ಆಲಸ್ಯ ಬಿಟ್ಟು ತಪ್ಪದೇ ಮತದಾನ ಮಾಡಿ
Team Udayavani, Apr 8, 2018, 4:55 PM IST
ಕಲಬುರಗಿ: ನಾನು ಮತದಾನ ಮಾಡದಿದ್ದರೆ ಅಥವಾ ನನ್ನ ಒಂದು ಮತದಾನದಿಂದ ಏನಾದೀತು ಎಂಬ ಆಲಸ್ಯತನ ಬಿಟ್ಟು, ಮೇ 12ರಂದು ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪ್ರೋಬೇಷನರ್ ಐ.ಎ.ಎಸ್. ಅಧಿಕಾರಿ ಆಕೃತಿ ಸಾಗರ ಕರೆ ನೀಡಿದರು.
ನಗರದ ಇಎಸ್‌ಐಸಿ ಆಸ್ಪತ್ರೆ ಆಡಿಟೋರಿಯಂ ಸಭಾಂಗಣದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನಿರಂತರ ವೈದ್ಯಕೀಯ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಗರ ನಿವಾಸಿಗಳು ಮತದಾನ ದಿನದಂದು ರಜಾ
ದಿನವನ್ನಾಗಿ ಪರಿಗಣಿಸಿ ಮತದಾನದಿಂದ ವಿಮುಖರಾಗುತ್ತಿರುವುದು ಉತ್ತಮ ನಾಯಕರನ್ನು ಆಯ್ಕೆ ಮಾಡುವ ಅವಕಾಶದಿಂದ ತಪ್ಪಿಸಿಕೊಂಡಂತೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿದೆ. ಆದರೆ ನಗರ ಪ್ರದೇಶದಲ್ಲಿ ಮತದಾರರು ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಾರದಿರುವುದು ವಿಷಾಧನೀಯ.
ಇದರಿಂದಲೆ ರಾಜಧಾನಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತುಂಬಾ ಕಡಿಮೆ ಇದೆ. ಉತ್ತಮ ನಾಯಕರ ಆಯ್ಕೆಗೆ ಪ್ರತಿ ಮತ ಇಲ್ಲಿ ಮುಖ್ಯ ಎಂಬುದನ್ನು ಪ್ರಜೆಗಳು ಮನಗಾಣಬೇಕು ಎಂದು ಹೇಳಿದರು. ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ವೀಪ್ ಸಮಿತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಮತದಾನದ ಹಕ್ಕು ತಿಳಿಸಲು ಹಮ್ಮಿಕೊಂಡಿರುವ
ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಇಎಸ್‌ಐಸಿ ಮೆಡಿಕಲ್ ಕಾಲೇಜಿನ ಡೀನ್ ಡಾ| ಪ್ರಶಾಂತ ಪೌನಿಪಗಾರ, ಆಸ್ಪತ್ರೆ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ| ಎಚ್.ಎಸ್. ಕಡ್ಲಿಮಟ್ಟಿ, ಉಪನಿರ್ದೇಶಕ(ಆಡಳಿತ) ವಿಜಯಕುಮಾರ, ಜಿಲ್ಲಾ ಆರ್.ಸಿ. ಎಚ್. ಅಧಿಕಾರಿ ಡಾ| ಎ.ಎಸ್. ರುದ್ರವಾಡಿ, ಸುವರ್ಣಾ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಪ್ರಾದೇಶಿಕ ಸಂಯೋಜಕ ಡಾ|ಅಲಿ ಬಾಬಾ, ಎಂ.ಆರ್. ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಕೆ.ಎಂ.ಸಿ. ವೀಕ್ಷಕಿ ಡಾ| ರೂಪಾ, ಡಾ| ಅನೀಲ ತಾಳಿಕೋಟಿ, ಡಾ|ವಿನೋದ ಕಾಂಬ್ಳೆ, ಡಾ| ಐ. ಅಮೃತಾ ಸ್ವಾತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.