ಕ್ಷುಲ್ಲಕ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಬೇಡಿ
Team Udayavani, Nov 22, 2018, 11:17 AM IST
ಆಳಂದ: ಕುಟುಂಬ ಅಥವಾ ಸಮಾಜದಲ್ಲಿ ನಡೆಯುವ ಕ್ಷುಲ್ಲಕ ಕಾರಣಗಳಿಗೆ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರುವುದು
ಸರಿಯಲ್ಲ. ನಿಜವಾಗಿಯೂ ಅನ್ಯಾಯವಾಗಿದ್ದರೆ ಕಾನೂನಿನ ಮೊರೆ ಹೋಗಬೇಕು ಎಂದು ಸ್ಥಳೀಯ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಪ್ರಕಾಶ ಸಿ.ಡಿ. ಹೇಳಿದರು.
ಪಟ್ಟಣದ ಮುನ್ನೋಳಿ ರಸ್ತೆಯಲ್ಲಿರುವ ಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ, ವಿಶ್ವ ಕಾನೂನು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸಾರ ಅಂದ ಮೇಲೆ ಗಂಡ, ಹೆಂಡತಿ ನಡುವೆ ಜಗಳ ಆಗುವುದು ಸಹಜ. ಅನಾವಶ್ಯಕ ಕ್ಷುಲಕ ಕಲಹಗಳನ್ನು ದೊಡ್ಡದಾಗಿ ಮಾಡದೇ, ಪರಸ್ಪರ ಅರ್ಥಮಾಡಿಕೊಂಡು ನಡೆದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ನಿಜವಾಗಿ ಅನ್ಯಾಯವಾಗಿದ್ದರೆ ಹೆಣ್ಣು ಮಕ್ಕಳಿಗಾಗಿ ಸರ್ಕಾರದ ಸೌಲಭ್ಯಗಳಿವೆ. ಅನ್ಯಾಯ, ಅತ್ಯಾಚಾರದ ವಿರುದ್ಧ ಕ್ರಮ
ಕೈಗೊಳ್ಳಲು ಕಾನೂನು ಬೆನ್ನೆಲುಬಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕಿರಿಯ ಶ್ರೇಣಿ ನ್ಯಾಯಾಧೀಶ ಗುರುಪ್ರಸಾದ ಸಿ. ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ ನಡೆದರೆ ಕಾನೂನಿಂದ ರಕ್ಷಣೆ ಪಡೆಯಬೇಕು ಎಂದರು.
ಹೆಣ್ಣು ಮಕ್ಕಳ ಕುರಿತು ನ್ಯಾಯವಾದಿ ಎಸ್‌ಒ ಮುನ್ನೋಳ್ಳಿ, ಕಾನೂನು ಅರಿವು ನೆರವು ಕುರಿತು ನ್ಯಾಯವಾದಿ ಡಿ.ಎಸ್.ನಾಡಕರ್, ಹೆಣ್ಣು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇರುವ ಸೌಲಭ್ಯ ಕುರಿತು ಇಲಾಖೆ ಮೇಲ್ವಿಚಾರಕಿ ಮಹಾದೇವಿ ವಚ್ಛೆ ಮಾತನಾಡಿದರು. ನ್ಯಾಯವಾದಿ ಸಂಘದ ಅಧ್ಯಕ್ಷ ಬಾಬಾಸಾಹೇಬ ವಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ, ಸರ್ಕಾರಿ ಸಹಾಯಕ ಅಭಿಯೋಜಕ ಮುಕುಂದ ದೇಶಪಾಂಡೆ, ಸಂಘದ ಕಾರ್ಯದರ್ಶಿ ಬಿ.ಎಸ್. ನಿಂಬರಗಿ, ಕಾನೂನು ಸೇವಾ ಸಮಿತಿಯ ಬಸವಣ್ಣಪ್ಪ ಗುಡ್ಡೆವಾಡ, ನ್ಯಾಯವಾದಿಗಳಾದ ದೇವಾನಂದ ಹೋದಲೂರಕರ್, ಬಾಪುರಾವ್ ಪವಾರ, ಎಂ.ವಿ. ಎಕಬೋಟೆ, ಬಿ.ಜಿ.ಬೀಳಗಿ ಇದ್ದರು. ಶ್ರೀಶೈಲ ಮುಲಗೆ ನಿರೂಪಿಸಿದರು, ಬಲಭೀಮ ಶಿಂಧೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.