿ, ಧರ್ಮಗಳ ವಿಷ ಬೀಜ ಬಿತ್ತಿ ಒಡೆದು ಆಳುವ ಪ್ರವೃತ್ತಿಗೆ ಕೈ ಹಾಕಿದ್ದಾರೆ. ಹೋದಲ್ಲೆಲ್ಲ ಜಾತಿ ಹೆಸರು ಹೇಳಿ ಮತ ಕೇಳುತ್ತಿರುವುದು ಅವರ ಅಸಲಿ ಮುಖ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ತಾಲೂಕಿನಲ್ಲಿ ಬಿಜೆಪಿ ಜತೆಗೆ ಎಲ್ಲ ವರ್ಗದ ಜನರು ನಿಂತಿರುವುದನ್ನು ನೋಡಿ ಅವರಲ್ಲಿ ಅಸೂಯೆ ಹುಟ್ಟಿದೆ. ಹೀಗಾಗಿ ಸುಳ್ಳು ಸುದ್ದಿ ಹರಡಿಸಿ ಮತ ಪಡೆಯುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಭೀಮಾಶಂಕರ ಪಾಟೀಲ, ರಮ್ಮು ಅನ್ಸಾರಿ, ಲಿಂಗರಾಜ ಬಿರಾದಾರ,
ವೆಂಕಟರಾವ್, ಅಸೀಫ್ ಅನ್ಸಾರಿ, ಪರಮೇಶ್ವರ ಹತ್ತರಕಿ, ಈರಣ್ಣ ಹತ್ತರಕಿ, ಮಹೇಶ ಗೌಳಿ, ಶಿವಪುತ್ರ ಹತ್ತಿ, ಗುಂಡು
ಗೌಳಿ, ಸುನೀಲ ನಿಪ್ಪಾಣಿ, ಹಣಮಂತ ಕುಂಬಾರ, ಶ್ರೀಶೈಲ ಖಜೂರಿ, ಅರುಣ ಹುಂಡೇಕಾರ, ಅರವಿಂದ ನಾಟೀಕಾರ,
ರಮೇಶ ಉಂಬರೆ, ಅಂಬಾದಾಸ ಪವಾರೆ, ಸುನೀಲ ಹಿರೋಳಿ, ಯೂನುಸ್ ಅನ್ಸಾರಿ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.